ರಾಗ 'ಅನು'ರಾಗ ಮೊಗ ತುಂಬ ನಗು. ಮಧುರ ಕಂಠ. ಗಾಯನದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ಯ. ಇದರೊಡನೆ ಸದ್ದಿಲ್ಲದೆ ಅಭಿಮಾನಿ ವರ್ಗ ಸಂಪಾದಿಸುತ್ತಿರುವ ಈ ಕರಾವಳಿ ಮೂಲದ ಗಾಯಕಿ ಅನುರಾಧ ಭಟ್. ಹೌದು, ದಕಿಣಕನ್ನಡ ಜಿಲ್ಲೆಯ ಮಂಗಳೂರಿನ ಬೊಂದೆಲ್‌ನ ನಿವಾಸಿ ಶ್ರೀಕೃಷ್ಣ ಭಟ್ ಮತ್ತು ಗಾಯತ್ರೀ ದಂಪತಿಯರ ಪುತ್ರಿಯಾದ ಅನುರಾಧ ಭಟ್‌ಗೆ ಸಂಗೀತವೇ ಸರ್ವಸ್ವ. ಈ ಲೋಕದಲ್ಲಿ ಈಕೆಗೆ ಎಷ್ಟು ಒಲವಿತ್ತೆಂದರೆ ಪದವಿ ಮುಗಿಸಿದ ಬಳಿಕ ಪ್ರತಿಷ್ಟಿತ ಕಂಪನಿಯಲ್ಲಿ ಈಕೆಗೆ ಉದ್ಯೋಗ ದೊರಕಿತು. ಆದರೆ ಸಂಗೀತ ಕ್ಷೇತ್ರದ ಸೆಳೆತ ಹೆಚ್ಚಿದ್ದುದರಿಂದ ಸಿಕ್ಕ ಅವಕಾಶಕ್ಕೆ ಬ್ರೇಕ್ ಹಾಕಿ ತನ್ನನ್ನು ಸಂಪೂರ್ಣವಾಗಿ ಸಂಗೀತ ಲೋಕದಲ್ಲಿ ತೊಡಗಿಸಿಕೊಂಡಳು. ಚಿಕ್ಕಂದಿನಲ್ಲಿ ಈಕೆಗೆ ಮೊದಲು ಕಣ್ಣು ಬಿದ್ದದ್ದು ಶಾಸ್ತ್ರೀಯ ಕಲೆ ಭರತನಾಟ್ಯ. ಬಾಲ್ಯದಲ್ಲಿ ’ಸಾಗರ ಸಂಗಮ’ ಎಂಬ ಚಲನಚಿತ್ರವನ್ನು ವೀಕ್ಷಿಸುತ್ತಿದ್ದ ಈಕೆ ಆ ಪಾರ್ಥದ ತರೇನ ಮುದ್ರಾ ಬಂಗಿಯನ್ನು ಪ್ರದರ್ಶ...