ಭ್ರಷ್ಟಾಚಾರ ಮುಕ್ತ 'ಮರ್ಕಂಜ' ಅದೊಂದು ದಿನ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದ ಈ ಗ್ರಾಮ ಇಂದು ಭ್ರಷ್ಟಮುಕ್ತವಾಗುವುದರೆಡೆಗೆ ಸಾಗುತ್ತಿದೆ; ಸಾರ್ವಜನಿಕರ ನಿರಂತರ ಪ್ರೋತ್ಸಾಹ, ಮತ್ತು ಒಗ್ಗಟ್ಟಿನ ಬಲದಿಂದ ರಾಜ್ಯಾ ದ್ಯಂತ ಗುರುತಿಸಲ್ಪಟ್ಟ ಗ್ರಾಮವೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ. ಭ್ರಷ್ಟಾಚಾರ ಮುಕ್ತ ಗ್ರಾಮ ಎಂಬ ಹಣೆಪಟ್ಟಿಯಿರುವ ಇಲ್ಲಿ ಈ ಹಿಂದೆ ಗ್ರಾಮ ಪಂಚಾಯತ್ ವಲಯದಿಂದಲೇ ಭ್ರಷ್ಟಾಚಾರ ತುಂಬಿತ್ತು. ಅಧಿಕಾರಿಗಳ ಕೈ ಗೆ ಬಿಸಿಮುಟ್ಟಿಸದಿದ್ದರೆ ಒಂದು ಪೈಲು ಕೂಡಾ ಮುಂದೆ ಹೋಗುತ್ತಿರಲಿಲ್ಲ; ಇದರಿಂದ ಜನತೆಗೆ ಪಂಚಾಯತ್‌ನ ಅನುದಾನ ದೊರಕುವುದಂತೂ ಕನಸಿನ ಮಾತು. ಪಂಚಾಯತ್‌ಗೆ ಸರಕಾರದಿಂದ ಸವಲತ್ತು ಬಂದರೂ ಸುಮಾರು ೯೦ ಪ್ರತಿಶತದಷ್ಟು ಹಣ ಅಧಿಕಾರಿಗಳ ಪಾಲು, ಹೀಗಿದ್ದಾಗ ಗ್ರಾಮದ ಅಭಿವೃದ್ದಿ ಹೇಗೆ ಸಾದ್ಯ. ಇದರಿಂದ ಬೇಸತ್ತ ಹಲವರು ಮಾಹಿತಿ ಹಕ್ಕು ಪಡೆಯುವ ಕೆಲಸಕ್ಕೆ ಅಣಿಯಾದರು. ಇಲ್ಲೂ ಹಿನ್ನಡೆ, ದಿನೇ ಅಲೆದಾಟದ ಸಮಸ್ಯೆ ಬಿಟ್ಟರೆ ಮಾಹಿತಿ ದೊರಕಲೇ ಇಲ್ಲ. ...
Posts
Showing posts from June, 2012