ಬರ್ಥ್ ಡೇ ಬಾಯ್
ರಿಷಬ್ ಶೆಟ್ಟಿ ಜೊತೆ ಬಾಲ್ಕನಿ ಚಿಟ್ ಚಾಟ್
ಟಿ.ವಿಯಲ್ಲಿ ಚಲನಚಿತ್ರವನ್ನು ನೋಡುತ್ತಿರುವಾಗ
ನಾನೂ ಕೂಡಾ ಇದೇ ರೀತಿ
ಕಾಣಿಸಿಕೊಳ್ಳಬೇಕು. ದೊಡ್ಡ ಹೀರೋ ಆಗಬೇಕು
ಎಂದು ಬಾಲ್ಯದಲ್ಲಿ ಕನಸು ಕಂಡಿದ್ದ ಹುಡುಗನನ್ನು
ಮೊದಲು ಕೈ ಹಿಡಿದದ್ದು ನಿರ್ದೇಶನ
.. ನಂತರ ನಟನೆ .. ಹೀಗೆ ಎಳೆಯ
ಕನಸನ್ನು ನನಸು ಮಾಡಿದ ಸಂಭ್ರಮದಲ್ಲಿದ್ದಾರೆ
ನಿರ್ದೇಶಕ-ನಟ ರಿಷಬ್ ಶೆಟ್ಟಿ.
ಮುಂದಿನ ತಿಂಗಳು ಬಿಡುಗಡೆಯಾಗಲಿರುವ ರಿಕ್ಕಿ
ಚಲನಚಿತ್ರವನ್ನು ನಿರ್ದೇಶನ ಮಾಡುತ್ತಿರುವ ರಿಷಬ್ ಶೆಟ್ಟಿ ಅವರಿಗಿಂದು
ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ
ರಿಷಬ್ ಅವರು ಬಾಲ್ಕನಿ.ಕಾಂನೊಡನೆ
ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ನೀವು
ಕಳೆದಂತಹಾ ಬಾಲ್ಯದ ದಿನಗಳನ್ನು ನೆನಪಿಸಬಹುದು?
ರಿಷಬ್ ಶೆಟ್ಟಿ: ಖಂಡಿತವಾಗಿಯೂ ... ಬಾಲ್ಯ ಎಂದರೆ ನನಗೆ
ಥಟ್ಟನೆ ನೆಪಾಗೋದು ನನ್ನ ಊರು. ನಾನು
ಹುಟ್ಟಿದ್ದು ಕುಂದಾಪುರ ಸಮೀಪದ ಕೆರಾಡಿ ಎಂಬ
ಪುಟ್ಟ ಹಳ್ಳಿಯಲ್ಲಿ. ತಂದೆ ವೈ. ಭಾಸ್ಕರ
ಶೆಟ್ಟಿ, ತಾಯಿ ರತ್ನಾವತಿ. ೫ನೇ
ತರಗತಿಯವರೆಗೆ ಅದೇ ಹಳ್ಳಿಯಲ್ಲಿ ವಿದ್ಯಾಬಾಸವನ್ನು
ಮಾಡಿದೆ. ಕುಂದಾಪುರದಲ್ಲಿ ಪಿ.ಯು.ಸಿ
ಮುಗಿಸಿದೆ. ಶಾಲೆಯಲ್ಲಿ ನಾಟಕಗಳಲ್ಲಿ ನಟಿಸುತ್ತಿದ್ದೆ. ಯಕ್ಷಗಾನ ಎಂದರೆ ನನಗೆ
ಬಾಲ್ಯದಿಂದಲೇ ಇಷ್ಟ. ಮೊದಲ ಬಾರಿಗೆ
ಯಕ್ಷಗಾನಕ್ಕೆ ಬಣ್ಣಹಚ್ಚಿದ್ದು ಮೀನಾಕ್ಷಿ
ಕಲ್ಯಾಣ ಎಂಬ ಪ್ರಸಂಗಕ್ಕೆ. ಈ
ಯಕ್ಷಗಾನದಲ್ಲಿ ಷಣ್ಮುಖನ ಪಾತ್ರ ಮಾಡಿದ್ದೆ.
ನಂತರ ಬಾಲಗೋಪಾಲ, ಕೃಷ್ಣ ಮುಂತಾದ ಪಾತ್ರವನ್ನು
ನಿರ್ವಹಿಸಿದ್ದೇನೆ. ನಂತರ ಪದವಿಯನ್ನು ಪೂರ್ಣಗೊಳಿಸಿದ್ದು
ಬೆಂಗಳೂರಿನಲ್ಲಿ.
