Posts

Showing posts from April, 2013
Image
                                                           ಶ್ರವಂತ್ ಶ್ರಾವಂತಿಕೆ                           ಕಿರುತೆರೆಯಿಂದ ಪರಿಚಯವಾದ ಅದೆಷ್ಟೋ ಪ್ರತಿಭೆಗಳು ಇಂದು ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ. ಮೊನ್ನೆ ಮೊನೆ ಟಿ.ವಿ ಪರದೆ ಮುಂದೆ ಹಾಯ್... ಹಲೋ .. ಅನ್ನುತ್ತಿದ್ದ ಹುಡುಗ ಇಂದು ನಾಯಕ ನಟನಾಗುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾನೆ. ಹೌದು ಅಂದ ಹಾಗೆ ಈಗ ಹೇಳಲಿಕ್ಕೊರಟಿರುವುದು ಪರಾರಿ ಚಲನಚಿತ್ರದ ನಾಯಕ ನಟ ಶ್ರವಂತ್ ರಾವ್ ಅವರ ಬಗ್ಗೆ. ಬಾಲ್ಯದಿಂದಲೇ ಈತನಿಗೆ ಉತ್ತಮ ನಟನಾಗುವ ಬಯಕೆ ಇತ್ತು. ಅಷ್ಟಲ್ಲದೆಯೂ ಚಿತ್ರರಂಗದ ವಾತಾವರಣದಲ್ಲೇ ಬೆಳೆದ ಹುಡುಗ.  ಈತನ ತಾತ ವಾಸುದೇವ ರಾವ್ ಮತ್ತು ತಂದೆ ಮಂಜುನಾಥ ಅವರು ನಡೆಸುತ್ತಿದ್ದ ಸಫಾರಿ ಪ್ರೊಡಕ್ಷನ್‌ನಲ್ಲಿ ಅನೇಕ್ ಹಿಟ್ ಚಿತ್ರ ತೆರೆಕಂಡಿದೆ. ಮುಂದಿನ ದಿನದಲ್ಲಿ ಈ ಪ್ರೊಡಕ್ಷನ್ ಲಾಸ್ ಆದಾಗ ತಾನು ಚಿತ್ರರಂಗಕ್ಕೆ ಬರಲು ಈತ ಆರಿಸಿದ್ದು  ಆಂಕರಿಂಗ್ ಕ್ಷೇತ್ರ. ಸತತ ಆರು ವರ್ಷಗಳ ಕಾಲ ಖಾಸ...
Image
                                        ಚಲನಚಿತ್ರ ವಲಯದ 'ಲಿಖಿತ' ಪ್ರತಿಭೆ ಸ್ಪಷ್ಟ ಗುರಿ ಮತ್ತು ಸತತ ಪರಿಶ್ರಮವಿದ್ದರೆ ಯಾವುದೇ ರಂಗದಲ್ಲೂ ಮಿಂಚಲು ಸಾಧ್ಯವಿದೆ ಎಂಬುದು ಇವರಿಂದ ರೂಪಿತವಾಗಿದೆ. ಕ್ಯಾಮರಾ ಮುಂದೆ ಕಿಂಚಿತ್ತೂ ಭಯವಿಲ್ಲದೆ  ಲವ-ಲವಿಕೆಯಿಂದ ಮಾತನಾಡಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಮಾತಿನ ಲಹರಿ ಈತನದು. ಈಗ ಹೇಟಲಿಕ್ಕೆ ಹೊರಟಿರುವುದು ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್‌ನಲ್ಲಿ ತನ್ನ ಮನೋಜ್ಞ ನಟನಾ ಸಾಮಥ್ಯವನ್ನು ಪ್ರದರ್ಶಿಸಿರುವ ಕುಡ್ಲದ ಪ್ರತಿಭೆ ಲಿಖಿತ್ ಶೆಟ್ಟಿಯ ಬಗ್ಗೆ.       