‘ಮುಂಗಾರುಮಳೆ-2’ ಹೀರೋಯಿನ್ ನೇಹಾ ಶೆಟ್ಟಿ


ಕನ್ನಡ ಚಿತ್ರರಂಗದಲ್ಲಿ ಪರಭಾಷಾ ನಟಿಯರ ಹಾವಳಿ ಹೆಚ್ಚಾಗುತ್ತಿರುವ ಸಮಯದಲ್ಲಿ ನಿರ್ದೇಶಕ ಶಶಾಂಕ್ ಅವರು ತಮ್ಮಮುಂಗಾರು ಮಳೆ-2’ ಚಲನಚಿತ್ರಕ್ಕೆ ಮಂಗಳೂರು ಕುವರಿ ನೇಹಾ ಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ. ಬಾಲ್ಯದಿಂದಲೇ ಚಲನಚಿತ್ರ ವಲಯದಲ್ಲಿ ಗುರುತಿಸಬೇಕು ಎಂದು ಕನಸು ಕಂಡಿದ್ದ ನೇಹಾ ಅವರ ಕನಸಿಂದು ನೆರವೇರಿದೆ. ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡು ಚಂದನವನಕ್ಕೆ ಕಾಲಿಡುವ ಸನಿಹದಲ್ಲಿರುವ ನೇಹಾ ಶೆಟ್ಟಿ ಅವರು ಬಾಲ್ಕನಿ.ಕಾಂನೊಡನೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
 ಮುಂಗಾರು ಮಳೆ-2’ ಚಲನಚಿತ್ರಕ್ಕೆ ನಾಯಕಿ ಎಂದು ನಿರ್ದೇಶಕರು ಹೇಳಿದಾಗ ಏನನಿಸ್ತು?
ನೇಹಾ ಶೆಟ್ಟಿ: ‘ಮುಂಗಾರು ಮಳೆ-2’ ಚಲನಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುತ್ತೇನೆಂದು ನಾನು ಕನಸೂ ಕಂಡಿರಲಿಲ್ಲ. ಹಿಂದೆ ಯಾವುದೇ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ನನಗೆ ಇದು ಮೊದಲನೇ ಚಿತ್ರ. ಇಷ್ಟೊಂದು ದೊಡ್ಡ ಪ್ರೊಜೆಕ್ಟ್ಗೆ ನಾನು ಹೀರೋಯಿನ್ ಎಂದು ಕೇಳಿ ತುಂಬಾನೇ ಸಂತೋಷವಾಯ್ತು. ಅದಕ್ಕೂ ಮೊದಲು ಬೆಂಗಳೂರಿನಲ್ಲಿಮುಂಗಾರುಮಳೆ-2’ ಚಲನಚಿತ್ರದ ಆಡೀಷನ್ಗೆ ಹೋಗಿದ್ದೆ. ಆಡೀಷನ್ನಲ್ಲಿ ಹಲವು ರೀತಿಯ ದೃಶ್ಯಗಳನ್ನು ನಟಿಸಲು ಹೇಳಿದ್ದರು. ನಂತರ ಕೆಲ ದಿನಗಳಲ್ಲಿ ನೀನು ಆಯ್ಕೆಯಾಗಿದ್ದಿ ಎಂದು ಹೇಳಿದರು.
 ಮುಂಗಾರುಮಳೆ-2ಚಲನಚಿತ್ರದಲ್ಲಿ ಯಾವ ರೀತಿಯ ಪಾತ್ರ ನಿರ್ವಹಿಸಲಿದ್ದೀರಿ?
ನೇಹಾ ಶೆಟ್ಟಿ: ಈ ಚಿತ್ರದಲ್ಲಿ ನನ್ನದು ತುಂಬಾನೇ ಜಾಲಿ ಹುಡುಗಿಯ ಪಾತ್ರ. ಎಲ್ಲಾ ವಿಷಗಳಲ್ಲೂ ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕೆಂಬ ಆಸೆ ಹೊತ್ತ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಪಾತ್ರಕ್ಕಾಗಿ ಈಗಾಗಲೇ ನಟನೆಯ ಬಗ್ಗೆ ವರ್ಕ್ಶಾಪ್ ಕೂಡಾ ಮಾಡುತ್ತಿದ್ದೇನೆ.