ಕಲಿಯುತ್ತಿರುವಾಗ
ಚಲನಚಿತ್ರ
ಕ್ಷೇತ್ರವು ನಿಮ್ಮನ್ನು ಸೆಳೆದದ್ದು ಯಾವಾಗ?
ರಿಷಬ್ ಶೆಟ್ಟಿ: ಒಂದು ಸಿನಿಮಾ ನೋಡಿದಾಗ ಆ
ಚಿತ್ರದಲ್ಲಿ ನಾನು ಕಾಣಿಸಿಕೊಂಡಿದ್ದರೆ ಹೇಗೆ
ಎಂಬ ಆಸೆ ನನ್ನಲ್ಲಿ ಬರುತ್ತಿತ್ತು.
ಅಂದೊಂದು ಟಿ.ವಿ ನೋಡುವ
ಸಮಯದಲ್ಲಿ ಡಾ. ರಾಜ್ ಕುಮಾರ್
ಅವರ ಬಾನಿಗೊಂದು ಎಲ್ಲೆ ಎಲ್ಲಿದೆ ಎಂಬ
ಹಾಡು ಬರುತ್ತಿತ್ತು. ಹೀರೋ ಆಗಬೇಕಾದರೆ ಡ್ರೈವಿಂಗ್
ಗೊತ್ತಿರಬೇಕು ಎಂದು ನಂಬಿದ್ದೆ. ಅದಕ್ಕೆಂದು
ಡ್ರೈವಿಂಗ್ ಕ್ಲಾಸ್ಗೂ ಸೇರಿದ್ದೆ.
ಆ ಮೇಲೆ ನಟನೆ
ಮಾಡುವುದು ಸುಲಭದ ಕೆಲಸವಲ್ಲ ಎಂದು
ಅರಿವಾಯ್ತು.
ಹೀರೋ
ಆಗಲು ಹೋದವರು ಡೈರೆಕ್ಷನ್ ಕಡೆ
ಗುರುತಿಸಿದ್ರಲ್ಲಾ ಯಾಕೆ?
ರಿಷಬ್ ಶೆಟ್ಟಿ: ನಾನು ಉದ್ಯಾನನಗರಿಗೆ ಬರೋವರೆಗೂ ನಟನಾಗಬೇಕು ಎಂದೇ ಆಸೆ ಇತ್ತು.
ಚಿತ್ರರಂಗದಲ್ಲಿ ಸಾಧನೆ ಮಾಡಿದ ನಟರ
ಬಗ್ಗೆ ಲೇಖನವನ್ನು ಓದುತ್ತಿದ್ದಾಗ ಬ್ಯಾಗ್ರೌಂಡ್ ಇಲ್ಲದೇ ಬರೋ ನಟರು
ಸಹ ನಿರ್ದೇಶಕರಾಗಿ ಕೆಲಸ ಮಾಡಿದ ನಂತರ
ನಟನಾ ಕ್ಷೇತ್ರದಲ್ಲಿ ಗುರುತಿಸುತ್ತಾರೆ ಎಂದು ಓದಿದ್ದೆ. ಅದಕ್ಕೆಂದು
ಕೆಲ ನಿರ್ದೇಶನಕ್ಕೆ ಸಂಬಂಧಿಸಿದ ಕೋರ್ಸ್ಗಳನ್ನು ಸೇರಿಕೊಂಡೆ.
ನಂತರದ ದಿನಗಳಲ್ಲಿ ನಿರ್ದೇಶನ ಕ್ಷೇತ್ರವೂ ನನ್ನನ್ನು ಆಕರ್ಷಿಸಿತು.
ಬಾಲ್ಕನಿ: ಇಲ್ಲಿಯವರೆಗೆ
ಯಾವೆಲ್ಲಾ ಚಲನಚಿತ್ರಗಳಲ್ಲಿ ಗುರುತಿಸಿಕೊಂಡಿದ್ದೀರಿ?
