ಮನ’ಮೋಹನ’ ಸಂಕಲನ
ಒಂದು ಚಲನಚಿತ್ರವನ್ನು ಎರಡು ಘಂಟೆ ನೋಡಿ
ನಾವು ಆನಂದ ಪಡ್ತೀವಿ. ಆದರೆ
ಆ ರೀತಿ ಮೂಡಿ
ಬರಲು ತಂತ್ರಜ್ಞರ ಸಹಕಾರ ಬಹುಮುಖ್ಯ. ಅದರಲ್ಲಿ
ಎಡಿಟಿಂಗ್ ಕೆಲಸವಿಲ್ಲದಿದ್ದರೆ ಚಲನಚಿತ್ರವು ಸಂಪೂರ್ಣವಾಗಲಾರದು. ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ
ಪ್ರತಿಭಾವಂತ ಸಂಕಲನಕಾರರಿದ್ದಾರೆ ಅಂತಹವರ ಪೈಕಿ ಮೋಹನ್
ಕಾಮಾಕ್ಷಿ ಕೂಡಾ ಒಬ್ಬರು.
ಮೂಲತಃ ಬೆಂಗಳೂರಿನವರಾದ ಇವರಿಗೆ
ನಿರ್ದೇಶಕರಾಗಬೇಕೆಂಬ ಅತೀವ ಆಸಕ್ತಿ ಇತ್ತು.
ಆದರೆ ಇಳಿದದ್ದು ಎಡಿಟಿಂಗ್ ವಿಭಾಗಕ್ಕೆ, ಆದರೇನಂತೆ ಅಲ್ಲೂ ಸಕ್ಸಸ್. ಮೋಹನ್
ಕಾಮಾಕ್ಷಿ ಅವರು ‘ಡೈರೆಕ್ಟರ್ ಸ್ಪೆಷಲ್’
ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ
ಮಾಡಿದ್ದಾರೆ. ಜೊತೆ ಇವರ ನಿರ್ದೇಶನದ
ಹೊಸದೊಂದು ಚಿತ್ರದ ಮಾತುಕತೆ ಕೂಡಾ
ನಡೆಯುತ್ತಿದೆ. ‘ಹುಡುಗರು’, ‘ಯಾರೇ ಕೂಗಾಡಲಿ’ ಚಲನಚಿತ್ರದ
ಮೂಲ ತಮಿಳು ಭಾಷೆಯಾಗಿದ್ದು ಈ
ಭಾಷೆಯಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಇವರ
ಪ್ರತಿ ಕೆಲಸದ ಹಿಂದೆ ತಂದೆ
ವರದರಾಜ್ ತಾಯಿ ಅಣ್ಣಮ್ಮ ಮತ್ತು
ಪತ್ನಿ ಧನಲಕ್ಷ್ಮೀ ಅವರ ಪ್ರೋತ್ಸಾಹವಿದೆ. ಬಹುಮುಖ
ಪ್ರತಿಭೆಯಾದ ಮೋಹನ್ ಕಾಮಾಕ್ಷಿ ಅವರು
ತಮ್ಮ ಮನದಾಳದ ಮಾತನ್ನು ‘ಬಾಲ್ಕನಿ
ಡಾಟ್ ಕಾಮ್’ಜೊತೆಹಂಚಿಕೊಂಡದ್ದು ಹೀಗೆ:
ಸಂಕಲನ ಕ್ಷೇತ್ರದಲ್ಲಿ ನಿಮಗೆ
ಆಸಕ್ತಿ
ಹುಟ್ಟಿದ್ದು
ಹೇಗೆ?
ಚಿಕ್ಕಂದಿನಲ್ಲೂ
ಸಿನಿಮಾದ ಬಗ್ಗೆ ನನಗೆ ಅತಿಯಾದ
ಒಲವು. ನಿರ್ದೇಶಕನಾಗಬೇಕೆಂದು ಚಲನಚಿತ್ರ ಕ್ಷೇತ್ರಕ್ಕೆ ಬಂದೆ. ಆದರೆ ಇಲ್ಲಿ
ಕೆಲ ನಿರ್ದೇಶಕ-ಸಹನಿರ್ದೆಶಕರ ದಿನಚರಿಯನ್ನು ನೋಡಿದೆ. ಏನೂ ತಿಳಿಯದೆ
ಈ ಕ್ಷೇತ್ರಕ್ಕೆ ಬರುವುದಕ್ಕಿಂತ
ಟೆಕ್ನಿಕಲ್ ಆಗಿ ತಿಳಿದುಕೊಂಡು ಬಂದರೆ
ಉತ್ತಮ ಎಂದು ಗೊತ್ತಾಯ್ತು. ಆದ್ದರಿಂದ
ಮೊದಲು ಎಡಿಟಿಂಗ್ ಕಲಿತು ಸಿನಿಮಾ ಇಂಡಸ್ಟ್ರೀಗೆ
ಬಂದೆ.