ನೀವು ಚಿಕ್ಕಂದಿನಲ್ಲಿರುವಾಗ ಮುಂದೊಂದು ದಿನ ಚಲನಚಿತ್ರ ಕ್ಷೇತ್ರದಲ್ಲಿ ಹೆಸರು ಮಾಡಬೇಕು ಎಂಬ ಆಸೆ ಇತ್ತ?
ನೇಹಾ ಶೆಟ್ಟಿ: ಹೌದು .. ಖಂಡಿತಾ.. ಚಿಕ್ಕಂದಿನಲ್ಲೇ ಚಲನಚಿತ್ರ ಕ್ಷೇತ್ರದಲ್ಲಿ ಗುರುತಿಸಬೇಕೆಂಬ ಆಸೆ ಇತ್ತು. ಆದರೆ ಇಷ್ಟೊಂದು ಬೇಗ ಅವಕಾಶ ಒದಗಿ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ನನಗಿನ್ನೂ 18ವರ್ಷ. ಇಷ್ಟು ಚಿಕ್ಕ ವಯಸ್ಸಲ್ಲಿ ಹಿಟ್ ನಿರ್ದೆಶಕ ಶಶಾಂಕ್ ಅವರೊಡನೆ ಕೆಲಸ ಮಾಡುವ ಅವಕಾಶ ಒದಗಿದ್ದು ನನ್ನ ಪುಣ್ಯ.
ಮಾಡಲಿಂಗ್ ಪ್ರಪಂಚ ಯಾವ ರೀತಿ ಸೆಳೆಯಿತು?
ನೇಹಾ ಶೆಟ್ಟಿ: ನನಗೆ ಚಿಕ್ಕಂದಿನಿಂದಲೇ ನೃತ್ಯ ಎಂದರೆ ತುಂಬಾ ಇಷ್ಟ. ನೃತ್ಯವನ್ನು ಎಂ.ಎಸ್ ಶ್ರೀಧರ್ ಅವರೊಡನೆ ಕಲಿಯುತ್ತಿದ್ದೆ. ಅವರು ನೃತ್ಯದ ಜೊತೆಗೆ ಪ್ಯಾಷನ್ , ರಾಂಪ್ ವಾಕ್ ಬಗ್ಗೆಯೂ ಹೇಳಿ ಕೊಡುತ್ತಿದ್ದರು. ಒಂದು ದಿನ ರಾಜೀವ್ ಮೆನನ್ ಅವರುಹಾರ್ಲಿಕ್ಸ್’ ಜಾಹಿರಾತಿನ ಆಡಿಷನ್ಗೆ ನನ್ನ ಗುರುಗಳ ಬಳಿ ಬಂದಿದ್ರು. ಸಮಯದಲ್ಲಿ ನನ್ನನ್ನು ಜಾಹಿರಾತಿಗೆ ರೂಪದರ್ಶಿಯಾಗಿ ಆಯ್ಕೆ ಮಾಡಿದರು. ಇಲ್ಲಿಂದ ನನ್ನ ಮಾಡಲಿಂಗ್ ಪಯಣ ಶುರುವಾಯ್ತು. ಕೊರಿಯೋಗ್ರಫರ್ ಎಂ.ಎಸ್ ಶ್ರೀಧರ್ ಮತ್ತು ಸಮೀರ್ ಖಾನ್ ನನ್ನ ಮಾಡಲಿಂಗ್ ಗುರುಗಳು.
ಹಿಂದೆ ಯಾವೆಲ್ಲಾ ಶೋಗಳಲ್ಲಿ ರಾಂಪ್ ವಾಕ್ ಮಾಡಿದ್ರಿ?
