ಕಿಚ್ಚ ಸುದೀಪ್ಗೂ ಜುಲೈ 6ಕ್ಕೂ
ನಂಟೇನು ಗೊತ್ತಾ?
‘ಹುಚ್ಚ’
ಚಲನಚಿತ್ರ ಬಿಡುಗಡೆಯಾಗಿ ಇಂದಿಗೆ 14 ವರ್ಷಗಳಾಗಿದೆ.
2001ರ ಜುಲೈ 06 ರಂದು
ಈ ಚಿತ್ರ ಬಿಡುಡೆಯಾಯಿತು.
ಈ ಚಿತ್ರತಂಡದೊಡನೆ ಕೆಲಸ
ಮಾಡಿದ ಅನುಭವ ನನ್ನ ಮನಸ್ಸಲ್ಲಿ
ಈಗಲೂ ಹಚ್ಚಹಸಿರಾಗಿದೆ. ಆ ಕ್ಷಣವನ್ನು ಮತ್ತೊಮ್ಮೆ
ಮರುಕಳಿಸುತ್ತೇನೆ” ಎಂದು ಹೇಳಿದವರು ಬೇರಾರು
ಅಲ್ಲ ನಟ ಕಿಚ್ಚ ಸುದೀಪ್.
ಹೌದು
.. ಕಿಚ್ಚ ಸುದೀಪ್ ಅವರು ತಮ್ಮ
ಟ್ವಿಟರ್ ಖಾತೆಯಲ್ಲಿ ಈ ಹೇಳಿಕೆಯನ್ನು ಪ್ರಸ್ತಾಪಿಸಿದ್ದಾರೆ.
ಸುದೀಪ್ ಅವರು ಈ ರೀತಿ
ಹೇಳಿಕೆ ನೀಡಲೂ ಕಾರಣವಿದೆ. ಓಂ
ಪ್ರಕಾಶ್ ನಿರ್ದೇಶನದ ‘ಹುಚ್ಚ’ ಚಲನಚಿತ್ರವು ಸುದೀಪ್
ಅವರ ಸಿನಿ ಜೀವನದ ಮಹತ್ವದ
ಚಿತ್ರವಾಗಿತ್ತು. ಈ ಚಿತ್ರಕ್ಕೂ ಹಿಂದೆ
ಸುದೀಪ್ ಅಭಿನಯಿಸಿದ ‘ಸ್ವರ್ಶ’ ಚಿತ್ರ ಬಿಡುಗಡೆಯಾಗಿ
ಭಾಕ್ಸ್ ಆಫೀಸ್ನಲ್ಲಿ ಸದ್ದು
ಮಾಡಿತ್ತು. ಹೀಗಿರುವಾಗ ಸಾಮಾನ್ಯವಾಗಿಯೇ ಸುದೀಪ್ ಮೇಲೆ ಹೆಚ್ಚಿನ
ಜವಾಬ್ಹಾರಿ ಇತ್ತು. ‘ಹುಚ್ಚ’ ಚಲನಚಿತ್ರವು
ಸುದೀಪ್ ಅವರ ಕನಸನ್ನು ಹುಸಿಮಾಡಲಿಲ್ಲ.
ಈ ಚಿತ್ರದ ನಟನೆಗೆ
ಸುದೀಪ್ ಅವರಿಗೆ ಫಿಲ್ಮ್ ಫೇರ್
ಅವಾರ್ಡ್ ಕೂಡಾ ಒಲಿಯಿತು. ಈ
ಚಿತ್ರದಲ್ಲಿ ಸುದೀಪ್ ಅವರ ಜೊಡಿಯಾಗಿ
ರೇಖಾ ವೇದವ್ಯಾಸ್ ಅವರು ನಟಿಸಿದ್ದರು.
ಜುಲೈ 6 ಕ್ಕೂ ಸುದೀಪ್
ಅವರಿಗೂ ಇವಿಷ್ಟೇ ನಂಟಲ್ಲ. ಸುದೀಪ್
ಅಭಿನಯದ ರಾಜಮೌಳಿ ನಿರ್ದೆಶನದ ‘ಈಗ’
ತೆಲುಗು ಚಲನಚಿತ್ರ ಕೂಡಾ 2012 ನೇ ಇಸವಿಯ
ಇದೇ ದಿನ ಬಿಡುಗಡೆಯಾದ್ದು. ಈ
ಚಿತ್ರವು ತೆಲುಗು ಮತ್ತು ಹಿಂದೆ
ಎರಡು ಬಾಷೆಯಲ್ಲಿ ಬಿಡುಗಡೆಯಾಗಿದ್ದು ಸುದೀಪ್ ಅವರ ನಟನೆಗೆ
ಶಹಬ್ಬಾಸ್ ಬಂತಲ್ಲದೆ ಈ ಚಿತ್ರದಲ್ಲಿ ನೆಗೆಟಿವ್
ರೋಲ್ಗೆ ಹಲವಾರು
ಸುದೀಪ್ ಅವರನ್ನು ಅವಸುತ್ತಾ ಬಂತು.
ನಂದ ಕಿಶೋರ್ ನಿರ್ದೇಶನದ ಸುದೀಪ್
ಅಭಿನಯದ ‘ರನ್ನ’ ಚಲಚನಿತ್ರ ಈಗಾಗಲೇ
ಬಿಡುಗಡೆಯಾಗಿದ್ದು ಭಾಕ್ಸ್ ಆಫೀಸ್ನಲ್ಲಿ
ಹೌಸ್ಫುಲ್ ಪ್ರದರ್ಶನ ನೀಡುತ್ತಿದೆ.
ಒಟ್ಟಿನಲ್ಲಿ
ಹೇಳುವುದಾದರೆ ಸುದೀಪ್ ಅವರ ಸಿನಿ
ಜೀವನವನ್ನು ಬದಲಾಯಿಸಿದ ಎರಡು ಚಿತ್ರಗಳು 6ನೇ
ತಾರೀಕಿನಂದು ಬಿಡುಗಡೆಯಾಗಿದ್ದು ಸುದೀಪ್
ಅವರ ಸಿನಿ ಜೀವನದಲ್ಲಿ ಈ ದಿನ ಅತ್ಯಂತ
ಅಪೂರ್ವ ಕ್ಷಣ ಎಂದು ಹೇಳಬಹುದು.

Comments
Post a Comment