Posts

Showing posts from 2012
Image
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಇಂದಿನ ನವ ಯುಗದಲ್ಲಿ ಯುವಜನಾಂಗಕ್ಕೆ ಕನ್ನಡಕ್ಕಿಂತ ಹೆಚ್ಚಾಗಿ ಆಂಗ್ಲ ಬಾಷೆಯ ಮೇಲೇ ಪ್ರೀತಿ ಹೆಚ್ಚು. ಕನ್ನಡ ಎಂದರೆ ಎನ್ನಡ...??? ಹೇಳುವಷ್ಟು ಜನ ಬೇರೆ ರಾಜ್ಯದವರು ಕನ್ನಡ ನಾಡಲ್ಲಿ ತುಂಬುತ್ತಿದ್ದಾರೆ. ನಾವು ಬಿಡಿ ತುಂಬಾ ಉದಾರಿಗಳು.    ನಮಗೆ ಬದುಕಲು ಕನ್ನಡದ ನೆಲ ಬೇಕು, ಕುಡಿಯಲು ಕನ್ನಡದ ನೀರು ಬೇಕು ಆದರೆ ಮಾತನಾಡಲು ಕನ್ನಡ ಬೇಡ..ಇದ್ಯಾವ ನ್ಯಾಯ ಸ್ವಾಮಿ..??? ನವೆಂಬರ್ ೧ ಬಂತೆಂದರೆ ಒಂದು ದಿನ ಕನ್ನಡ ಬಾವುಟ ಹಾರಿಸಿ, ಕಷ್ಟ ಪಟ್ಟು ಉದ್ದುದ್ದ ಕನ್ನಡ ಮಾತನಾಡಿದರೆ ಸಾಕಾಗುವುದಿಲ್ಲ ಕನ್ನಡಕ್ಕೆ ಅದರದೇ ಆದ ಸ್ಥಾನಮಾನವಿದೆ ಅದನ್ನ ಕಡೇ ಕಾಲದ ವರೆಗೂ ಉಳಿಸಬೇಕು. ಯುವಶಕ್ತಿ ಗಿಂತ ಮಿಗಿಲಾದ ಶಕ್ತಿ ಬೇರೊಂದಿಲ್ಲ ಇಂದಿನ ಹೆಚ್ಚು ಯುವಜನಾಂಗಕ್ಕೆ ’ನಿನ್ನ ಹೆಸರೇನು..?’ ಎನ್ನುವುದಕ್ಕಿಂತ ಹೆಚ್ಚಾಗಿ ’ವಾಟ್ ಈಸ್ ಯುವರ್ ನೇಮ್..?’ಎನ್ನುವವನಿಗೆ ನಮ್ಮಲ್ಲಿ ಹೆಚ್ಚಿನ ಮರ್ಯಾದ ಎಂದುಕೊಂಡಿದ್ದಾರೆ. ವಿದೇಶಿಯತೆಯಲ್ಲಿಲ್ಲದ ಸಂಸ್ಕತಿ ಮತ್ತು ಮರ್ಯಾದೆ ನಮ್ಮ ಕರ್ನಾಟಕದ ಕನ್ನಡದಲ್ಲಿದೆ. ಆದರೆ ಇದರ ಅರಿವು ನಮಗಿಲ್ಲ. ನಮ್ಮ ಸಂಸ್ಕತಿಯನ್ನು ಅದೆಷ್ಟೋ ವಿದೇಶಿಯರೂ ಕಂಡು ಕೊಂಡಾಡಿದ್ದಾರೆ. ಆದರೆ ನಮಗೆ ನಮ್ಮ ಮನೆ ತುತ್ತಿಗಿಂತ ಬೇರೆ ಯವರ ಮನೆ ಮೇಲೇಕೆ ಕಣ್ಣು. ಮಾದ್ಯಮ, ಪತ್ರಿಕೆಯ, ಸಾಹಿತಿಗಳ ಮತ್ತು ಕನ್ನಾಡಾಭಿಮಾನಿಗಳ ಒಕ್ಕೊಲಿನ ಕೊರಗಿನಿಂದ ಶಾಸ್ತ್ರೀಯ ಸ್ಥಾನಮಾನವಂತೂ ದಕ್ಕಿದೆ. ಕನ್ನಡ...
Image
                                              ವಿಕಸಿಸುತ್ತಿರುವ 'ವಿಕಸನ' ಕೈ ಕಟ್ಟಿ ಕೂತರೆ ಏನನ್ನೂ ಸಾಧಿಸಲು ಅಸಾದ್ಯ ಅದರ ಬದಲು ಸಿಕ್ಕ ಅವಕಾಶವನ್ನು ಚೊಕ್ಕವಾಗಿ ಬಳಸಿದರೆ ಇಟ್ಟ ಕನಸಿನೆಡೆಗೆ ದಿಟ್ಟ ಹಜ್ಜೆ ಹಾಕಬಹುದು. ಬಹು ದಿನದಿಂದ ಇದ್ದ ಕನಸು ಸಾಕ್ಷಾತಗಕಾರಗೊಂಡ ಖುಷಿಯಲ್ಲಿದ್ದಾರೆ ಪುತ್ತೂರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು. ಈ ಮೊದಲೇ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ’ವಿಕಸನ’ ಎಂಬ ಮಾಸಪತ್ರಿಕೆ ತರುತ್ತಿದ್ದು ಪತ್ರಿಕೆಯನ್ನು ಗಮನಿಸಿದ ಪ್ರಜಾವಾಣಿ ಪತ್ರಿಕೆಯ ಅಂಕಣಕಾರ ಡಾ.ಗುರುರಾಜ ಕರ್ಜಗಿ ’ನಾನೂ ನಿಮ್ಮ ಪತ್ರಿಕೆಗೆ ಬರೆಯುತ್ತೇನೆ’ ಎಂದಿರುವುದು ಈ ವಿದ್ಯಾರ್ಥಿಗಳ ಶ್ರಮಕ್ಕೆ ಸಂದ ಗೌರವ. ಅಂದ ಹಾಗೆ ಈ ವಿಭಾಗ ಇಂದು ಸುದ್ದಿಯಲ್ಲಿ ಮಾಡುತ್ತಿರುವುದು ವಿದ್ಯಾರ್ಥಿಗಲೇ ನಿರ್ಮಿಸಿದ ’ವಿಕಸನ ನ್ಯೂಸ್’ ಎಂಬ ಎಲೆಕ್ಟ್ರಾನಿಕ್ ಮೀಡಿಯಾದ ಮುಖೇನ. ಇದು ಕಾಲೇಜಿನಲ್ಲಿ ನಡೆದ ಎಲ್ಲಾ ಸಂಗತಿಗಳನ್ನು ಭಿತ್ತರಿಸುವ ದೂರದರ್ಶನವಾಗಿದ್ದು ಆಧುನೀಕತೆಗೆ ಒಗ್ಗಿಕೊಳ್ಳುವ ರೀತಿಯ ಬೆಳವಣಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕೊಂದು ಭದ್ರ ಬುನಾದಿ ಹಾಕುವಂತಿದೆ. ಯಾವುದೇ ಒಂದ...
