Posts

Showing posts from October, 2012
Image
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಇಂದಿನ ನವ ಯುಗದಲ್ಲಿ ಯುವಜನಾಂಗಕ್ಕೆ ಕನ್ನಡಕ್ಕಿಂತ ಹೆಚ್ಚಾಗಿ ಆಂಗ್ಲ ಬಾಷೆಯ ಮೇಲೇ ಪ್ರೀತಿ ಹೆಚ್ಚು. ಕನ್ನಡ ಎಂದರೆ ಎನ್ನಡ...??? ಹೇಳುವಷ್ಟು ಜನ ಬೇರೆ ರಾಜ್ಯದವರು ಕನ್ನಡ ನಾಡಲ್ಲಿ ತುಂಬುತ್ತಿದ್ದಾರೆ. ನಾವು ಬಿಡಿ ತುಂಬಾ ಉದಾರಿಗಳು.    ನಮಗೆ ಬದುಕಲು ಕನ್ನಡದ ನೆಲ ಬೇಕು, ಕುಡಿಯಲು ಕನ್ನಡದ ನೀರು ಬೇಕು ಆದರೆ ಮಾತನಾಡಲು ಕನ್ನಡ ಬೇಡ..ಇದ್ಯಾವ ನ್ಯಾಯ ಸ್ವಾಮಿ..??? ನವೆಂಬರ್ ೧ ಬಂತೆಂದರೆ ಒಂದು ದಿನ ಕನ್ನಡ ಬಾವುಟ ಹಾರಿಸಿ, ಕಷ್ಟ ಪಟ್ಟು ಉದ್ದುದ್ದ ಕನ್ನಡ ಮಾತನಾಡಿದರೆ ಸಾಕಾಗುವುದಿಲ್ಲ ಕನ್ನಡಕ್ಕೆ ಅದರದೇ ಆದ ಸ್ಥಾನಮಾನವಿದೆ ಅದನ್ನ ಕಡೇ ಕಾಲದ ವರೆಗೂ ಉಳಿಸಬೇಕು. ಯುವಶಕ್ತಿ ಗಿಂತ ಮಿಗಿಲಾದ ಶಕ್ತಿ ಬೇರೊಂದಿಲ್ಲ ಇಂದಿನ ಹೆಚ್ಚು ಯುವಜನಾಂಗಕ್ಕೆ ’ನಿನ್ನ ಹೆಸರೇನು..?’ ಎನ್ನುವುದಕ್ಕಿಂತ ಹೆಚ್ಚಾಗಿ ’ವಾಟ್ ಈಸ್ ಯುವರ್ ನೇಮ್..?’ಎನ್ನುವವನಿಗೆ ನಮ್ಮಲ್ಲಿ ಹೆಚ್ಚಿನ ಮರ್ಯಾದ ಎಂದುಕೊಂಡಿದ್ದಾರೆ. ವಿದೇಶಿಯತೆಯಲ್ಲಿಲ್ಲದ ಸಂಸ್ಕತಿ ಮತ್ತು ಮರ್ಯಾದೆ ನಮ್ಮ ಕರ್ನಾಟಕದ ಕನ್ನಡದಲ್ಲಿದೆ. ಆದರೆ ಇದರ ಅರಿವು ನಮಗಿಲ್ಲ. ನಮ್ಮ ಸಂಸ್ಕತಿಯನ್ನು ಅದೆಷ್ಟೋ ವಿದೇಶಿಯರೂ ಕಂಡು ಕೊಂಡಾಡಿದ್ದಾರೆ. ಆದರೆ ನಮಗೆ ನಮ್ಮ ಮನೆ ತುತ್ತಿಗಿಂತ ಬೇರೆ ಯವರ ಮನೆ ಮೇಲೇಕೆ ಕಣ್ಣು. ಮಾದ್ಯಮ, ಪತ್ರಿಕೆಯ, ಸಾಹಿತಿಗಳ ಮತ್ತು ಕನ್ನಾಡಾಭಿಮಾನಿಗಳ ಒಕ್ಕೊಲಿನ ಕೊರಗಿನಿಂದ ಶಾಸ್ತ್ರೀಯ ಸ್ಥಾನಮಾನವಂತೂ ದಕ್ಕಿದೆ. ಕನ್ನಡ...
Image
                                              ವಿಕಸಿಸುತ್ತಿರುವ 'ವಿಕಸನ' ಕೈ ಕಟ್ಟಿ ಕೂತರೆ ಏನನ್ನೂ ಸಾಧಿಸಲು ಅಸಾದ್ಯ ಅದರ ಬದಲು ಸಿಕ್ಕ ಅವಕಾಶವನ್ನು ಚೊಕ್ಕವಾಗಿ ಬಳಸಿದರೆ ಇಟ್ಟ ಕನಸಿನೆಡೆಗೆ ದಿಟ್ಟ ಹಜ್ಜೆ ಹಾಕಬಹುದು. ಬಹು ದಿನದಿಂದ ಇದ್ದ ಕನಸು ಸಾಕ್ಷಾತಗಕಾರಗೊಂಡ ಖುಷಿಯಲ್ಲಿದ್ದಾರೆ ಪುತ್ತೂರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು. ಈ ಮೊದಲೇ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ’ವಿಕಸನ’ ಎಂಬ ಮಾಸಪತ್ರಿಕೆ ತರುತ್ತಿದ್ದು ಪತ್ರಿಕೆಯನ್ನು ಗಮನಿಸಿದ ಪ್ರಜಾವಾಣಿ ಪತ್ರಿಕೆಯ ಅಂಕಣಕಾರ ಡಾ.ಗುರುರಾಜ ಕರ್ಜಗಿ ’ನಾನೂ ನಿಮ್ಮ ಪತ್ರಿಕೆಗೆ ಬರೆಯುತ್ತೇನೆ’ ಎಂದಿರುವುದು ಈ ವಿದ್ಯಾರ್ಥಿಗಳ ಶ್ರಮಕ್ಕೆ ಸಂದ ಗೌರವ. ಅಂದ ಹಾಗೆ ಈ ವಿಭಾಗ ಇಂದು ಸುದ್ದಿಯಲ್ಲಿ ಮಾಡುತ್ತಿರುವುದು ವಿದ್ಯಾರ್ಥಿಗಲೇ ನಿರ್ಮಿಸಿದ ’ವಿಕಸನ ನ್ಯೂಸ್’ ಎಂಬ ಎಲೆಕ್ಟ್ರಾನಿಕ್ ಮೀಡಿಯಾದ ಮುಖೇನ. ಇದು ಕಾಲೇಜಿನಲ್ಲಿ ನಡೆದ ಎಲ್ಲಾ ಸಂಗತಿಗಳನ್ನು ಭಿತ್ತರಿಸುವ ದೂರದರ್ಶನವಾಗಿದ್ದು ಆಧುನೀಕತೆಗೆ ಒಗ್ಗಿಕೊಳ್ಳುವ ರೀತಿಯ ಬೆಳವಣಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕೊಂದು ಭದ್ರ ಬುನಾದಿ ಹಾಕುವಂತಿದೆ. ಯಾವುದೇ ಒಂದ...