ರಿಷಬ್ ಶೆಟ್ಟಿ: ನಾನು ಮೊದಲು ಸಹ ನಿರ್ದೇಶಕನಾಗಿ
ಗುರುತಿಸಿಕೊಂಡ ಚಿತ್ರ ಎಂದರೆ ಅದು
ಸೈನೈಡ್. ಈ ಚಿತ್ರದ ಕನ್ನಡ
ಮತ್ತು ತಮಿಳು ಭಾಷೆಯ ಅವತರಣಿಕೆಯಲ್ಲೂ
ಕೆಲಸ ಮಾಡಿದ್ದೇನೆ. ನಂತರ ಗಂಡ ಹೆಂಡತಿ
ಚಿತ್ರದಲ್ಲಿಯೂ ಸಹನಿರ್ದೇಶಕನಾಗಿದ್ದೆ. ನಂತರ ತುಂಬಾ ಗ್ಯಾಪ್
ಬಳಿಕ ಉಳಿದವರು ಕಂಡಂತೆ ಚಿತ್ರಕ್ಕೆ
ಸಹನಿರ್ದೇಶನಾಗಿ ಗುರುತಿಸಿದೆ. ಈ ಸಮಯದಲ್ಲಿ ಲೂಸಿಯಾ,
ಉಳಿದವರು ಕಂಡಂತೆ, ತುಗ್ಲಕ್, ಅಟ್ಟಹಾಸ
ಮುಂತಾದ ಚಿತ್ರದಲ್ಲಿ ನಟಿಸಿದ್ದೇನೆ.
ನಿಮ್ಮ
ಸಿನಿಮಾ ಜರ್ನಿಯಲ್ಲಿ ನಟನಾಗಿಯೂ ಗುರುತಿಸಿದ್ದೀರಿ .. ನಿರ್ದೇಶಕನಾಗಿಯೂ ಗುರುತಿಸಿದ್ದೀರಿ .. ಎರಡೂ ಕೂಡಾ ಯಾವರೀತಿ
ಭಿನ್ನ ಎಂದಸಿತು?
ರಿಷಬ್ ಶೆಟ್ಟಿ: ನಿರ್ದೇಶನ , ನಟನೆ ಎರಡು ಕೂಡಾ
ಸುಲಭವಲ್ಲ. ನಿರ್ದೇಶನಕ್ಕೆ ಹೋಸಲಿಸಿದರೆ ನಟನೆ ಸುಲಭದ ಕೆಲಸ.
ನಿರ್ದೇಶನದಷ್ಟು ತಯಾರಿ ನಟನೆಗೆ ಅಗತ್ಯ
ಇಲ್ಲ. ನಿರ್ದೇಶನದಲ್ಲಿ ನಮ್ಮನ್ನು ಸಂಪೂರ್ಣವಾಗಿ ಆ ಚಿತ್ಕೆಕ್ಕೆ ತೊಡಗಿಸಿಕೊಳ್ಳಬೇಕಾಗುತ್ತದೆ.
ಮುಂದೆ
ಯಾವೆಲ್ಲಾ ಎಲ್ಲಾ ಪ್ರಾಜೆಕ್ಟ್ ಇದೆ?
ರಿಷಬ್ ಶೆಟ್ಟಿ: ರಿಕ್ಕಿ ಚಲನಚಿತ್ರವನ್ನು ನಿರ್ದೇಶನ ಮಾಡುತ್ತಿದ್ದೇನೆ. ಇದಾದ ಬಳಿಕ ಅವನೇ
ಶ್ರೀಮನ್ನಾರಾಯಣ ಎಂಬ ಚಿತ್ರವನ್ನು ನಿರ್ದೇಶನ
ಮಾಡಲಿದ್ದೇನೆ. ಈ ಚಿತ್ರಕ್ಕೂ ರಕ್ಷಿತ್
ಶೆಟ್ಟಿ ನಾಯಕ ನಟ.
ಬಾಲ್ಕನಿ:ನಿರ್ದೇಶಕರಾಗಿ
ಈಗಾಗಲೇ ಕೆಲ ಚಿತ್ರದಲ್ಲಿ ಗುರುತಿಸಿದ್ದೀರಿ.
ನಿಮ್ಮ ಕನಸಾದ ನಟನಾ ಕ್ಷೇತ್ರದಲ್ಲಿ
ಕಥೆ ಯೇನಾಯ್ತು?
ರಿಷಬ್ ಶೆಟ್ಟಿ: ಖಂಡಿತಾ ನಟನಾಗಿ ಗುರುತಿಸೋದು ನನ್ನ
ಆಸೆ. ಈ ಹಿಂದೆಯೇ ರವಿ
ಬಸ್ರೂರ್ ಅವರ ಚಲನಚಿತ್ರದಲ್ಲಿ ನಾಯಕ
ನಟನಾಗಿ ಗುರುತಿಸಬೇಕಿತ್ತು. ರಿಕ್ಕಿ ಚಿತ್ರದಲ್ಲಿ ಬ್ಯುಸಿ
ಇದ್ದರಿಂದ ಆಗಿಲ್ಲ. ಸದ್ಯದಲ್ಲೇ ಹೊಸ
ಚಿತ್ರವೊಂದರಲ್ಲಿ ನಟನಾಗಿ ಕಾಣಿಸಿಕೊಳ್ಳುತ್ತಿದ್ದೇನೆ.