ಈ ಹಿಂದೆ ಯಾವೆಲ್ಲಾ
ಚಲನಚಿತ್ರಗಳಿಗೆ
ಎಡಿಟಿಂಗ್
ಮಾಡಿದ್ದೀರಿ?
ತುಂಬಾ ಕಿರುಚಿತ್ರ ಡಾಕ್ಯುಮೆಂಟರಿ ಮಾಡಿದ್ದೇನೆ. ನನ್ನ ಮೊದಲನೇ ಚಿತ್ರ
ಎಂದರೆ ‘ಮುಸ್ಸಂಜೆ ಮಾತು’. ಈ ಚಿತ್ರದಲ್ಲಿ
ಸಹ ಸಂಕಲನಕಾರನಾಗಿ ಕೆಲಸ ನಿರ್ವಹಿಸಿದ್ದೇನೆ. ನಂತರ
‘ಇನಿಯಾ’ ಎಂಬ ಚಿತ್ರಕ್ಕೆ ಸಂಕಲನ
ಮಾಡಿದ್ದೇನೆ. ಇಷ್ಟಲ್ಲದೆ ಗಿರೀಶ್ ಕಾಸರವಳ್ಳಿ ಅವರ
ನಿರ್ದೇಶನದಲ್ಲಿ ‘ಯು. ಆರ್. ಅನಂತ
ಮೂರ್ತಿ’ ಅವರ ಬಗ್ಗೆ ಡಾಕ್ಯುಮೆಂಟರಿಗೆ
ಸಂಕಲನ ಮಾಡಿದ್ದೇನೆ. ಜೊತೆಗೆ ‘ಅಡೂರು ಗೋಪಾಲ
ಕೃಷ್ಣನ್’, ‘ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ’
ಅವರ ಬಗೆಗಿನ ಡಾಕ್ಯುಮೆಂಟರಿಗೂ ಎಡಿಟಿಂಗ್
ಮಾಡಿದ್ದೆ. ಅಂದು ಬಿಡುಗಡೆಗೊಂಡ ‘ಘಟಶ್ರಾದ್ಧ’,
‘ಸಂಸ್ಕಾರ’, ‘ಚೋಮನ ದುಡಿ’, ‘ಗೋಧೂಳಿ’,
‘ಸಂಕಲ್ಪ’, ‘ಗೃಹಭಂಗ’, ‘ಕಥೆಗಾರ’ ಮುಂತಾದ ರಾಷ್ಟ್ರೀಯ
ಪ್ರಶಸ್ತಿ ಬಾಚಿದ ಚಿತ್ರಗಳಿಗೆ ಇಂದು
ಮರು ಜೋಡಣೆಯ ಕೆಲಸ ನಿರ್ವಹಿಸಿದ್ದೇನೆ.
ಸದ್ಯ ಯಾವೆಲ್ಲಾ ಚಿತ್ರಗಳ
ಆಫರ್
ಇದೆ?
ನಟಿ ಅಪೂರ್ವ ಕಾಸರವಳ್ಳಿ ಅವರ
ನಿರ್ದೇಶನದ ನಟಿ ಭಾವನ ಅವರ
ಪ್ರೊಡಕ್ಷನ್ನಲ್ಲಿ ‘ನಿರುತ್ತರ’ ಎಂಬ
ಚಿತ್ರಕ್ಕೆ ಎಡಿಟಿಂಗ್ ಮಾಡ್ತಾ ಇದ್ದೇನೆ. ಜೊತೆಗೆ
‘ಪ್ರೀತಿ ಕಿತಾಬು’ ಎಂಬ ಚಿತ್ರ
ಬಿಡುಗಡೆಯಾಗಬೇಕಿದೆ. ಇನ್ನೊಂದು ಚಿತ್ರದ ಮಾತುಕತೆ ನಡೆಯುತ್ತಿದೆ.
ಒಂದು ಚಿತ್ರದ ಎಡಿಟಿಂಗ್
ನಡೆಸುವಾಗ
ಏನೆಲ್ಲಾ
ಅಂಶವನ್ನು
ಗಮನದಲ್ಲಿರಿಸುತ್ತೀರಿ?
ನಾನು ಕಂಟೆಂಟ್ಗೆ ತುಂಬಾ
ಪ್ರಾಮುಖ್ಯ ಕೊಡುತ್ತೇನೆ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಚಲನಚಿತ್ರಕ್ಕೆ ರೂಪವನ್ನು
ನೀಡುತ್ತೇನೆ.
ತೆರೆ ಹಿಂದೆ ಕೆಲಸ
ಮಾಡೋ
ನಿಮಗೆ
ಯಾವತ್ತಾದರೂ
ತೆರೆ
ಮುಂದೆ
ಕಾಣಿಸಿಕೊಳ್ಳಬೇಕು
ಎಂದು
ಅನಿಸಿಲ್ಲವೆ?
