ಸುದೀಪ್ ಜೊತೆ ನಟಿಸ್ತಾರಾ
ಶಿವಣ್ಣ?
ಕಳೆದ ವಾರ ಸಟ ಸುದೀಪ್
ಅಭಿನಯ ‘ರನ್ನ’ ಚಿತ್ರ ಬಿಡುಗಡೆಗೊಂಡಿದ್ದು
ಬಾಕ್ಸ್ಆಫೀಸ್ನ್ನು ಕೊಳ್ಳೆ
ಹೊಡೆಯುತ್ತಿದೆ. ಇದೇ ಸಂದರ್ಭದಲ್ಲಿ ಸುದೀಪ್
ಅವರು ಖಾಸಗಿ ವಾಹಿನಿಗೆ ನೀಡಿದ
ಸಂದರ್ಶನದಲ್ಲಿ ಮಾತನಾಡಿ ನಾನು ಮತ್ತು
ಶಿವಣ್ಣ ಒಳ್ಳೆಯ ಸ್ನೇಹಿತರು. ನಾನು
ಕಾಲೇಜು ದಿನಗಳಿಂದ ಶಿವಣ್ಣ ಅವರ ಚಿತ್ರವನ್ನು
ನೋಡಿ ಬೆಳೆದವನು ಎಂದು ಹೇಳಿದ್ದರು.
ನಟ ಶಿವರಾಜ್ ಕುಮಾರ್ ಅವರು
ತಾನು ನಟಿಸುತ್ತಿರುವ ಮುಂದಿನ
ವಾರ ತೆರೆ ಕಾಣಬೇಕಾದ ‘ವಜ್ರಕಾಯ’
ಸಿನಿಮಾದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ
ಮಾತನಾಡುತ್ತಾ ‘ನಾನು ಮತ್ತು ಸುದೀಪ್
ಒಳ್ಳೆಯ ಸ್ನೇಹಿತರು. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎನ್ನುವುದು
ಕೇವಲ ಗಾಳಿಸುದ್ದಿ. ಇದನ್ನು ಅಭಿಮಾನಿಗಳು ನಂಬಬೇಡಿ’
ಎಂದು ಹೇಳಿದ್ದಾರೆ.
ನಮ್ಮ ನಡುವೇ ಯಾವುದೇ ರೀತಿಯಲ್ಲಿ
ಸ್ಟಾರ್ವಾರ್ ಇಲ್ಲ. ಈ
ಹಿಂದೆ ಸುದೀಪ್ ನಿರ್ದೇಶಿಸಿದ್ದ ‘ಶಾಂತಿನಿವಾಸ’ಚಿತ್ರದಲ್ಲಿಯೂ ಪೋಷಕ ನಟನಾಗಿ ನಾನು
ಕಾಣಿಸಿಕೊಂಡಿದ್ದೆ. ನಮ್ಮ ಕುಟುಂಬದ ಬಗ್ಗೆ
ಸುದೀಪ್ ಅವರಿಗೆ ತುಂಬಾನೇ ಗೌರವವಿದೆ.
ನನ್ನ ಪತ್ನಿ ಗೀತಾ ಮಾಡುವ
ಅಕ್ಕಿರೊಟ್ಟಿ ಎಂದರೆ ಸುದೀಪ್ಗೆ
ತುಂಬಾ ಇಷ್ಟ ಎಂದಿದ್ದಾರೆ.
ನನ್ನ ನಟನೆಯ ‘ವಜ್ರಕಾಯ’ ಚಲನಚಿತ್ರವನ್ನು
ವೀಕ್ಷಿಸಲು ಸುದೀಪ್ ಅವರನ್ನು ನಾನು
ಆಹ್ವಾನಿಸುತ್ತೇನೆ ಎಂದ ಶಿವರಾಜ್ ಕುಮಾರ್
ಈ ಹಿಂದೆಯೇ ನಾನು
ಮತ್ತು ಸುದೀಪ್ ಒಟ್ಟಾಗಿ ತೆರೆ
ಮೇಲೆ ಕಾಣಿಸಿಕೊಳ್ಳುವ ಯೋಜನೆ ಇತ್ತು ಎಂದು
ತಿಳಿಸಿದ್ದಾರೆ. ನಮ್ಮ ನಡುವಿನ ಗಾಸಿಪ್ಗೆ ಸೋಶಿಯಲ್ ಮೀಡಿಯಾ
ಮುಖ್ಯ ಕಾರಣ. ಏನೇ ಗಾಳಿ
ಸುದ್ದಿ ಇದ್ದರೂ ನಾವೆಲ್ಲರೂ ಒಂದೇ
ಎನ್ನುವ ಮಾತನ್ನು ನಟ ಶಿವಣ್ಣ
ಹೆಳಿದ್ದಾರೆ.


Comments
Post a Comment