ಯುವ ಪ್ರತಿಭೆಯ ಗಾಯನ ಸಿಂಚನ ಇವರು ಪ್ರಬುದ್ದ ಕಂಠದ ಹಾಡುಗಾರ್ತಿ. ತನ್ನ ಹಾಡಿನ ಮುಖೇನವೇ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸುವ ಪ್ರತಿಭೆ. ವೇದಿಕೆಯ ಎದುರು ಅದೆಷ್ಟೇ ಪ್ರೇಕ್ಷಕರಿದ್ದರೂ ನಿರ್ಭೀತಳಾಗಿ ಹಾಡುವ ಚಕ್ಯತೆ. ಅಂದ ಹಾಗೆ ಈ ಗಾನಸುದಾಮಣಿಯ ಹೆಸರು ಸಿಂಚನ್ ದೀಕ್ಷಿತ್. ಊರು ಉದ್ಯಾನನಗರಿ ಬೆಂಗಳೂರು. ಬಾಲ್ಯದಲ್ಲಿ ಸಂಗೀತದತ್ತ ತುಸು ಜಾಸ್ತಿ ಒಲವು. ಇದಕ್ಕೂ ಕಾರಣವಿದೆ, ಸೋದರತ್ತೆ ನಿರ್ಮಲಾ ಕುಲಕರ್ಣಿ ಪ್ರಬುದ್ದ ಗಾಯಕರು. ಅಲ್ಲದೆ ಮುತ್ತಜ್ಜ ಕೃಷ್ಣಮೂರ್ತಿ ಪುರಾಣಿಕ್ ಸಾಹಿತ್ಯದಲ್ಲಿ ಅಭಿರುಚಿ ಹೊಂದಿದವರು. ತುಂಬು ಕುಟುಂಬದಲ್ಲಿ ಬೆಳೆದ ಸಿಂಚನ್‌ರಿಗೆ ಸಹಜವಾಗಿಯೇ ಸಂಗೀತ ಬೆನ್ನು ಹತ್ತಿತು. ಬಾಲ್ಯದಿಂದಲೇ ಗೀತಾ ಹೆಗ್ಡೆ ಅವರ ಬಳಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಹೆಚ್ಚಿನ ಕಲಿಕೆಗಾಗಿ ಹೊಂಬಾಳೆ ಪ್ರತಿಭಾ ರಂಗವನ್ನು ಸೇರಿಕೊಂಡರು. ಇಲ್ಲಿ ಎಚ್. ಫಲ್ಗುಣ ಅವರು ಸುಗಮ ಸಂಗೀತಕ್ಕೆ ತಳಹದಿಯನ್ನು ಕಲಿಸಿಕೊಟ್ಟರು. ಇಲ್ಲಿಂದ ವೇದಿಕೆಯಲ್ಲಿ ಮೈಕ್ ಹಿಡಿದು ನಾನೂ ಹಾಡಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತಂತೆ. ರಿಯಾಲಿಟಿಯ ’ರಿಯಲ್’ ಟಚ್: ಈ ಟಿ.ವಿ ಕನ್ನಡದಲ್ಲಿ ಪ್ರಸಾರವಾಗಿತ್ತಿದ್ದ ’ಎದೆ ತುಂಬಿ ಹಾಡಿವೆನು’ ಎಂಬ ರಿಯಾಲಿಟೀ ಶೋ ಮುಖೇನ ಪರಿಚಿತರಾದ ಸಿಂಚನ್‌ರಿಗೆ ಮುಂದಿನ ದಿನದಲ್ಲಿ ಮುಟ್ಟಿದ್ದೆಲ್ಲಾ ಚಿನ್ನ..! ತನ್ನ ಮೊದಲ ಹಾಡಿನಲ್ಲೇ ೧೦೦ ಅಂಕ ಗಿಟ್ಟಿಸಿಕೊಂಡ ಇವರು, ಗಾಯಕ ಎಸ್.ಪಿ ಬಾಲಸುಬ್ರಹ್ಮ...