“ಉಳಿದ ಚಿತ್ರರಂಗದಂತೆಯೇ ತುಳು ಚಲನಚಿತ್ರ ರಂಗ
ಕೂಡಾ ಬೆಳೆಯುತ್ತಿದೆ. ತುಳುವಿನಲ್ಲೂ ಅನೇಕ ಒಳ್ಳೆಯ ಚಲನಚಿತ್ರಗಳು
ಬರುತ್ತಿದೆ. ಒಂದು ವೇಳೆ ತುಳು
ಭಾಷೆಯಲ್ಲಿ ನಟಿಸುವ ಅವಕಾಶ ಸಿಕ್ಕರೆ
ನಾನು ರೆಡಿ” ಎಂದು ನಾಯಕಿ
ರಾಗಿಣಿ ದ್ವಿವೇದಿ ಹೇಳಿದ್ದಾರೆ.
‘ಜುಗಾರಿ’
ಬಲಿಪೆರ ಇಜ್ಜಿ ಎಂಬ ತುಳು
ತುಳು ಚಲನಚಿತ್ರದ ಮುಹೂರ್ತ ಸಮಾರಂಭದಲ್ಲಿ ಪಾಲ್ಗೊಂಡ
ತುಪ್ಪದ ಬೆಡಗಿ ಇತ್ತೀಚೆಗೆ ಕನ್ನಡ
ಚಲನಚಿತ್ರ ರಂಗದಲ್ಲಿ ನಾಯಕಿ ಪ್ರಧಾನವಾದ ಚಲನಚಿತ್ರಗಳು
ಬರುತ್ತಿದೆ. ನಾನು ಕೂಡಾ ಈ
ಹಿಂದೆ ‘ರಾಗಿಣಿ ಐ.ಪಿ.ಎಸ್’ ಚಲನಚಿತ್ರದಲ್ಲಿ ನಟಿಸಿದ್ದೇನೆ.
ಈ ಚಿತ್ರಕ್ಕೆ ಉತ್ತಮ
ಮನ್ನಣೆ ದೊರೆಯಿತು. ಸದ್ಯ ‘ವೀರ ರಣಚಂಡಿ’
ಚಲನಚಿತ್ರದಲ್ಲಿ ನಟಿಸಿದ್ದು ಅಗಷ್ಟ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ
ಎಂದರು.
ಜುಗಾರಿ’
ಬಲಿಪೆರ ಇಜ್ಜಿ ಚಲನಚಿತ್ರದಲ್ಲಿ ನಾಯಕನಾಗಿ
‘ಯಶೋದೆ’ ಧಾರವಾಹಿಯ ನಟ ಕಾರ್ತಿಕ್ ಅತ್ತಾವರ್
ನಟಿಸುತ್ತಿದ್ದು ನಾಯಕಿಯಾಗಿ ಎಸ್ತೇರ್ ನರೋನ್ಹಾ ನಟಿಸುತ್ತಿದ್ದಾರೆ.
ಉಳಿದಂತೆ ಅಮಿತ್ ರಾವ್, ನವೀನ್
ಡಿ. ಪಡೀಲ್, ಅರವಿಂದ ಬೋಳಾರ್,
ಭೋಜರಾಜ ವಾಮಂಜೂರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಈ ಹಿಂದೆ ರಾಷ್ಟ್ರ
ಪ್ರಶಸ್ತಿ ವಿಜೇತ ‘ಕೋಟಿ ಚೆನ್ನಯ’
ಚಲನಚಿತ್ರವನ್ನು ನಿರ್ದೇಶಿಸಿದ ಆನಂದ್ ಪಿ.ರಾಜು
ಅವರು ಈ ಚಿತ್ರಕ್ಕೆ ಆಕ್ಷನ್
ಕಟ್ ಹೇಳಲಿದ್ದಾರೆ. ಇತ್ತೀಚೆಗೆ ತುಳು ಚಲನಚಿತ್ರಗಳು ವಿದೇಶಗಳಲ್ಲಿಯೂ
ಹೆಸರು ಮಾಡುತ್ತಿದ್ದು ‘ಜುಗಾರಿ’ ಬಲಿಪೆರ ಇಜ್ಜಿ
ಚಲನಚಿತ್ರ ಯಾವ ರೀತಿಯಲ್ಲಿ ಕಮಾಲ್
ಮಾಡುತ್ತೋ ಕಾದು ನೋಡಬೇಕು.
Comments
Post a Comment