ನಟನಾಗಿ
ಯಾವ ರೀತಿಯ ಪಾತ್ರಗಳನ್ನು ಮಾಡಬೇಕು
ಎಂಬ ಆಸೆ ಇದೆ?
ರಿಷಬ್ ಶೆಟ್ಟಿ: ನನಗೆ ಎಲ್ಲಾ ರೀತಿಯ ಪಾತ್ರಗಳನ್ನೂ
ಮಾಡಲು ಇಷ್ಟ. ಆದರಲ್ಲೂ ಸಾಪ್ಟ್
ಕ್ಯಾರೆಕ್ಟರ್ ಮತ್ತು ಹಾರ್ಷ್ ಕ್ಯಾರೆಕ್ಟರ್
ಎರಡನ್ನೂ ನಿಭಾಯಿಸಲು ನನಗೆ ಇಷ್ಟ ಇದೆ.
ನಿಮ್ಮ
ಹಿಂದಿನ ಬರ್ಥ್ಡೇ ಸೆಲೆಬ್ರೇಷನ್ಗಿಂತ ಈ ಬರ್ಥ್ಡೇ ಏನು ವಿಶೇಷ?
ರಿಷಬ್ ಶೆಟ್ಟಿ: ಹಾಗೆನಿಲ್ಲ ... ಒಂದು ವರ್ಷ ಜಾಸ್ತಿ
ಆಯ್ತು ಅನಿಸ್ತಾ ಇದೆ. ಡೈರೆಕ್ಷನ್
ಮಾಡಬೇಕೆಂದು ಕನಸಿದ್ದ ಒಂದು ಚಿತ್ರ
ಈಗಾಗಲೇ ಪೂರ್ಣವಾಗಿದೆ. ನಮ್ಮದೊಂದು ಪ್ರೆಂಡ್ ಸರ್ಕಲ್ ಇದೆ.
ಅವರೊಂದಿಗೆ ಈ ಬರ್ಥ್ಡೇಯನ್ನು
ಸೆಲಬ್ರೇಷನ್ ಮಾಡುತ್ತೇನೆ.
ನಿಮ್ಮ
ನಿರ್ದೇಶನದ ರಿಕ್ಕಿ ಚಲನಚಿತ್ರದ ಬಗ್ಗೆ
ಸ್ವಲ್ಪ ಹೇಳ್ಬೋದಾ?
ರಿಷಬ್ ಶೆಟ್ಟಿ: ಖಂಡಿತಾ .. ಚಿತ್ರದ ಚಿತ್ರೀಕರಣ ಈಗಾಗಲೇ
ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ನಡೀತಿದೆ.
ಈ ತಿಂಗಳ ಕೊನೆಯಲ್ಲಿ
ಆಡಿಯೋ ರಿಲೀಸ್ ಇದ್ದು ಮುಂದಿನ
ತಿಂಗಳು ಚಿತ್ರ ಬಿಡಿಗಡೆ ಮಾಡೋ
ಪ್ಲಾನ್ ಇದೆ. ಈ ಚಲನಚಿತ್ರವು
ರಾಧಾ ಕೃಷ್ಣರ ಲವ್ಸ್ಟೋರಿ.
ಈ ಚಿತ್ರದ ನಾಯಕನ
ಹೆಸರು ರಿಕ್ಕಿ. ಮಂಗಳೂರು ಪ್ರದೇಶವನ್ನು
ಗಮನದಲ್ಲಿಟ್ಟುಕೊಂಡು ಈ ಕಥೆಯನ್ನು ಹೆಣೆದಿದ್ದೇವೆ.
ಮನೆಮಂದಿ ಕೂತು ನೋಡಬಹುದಾದಂತಹಾ ಚಿತ್ರ
ಇದಾಗಿದೆ. ಚಿತ್ರದ ಟ್ರೈಲರ್ ಈಗಾಗಲೇ
ಬಿಡುಗಡೆಯಾಗಿದ್ದು ಒಳ್ಳೆಯ ಪ್ರಶಂಸೆ ವ್ಯಕ್ತವಾಗಿದೆ.


Comments
Post a Comment