ನೇಹಾ ಶೆಟ್ಟಿ: 2004 ರಲ್ಲಿ ನಡೆದಮಿಸ್ ಮಂಗಳೂರು’ ಸ್ಪರ್ದೆಯಲ್ಲಿ ವಿನ್ನರ್ ಆಗಿದ್ದೆ. ‘ಮಿಸ್ ಸೌಥ್ ಇಂಡಿಯಾ’ ಸ್ಪರ್ದೆಯಲ್ಲಿ ಮೊದಲ ರನ್ನರ್ಅಪ್ ಆಗಿದ್ದೆ. ಜೊತೆಗೆ ನಾನು ಚಿಕ್ಕಂದಿನಲ್ಲಿರುವಾಗಹಾರ್ಲಿಕ್ಸ್’, ‘ಕಿಸಾನ್’, ‘ಮಲಬಾರ್ ಗೋಲ್ಡ್’ ಮುಂತಾದ ಪ್ರೊಡಕ್ಟ್ಗಳ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದೇನೆ.
ಚಲನಚಿತ್ರ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಮಾಡಲಿಂಗ್ ಮೊದಲ ಹೆಜ್ಜೆ ಎಂದು ಹೇಳಬಹುದಾ?
ನೇಹಾ ಶೆಟ್ಟಿ: ಈ ಮಾತು ನಾನು ಒಪ್ಪುವುದಿಲ್ಲ. ಚಲನಚಿತ್ರ ಕ್ಷೇತ್ರಕ್ಕೆ ಬರಲು ಆಸಕ್ತಿ ಮುಖ್ಯ. ಜೊತೆಗೆ ನಟನೆ ಸ್ವಾಭಾವಿಕವಾಗಿ ಬರಬೇಕು. ಮಾಡಲಿಂಗ್ನಲ್ಲಿ ಗುರುತಿಸಿ ಹೆಸರುವಾಸಿಯಾದಾಗ ಅವಕಾಶ ಸಿಕ್ಕುತ್ತೆ ಬಿಟ್ಟರೆ ಮಾಡಲಿಂಗ್ ಮೊದಲ ಹೆಜ್ಜೆ ಎಂದು ನನಗನಿಸುವುದಿಲ್ಲ. ಮಾಡಲಿಂಗ್ನಲ್ಲಿ ನೀವು ಹಾಕಿಕೊಂಡಿರುವ ಕಾಸ್ಟ್ಯೂಮ್ ಬಗ್ಗೆ ಗಮನವಿರಿಸಬೇಕಾಗುತ್ತದೆ. ಚಲನಚಿತ್ರದಲ್ಲಿ ನಟನೆಯ ಬಗ್ಗೆ ಗಮನವಿರಿಸಬೇಕು.
ಸಾಮಾನ್ಯವಾಗಿ ಮಾಡಲಿಂಗ್ ಕ್ಷೇತ್ರದ ಬಗ್ಗೆ ಸಮಾಜದ ದೃಷ್ಠಿಯೇ ಬೇರೆ ಇದೆ. ಹಂತದಲ್ಲಿ ಮನೆಯವರ ಪ್ರೋತ್ಸಾಹ ಯಾವ ರೀತಿ ಇತ್ತು?
ನೇಹಾ ಶೆಟ್ಟಿ: ಈ ವಿಷಯದಲ್ಲಿ ನಾನೂ ತುಂಬಾನೇ ಲಕ್ಕಿ. ಚಿಕ್ಕಂದಿನಲ್ಲೇ ನನ್ನ ಅಪ್ಪ ಅಮ್ಮ ಸೇರಿದಂತೆ ಕುಟುಂಬ ಎಂದಿಗೂ ಕೂಡಾ ಮಾಡಲಿಂಗ್ ಕ್ಷೇತ್ರಕ್ಕೆ ಹೋಗಬೇಡ ಎಂದು ಹೇಳಿಲ್ಲ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಕೈ ಜೋಡಿಸ್ತಾರೆ. ನಿನಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಅದಕ್ಕೆ ನಾವು ಬೆಂಬಲ ಕೊಡುತ್ತೇವೆ ಎಂದು ಇಂದಿಗೂ ಪೋಷಕರು ಹೇಳುತ್ತಾರೆ.



Comments

Popular posts from this blog