ಅಂದ ಹಾಗೆ ಈತನ ಕುಟುಂಬದಲ್ಲಿ ಯಾರೂ ಚನನಚಿತ್ರ ರಂಗದಲ್ಲಿಲ್ಲ. ಆದರೆ ಲಿಖಿತ್‌ಗೆ ಭವಿಷ್ಯದಲ್ಲಿ ಸಿನಿಮಾ ನಟನಾಗಬೇಕೆಂಬ ಆಸೆ ಬಾಲ್ಯದಲ್ಲೇ ಇತ್ತು. ಮಣಿಪಾಲ ಸಮೀಪದ ಹಿರಿಯಡ್ಕ ಊರಿನ ಪ್ರಕಾಶ್ ಚಂದ್ರ ಶೆಟ್ಟಿ ಮತ್ತು ಶಾಲಿನಿ ಪಿ. ಶೆಟ್ಟಿ ದಂಪತಿಯರ ಪುತ್ರರಾದ ಲಿಖಿತ್ ಸಧ್ಯ ನೆಲೆಸುತ್ತಿರುವುದು ಸಿಲಿಕಾನ್ ಸಿಟಿಯಲ್ಲಿ.       ಚಿತ್ರರಂಗದ ಕಡೆ ಒಲವಿದ್ದ ಇವರಿಗೆ ಮೊದಲು ಅವಕಾಶ ನೀಡಿದ್ದು ಉದಯ ವಾಹಿನಿ. ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಾಚಿದ ಲಿಖಿತ್ ಈ ವಾಹಿನಿ ಆರಿಸಲೂ ಕ...
Image
                                                                    'ಗಗನ'ವೇ ಬಾಗಿ  ' ನೀನೊಬ್ಬ ಆಕ್ಟರ್ರಾ, ಸಿಂಗರ್ರಾ, ಕವಿಯಾ ಅಥವಾ ಭಾಷಣಕಾರನಾ? ಯಾರು ನೀನು? ಪುಟ್ಟ ಬಾಲಕನಲ್ಲಿ ಇವೆಲ್ಲಾ ಒಟ್ಟೊಟ್ಟಿಗೆ ಹೇಗೆ ಸಾಧ್ಯ? ಬಹುಷ: ಅತಿಮಾನುಷ ಶಕ್ತಿ ನಿನ್ನಲ್ಲಿರಬಹುದೇನೋ...’ ಎಂದು ಸ.ರಿ.ಗ.ಮ.ಪ ಲಿಟ್ಲ್ ಚಾಂಫ್ಸ್ ಪೈನಲ್‌ವೇದಿಕೆಯಲ್ಲಿ ನೆರೆದಿದ್ದ ಸಾವಿರರು ಪ್ರೇಕ್ಷಕರ ಮುಂದೆ ಖ್ಯಾತ ಬಹುಭಾಷಾ ಹಿನ್ನಲೆ ಗಾಯಕಿ ಉಷಾ ಉತ್ತುಪ್ ಅವರು ಹರಸುತ್ತಿರುವಾಗ ವಿಧಯನಾಗಿ ಕಾಲಿಗೆರಗಿ ’ಆಶೀರ್ವದಿಸಿ ಮೇಡಂ’ ಎಂದು ಪುಟ್ಟ ಹುಡುಗನೊಬ್ಬ ಕೇಳಿಕೊಳ್ಳುತ್ತಿದ್ದ. ಅಂದ ಹಾಗೆ ಈ ಪುಟ್ಟ ಪೋರನ ಹೆಸರು ಗಗನ್ ಗಾಂವ್ಕರ್. ಹೌದು, ಈತನಿಗಿಂದು ರಾಜ್ಯಾದ್ಯಂತ ಪ್ಯಾನ್. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಈತನನ್ನು ಇಷ್ಟ ಪಡುವವರೇ ಇದಕ್ಕೆ ಕಾರಣ ಇತ್ತೀಚೆಗೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಸರಿಗಮಪ ಲಿಟ್ಲ್ ಚಾಂಫ್ಸ್...
