Posts

Showing posts from June, 2013
Image
ಪುತ್ತೂರ ಹುಡುಗಿಯ ಸಾಧನೆ ಹತ್ತೂರು ಮೆಚ್ಚುವಂತದ್ದು ಹಾವು ಎಂದರೆ ಅಬ್ಬಾ..! ಎಂದು ಹೇಳೋರೇ ಹಲವರು. ಆದರೆ ಈ ಹುಡುಗಿ ಎಲ್ಲರಿಗಿಂತಲೂ ಬಿನ್ನ. ತನ್ನ ಚಿಕ್ಕ ವಯಸ್ಸಲ್ಲೇ ಹಾವು ಈಕೆಯ ಪ್ರಿಯ ಮಿತ್ರ. ಮೈಕ್ ಹಿಡಿದು ಹಾಡು ಎಂದರೆ ಅದಕ್ಕೂ ಓ.ಕೆ. ಭರತನಾಟ್ಯ ತುಂಬಾನೇ ಸಲೀಸು. ನಟನೆಗೂ ಸೈ. ಅಂದ ಹಾಗೆ ಈ ಸರ್ಪ ಸುಂದರಿಯ ಹೆಸರು ಹಸ್ತಾ ಐತಾಳ್. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಾಸಿಸುವ ಉರಗ ತಜ್ಞ ಡಾ. ರವೀಂದ್ರನಾಥ ಐತಾಳ್ ಮತ್ತು ಶ್ರೀಮತಿ ವಸಂತಿ ದಂಪತಿಯರ ಪುತ್ರಿಯಾದ ಹಸ್ತಾಳಿಗೆ ಹಾಡು ಎಂದರೆ ಪ್ರಿಯ ಕ್ಷೇತ್ರ. ತನ್ನ ಹಸ್ತದಿಂದ ಮೈಕ್ ಹಿಡಿದು ಹಾಡಿದಳೆಂದರೆ ಸಾಕು ಚಪ್ಪಾಳೆಗಳ ಸುರಿಮಳೆ..! ಮುಖದಲ್ಲಿ ಪುಟ್ಟ ಪುಟ್ಟ ಮುಗುಳ್ನಗೆಯೊಂದಿಗೆ ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಾ, ಹುಚ್ಚೆಂದು ಕುಣಿಸುವ ಹಾಡಿನ ಪರಿ ಈ ಪ್ರತಿಭೆಯಲ್ಲಿದೆ. ಏಳನೇ ವಯಸ್ಸದಲ್ಲೇ ಸುಗಮ ಸಂಗೀತದ ಜಾಡನ್ನು ಹಿಡಿದ ಹಸ್ತಾಳ ಗುರುಗಳು ಕಿರಣ್ ಕುಮಾರ್. ಶಾಸ್ತ್ರೀಯ ಸಂಗೀತವನ್ನು ಸ್ವರ್ಣಲತಾ ಎಂ ಭಟ್ ಅವರಲ್ಲಿ ಕಲಿಕೆ. ಜೊತೆಗೆ ಚಲನಚಿತ್ರ ಗೀತೆಯನ್ನು ಚಂದ್ರಶೇಖರ ಹೆಗ್ಡೆ ಅವರಲ್ಲಿ ಕರಗತ ಮಾಡಿಕೊಂಡಿರುವಳು. ಚಿದಾನಂದ ಕಾಮತ್ ಕಾಸರಗೋಡು ನಿರ್ದೇಶನದ ಬಾರಿಸು ಕನ್ನಡ ಡಿಂಡಿಮವ ತಂಡದ ಸಕ್ರೀಯ ಪ್ರತಿಭೆಯಾದ ಹಸ್ತಾಳು ಇಲ್ಲಿ ವರೆಗೆ ನೀಡಿದ ಪ್ರದರ್ಶನ ಸುಮಾರು ಐದು ನೂರರ ಸನಿಹ..! ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಲಿಟ್ಲ್ ಸ್ಟಾರ್ ಸಿಂಗರ್...