ಇಲ್ಲ
.. ಅದು ನನ್ನ ಕಪ್ ಆಫ್
ಟೀ ಅಲ್ಲ. ತೆರೆ ಮುಂದೆ
ಕೆಲಸ ಮಾಡುವಷ್ಟು ಪ್ರತಿಭೆ ನನ್ನಲ್ಲಿಲ್ಲ. ನಮ್ಮ
ಲಿಮಿಟೇಷನ್ನಲ್ಲೇ ಕೆಲಸ ಮಾಡಬೇಕು.
ನಮ್ಮದಲ್ಲದ್ದನ್ನು ನಾವು ಮಾಡೋದಕ್ಕೆ ಹೋಗಬಾರದು
ಎಂಬೋದು ನಾನು ತಿಳಿದುಕೊಂಡ ಸತ್ಯ.
ಇಂದಿನ ಕಾಲದಲ್ಲಿ ಉಳಿದ
ತಂತ್ರಜ್ಞರಿಗೆ
ಸಿಗುವಷ್ಟು
ಮಾನ್ಯತೆ
ಸಂಕಲನಕಾರರಿಗೆ
ಸಿಗುತ್ತೆ
ಎಂದನಿಸ್ತಾ
ಇದೆಯಾ?
ಇಲ್ಲ
... ಖಂಡಿತಾ ಸಿಕ್ತಿಲ್ಲ. ಇಂದು ಪ್ರಮುಖ ತಂತ್ರಜ್ಞರು
ಎಂದರೆ ನಿರ್ದೇಶಕರನ್ನು ಯೋಚನೆ ಮಾಡ್ತಾರೆ ಬಿಟ್ಟರೆ
ಕ್ಯಾಮರಾಮೆನ್ಗಳ ಬಗ್ಗೆ ಯೋಚಿಸ್ತಾರೆ.
ನನ್ನ ಪ್ರಕಾರ ಒಂದು ಸಿನಿಮಾ
ಆಗಲು ಮುಖ್ಯವಾಗಿ ನಿರ್ಮಾಪಕ, ನಿರ್ದೇಶಕ, ಸಿನಿಮಟೋಗಾಫರ್, ಸಂಕಲನಕಾರರು ಇರಬೇಕು ಇವರಿದ್ದರೆ ಸಿನಿಮಾ
ರೆಡಿಯಾಗುತ್ತದೆ. ಮ್ಯೂಸಿಕ್ ಇಲ್ಲದೆ ಸಿನಿಮಾ ಆಗಬಹುದು.
ಆದರೆ ಕ್ಯಾಮರಾ ಇಲ್ಲದೆ ಎಡಿಟರ್
ಇಲ್ಲದೆ ಸಿನಿಮಾ ಆಗಲಾರದು.
ಎಂದಾದರೂ ಸಂಕಲನ
ಕ್ಷೇತ್ರದಲ್ಲಿ ನಿರಾಶೆ ಎಂದೆನಿಸಿದ್ದಿದ್ಯಾ?
ತುಂಬಾ ಸಲ ಆಗಿದೆ. ಕೆಲವೊಂದು
ಬಾರಿ ನಮ್ಮಲ್ಲಿ ಐಡಿಯಾಗಳಿರುತ್ತದೆ. ನಿರ್ದೇಶಕರು ಅವರ ಮನಸ್ಸಲ್ಲಿ ಮೂಡುವ
ರೀತಿಯೇ ಚಿತ್ರ ಬರಬೇಕೆಂದು ಆಶಿಸಿದಾಗ
ಅದನ್ನು ಪೊಲೋ ಮಾಡಬೇಕಾಗುತ್ತದೆ. ಸಿನಿಮಾ
ನಿರ್ದೇಶಕನ ಕನಸಾಗಿರುತ್ತದೆ.
ಸಾಮಾನ್ಯವಾಗಿ ನನ್ನ
ಮಗ-ಮಗಳು
ಇಂಜಿನಿಯರ್
ಡಾಕ್ಟರ್ ಆಗಬೇಕೆಂಬ ಕನಸು
ಪೋಷಕರಿಗಿರುತ್ತೆ.
ಹೀಗಿರುವಾಗ
ನಿಮ್ಮ
ಮನೆಯಲ್ಲಿ
ಯಾವ
ರೀತಿ
ಪ್ರೋತ್ಸಾಹ
ನೀಡಿದ್ರು?
ನನ್ನ ಬಗ್ಗೆ ಮನೆಯಲ್ಲಿ ವಿಶ್ವಾಸವಿತ್ತು.
ಯಾವುದೇ ಕ್ಷೇತ್ರವನ್ನು ಆರಿಸಿದರೂ ಅದರಲ್ಲಿ ಯಶಸ್ವಿಯಾಗುತ್ತಾನೆ ಎಂಬ
ಭರವಸೆ ನನ್ನ ಪೋಷಕರಿಗಿತ್ತು.

Comments
Post a Comment