Image
                                                       ಗೌತಮ್‌ನ ಸಾಧನೆ ಗಗನದೆತ್ತ ಈತ ಪಕ್ಕಾ ಗ್ರಾಮೀಣ ಪ್ರತಿಭೆ. ಎಳೆ ಪ್ರಾಯದಲ್ಲಿ ಭವಿಷ್ಯದಲ್ಲಿ ನಾನೊಬ್ಬ ಸ್ವಿಮ್ಮರ್ ಆಗುತ್ತೇನೆ ಎಂಬ ಕನಸೂ ಕಂಡಿರಲಿಕ್ಕಿಲ್ಲ. ಬಾಲ್ಯದಲ್ಲಿ ಹಾಗೆ ಸುಮ್ಮನೆ ಕಾಲ ಕಳೆಯಲೆಂದು ಈಜುವುದನ್ನು ಹವ್ಯಾಸವನ್ನಾಗಿಸಿಕೊಂಡಿದ್ದ. ಈತನ ಆಸೆಯನ್ನು ಗಮನಿಸಿ ಪೋಷಕರು ಇನ್ನಷ್ಟು ಪ್ರೋತ್ಸಾಹ ಹಾಗೂ ತರಭೇತಿ ನೀಡಿದರೆ ಹೇಗೆ ಎನ್ನುವ ಯೋಚನೆಯಲ್ಲಿ ತೊಡಗಿದರು. ಮೊದಲೇ ಸ್ವಿಮ್ಮಿಂಗ್ ವಲಯ ಪರಿಚಯವಿದ್ದ ಈತನ ತಂದೆ ತರಭೇತಿ ನೀಡಲು ಅಣಿಯಾದರು. ಮೊದ ಮೊದಲು ತಂದೆಯ ಗರಡಿಯಲ್ಲೇ ಪಳಗಿದ ಈ ಪ್ರತಿಭೆ ಇಂದು ರಾಜ್ಯ ಮಟ್ಟದ ಪ್ರತಿಭಾವಂತ ಈಜುಗಾರನಾಗಿ ರೂಪುಗೊಂಡಿದ್ದಾನೆ. ಅಂದ ಹಾಗೆ ಈತನ ಹೆಸರು ಗೌತಮ್.            ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರಿನ ಪುರಂದರ ಮತ್ತು ಹೇಮಾಮಾಲಿನಿ ದಂಪತಿಯ ಪುತ್ರನಾದ ಗೌತಮ್ ತನ್ನ ಐದನೇ ವಯಸ್ಸಿಗೆ ಸ್ವಿಮ್ಮಿಂಗ್ ಕಲಿಕೆ ಆರಂಭಿಸಿದ. ಪ್ರತ...
Image
                                                              ಅಯನಾಳ ಕಲಾಪಯಣ            ಈ ಪುಟಾಣಿ ಸಾಮಾನ್ಯಳಂತವಳಲ್ಲ. ಏಕಕಾಲದಲ್ಲಿ ಎರಡೂ ಕೈಯಿಂದ ಬೇರೆ ಬೇರೆ ತಾಳಗಳನ್ನು ಹಾಕುತ್ತಾ, ಒಂದು ಕಣ್ಣಿನ ಹುಬ್ಬನ್ನು ಹಾರಿಸುತ್ತಾ (ರೇಚಿತ), ೬೦ ಸಂವ ತ್ಸರಗಳ ಹೆಸರನ್ನು ಪಟಪಟನೆ ಹೇಳುವ ಚತುರಳೀಕೆ. ಅಷ್ಟೇಕೆ ೭೨ ಮೇಳಕರ್ತ ರಾಗ ಗಳ ಹೆಸರುಗಳನ್ನು, ರಾಗಚಕ್ರ, ಮೇಳ ಸಂಖ್ಯೆ, ಆರೋಹಣ-ಅವರೋಹಣ ಸ್ವರಗಳನ್ನು ನಿಖರವಾಗಿ ಹೇಳಬಲ್ಲಳು. ಅಲ್ಲದೆ ಸಂವತ್ಸರಗಳು, ನಕ್ಷತ್ರ. ಮಾಸ, ತಿಥಿಗಳ ಹೆಸರು ಹಾಗೂ ಭಗವದ್ಗೀತೆ, ನಾಟ್ಯಶಾಸ್ತ್ರ-ಅಭಿನಯ ದರ್ಪಣದ ಆಯ್ದ ಶ್ಲೋಕಗಳನ್ನು, ಸ್ತೋತ್ರ-ಸೂಕ್ತಗಳನ್ನು ನಿರರ್ಗಳವಾಗಿ ಹೇಳಬಲ್ಲ ಈ ಚತುರೆಯ ಹೆಸರು ಆಯನಾ.           ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವಾಸಿಸುವ ಈಕೆ  ಭಾರತೀಯ ಕಲೆಗಳ ತರಬೇತಿ ಕೇಂದ್ರ ರಂಗಭಾರತ...
Image
        ಕಲಾ ವಲಯದ ಅಕ್ಷಯ ಪಾತ್ರೆ                                ಯಾವುದೋ ಒಂದು ಕ್ಷೇತ್ರದಲ್ಲಿ ಪ್ರತಿಭೆ ಎಂದು ಗುರುತಿಸಿಕೊಳ್ಳುವುದು ಸಹಜ. ಆದರೆ ಈ ಪ್ರತಿಭೆಯ ಮೇಲೆ ಕಲಾಶಾರದೆಯ ಒಲವು ಎಷ್ಟಿದೆ ಎಂದರೆ ಬಾಲ್ಯದಲ್ಲೇ ಕಲಾವಲಯವು ಈಕೆಯತ್ತ ಸೆಳೆಯಿತು. ಭರತನಾಟ್ಯ, ಸಂಗೀತ, ಕವನ ವಾಚನ, ಗೈಡ್ಸ್, ರಂಗೋಲಿ .. ಅಬ್ಬಾ..! ಒಂದಾ ಎರಡಾ..! ಹೀಗೆ ಹಲವು ಕಲಾ ಪ್ರಕಾರವನ್ನು ಎಳೆ ಪ್ರಾಯದಲ್ಲೇ ವರಿಸಿಕೊಂಡು ಅನೇಕ ಪ್ರಶಸ್ತಿಗಳನ್ನು ಬಾಚಿದ ಈಕೆಯ ಹೆಸರು ಅಕ್ಷತಾ ಕೊಂಕೋಡಿ.            ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಎರಡನೇ ವರ್ಷದ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಈಕೆಯ ಕುಟುಂಬ ಸಾಹಿತ್ಯ ಕ್ಷೇತ್ರದಲ್ಲಿ ಸದಾ ಮುಂದು. ಆ ತರೇನ ಮಗಳೂ ಕೂಡಾ ಬಹುಮುಖಿಯಾಗಿ ರೂಪುಗೊಂಡಳು. ಈಕೆಯ ಕಣ್ಣಿಗೆ ಮೊದಲು ಬಿದ್ದದ್ದು ಸಂಗೀತ ಕ್ಷೇತ್ರ. ತಾನು ಚಿಕ್ಕಂದಿನಲ್ಲಿರುವಾಗಲೇ ಹಾಗೊಮ್ಮೆ ಹೀಗೊಮ್ಮೆ ಹಾಡು ಗುನುಗುತ್ತಿದ್ದಳು. ಆದರೆ ಮೂರನೇ ತರಗತಿಯಲ್ಲಿ ಪ್ರತಿಭಾ ಕಾರಂಜಿಗೆ ಸ್ಪರ್ಧಿಸುವುದರ ಜೊತೆ ಪ್ರಥಮ ಸ್ಥಾನ ತೆಗೆದೇ ಬಿಟ್ಟಳು, ಅಲ್ಲಿಂದ...