Image
                                                        ರಾಗ 'ಅನು'ರಾಗ ಮೊಗ ತುಂಬ ನಗು. ಮಧುರ ಕಂಠ. ಗಾಯನದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ಯ. ಇದರೊಡನೆ ಸದ್ದಿಲ್ಲದೆ ಅಭಿಮಾನಿ ವರ್ಗ ಸಂಪಾದಿಸುತ್ತಿರುವ ಈ ಕರಾವಳಿ ಮೂಲದ ಗಾಯಕಿ ಅನುರಾಧ ಭಟ್. ಹೌದು, ದಕಿಣಕನ್ನಡ ಜಿಲ್ಲೆಯ ಮಂಗಳೂರಿನ ಬೊಂದೆಲ್‌ನ ನಿವಾಸಿ ಶ್ರೀಕೃಷ್ಣ ಭಟ್ ಮತ್ತು ಗಾಯತ್ರೀ ದಂಪತಿಯರ ಪುತ್ರಿಯಾದ ಅನುರಾಧ ಭಟ್‌ಗೆ ಸಂಗೀತವೇ ಸರ್ವಸ್ವ. ಈ ಲೋಕದಲ್ಲಿ ಈಕೆಗೆ ಎಷ್ಟು ಒಲವಿತ್ತೆಂದರೆ ಪದವಿ ಮುಗಿಸಿದ ಬಳಿಕ ಪ್ರತಿಷ್ಟಿತ ಕಂಪನಿಯಲ್ಲಿ ಈಕೆಗೆ ಉದ್ಯೋಗ ದೊರಕಿತು. ಆದರೆ ಸಂಗೀತ ಕ್ಷೇತ್ರದ ಸೆಳೆತ ಹೆಚ್ಚಿದ್ದುದರಿಂದ ಸಿಕ್ಕ ಅವಕಾಶಕ್ಕೆ ಬ್ರೇಕ್ ಹಾಕಿ ತನ್ನನ್ನು ಸಂಪೂರ್ಣವಾಗಿ ಸಂಗೀತ ಲೋಕದಲ್ಲಿ ತೊಡಗಿಸಿಕೊಂಡಳು. ಚಿಕ್ಕಂದಿನಲ್ಲಿ ಈಕೆಗೆ ಮೊದಲು ಕಣ್ಣು ಬಿದ್ದದ್ದು ಶಾಸ್ತ್ರೀಯ ಕಲೆ ಭರತನಾಟ್ಯ. ಬಾಲ್ಯದಲ್ಲಿ ’ಸಾಗರ ಸಂಗಮ’ ಎಂಬ ಚಲನಚಿತ್ರವನ್ನು ವೀಕ್ಷಿಸುತ್ತಿದ್ದ ಈಕೆ ಆ ಪಾರ್ಥದ ತರೇನ ಮುದ್ರಾ ಬಂಗಿಯನ್ನು ಪ್ರದರ್ಶ...
Image
       ಗ್ರಾಮೀಣ ಪ್ರದೇಶದ ಅಪರೂಪದ ವ್ಯಕ್ತಿ          ವೃತ್ತಿಯಲ್ಲಿ ಅಧ್ಯಾಪಕರಾಗಿದ್ದುಕೊಂಡು ಕೃಷಿಯೊಡನೆಯ ಇವರ ನಂಟು ಮೆಚ್ಚಲೇ ಬೇಕು; ಜೊತೆ ಅಳಿದುಳಿದ ಸಮಯವನ್ನು ಪೋಲುಮಾಡದೆ ಹಲವು ಹವ್ಯಾಸದತ್ತ ತೊಡಗಿಸಿರುವ ಅಪರೂಪದ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆ ಗ್ರಾಮದ ವೆಂಕಟರಮಣ ಭಟ್. ಇವರು ಪರಿಸರ ರಕ್ಷಣೆಗೆ ನೀಡುವ ಉತ್ತೇಜನವನ್ನು ಶ್ಲಾಘಿಸಲೇಬೇಕು. ಮರಗಳನ್ನು ಕಡಿದು ನಾಶಪಡಿಸುವ ಇಂದಿನ ಜಮಾನದಲ್ಲಿ ತನ್ನ ಸುತ್ತಲಿನ ಪರಿಸರವನ್ನು ಹಸಿರು ಮುಕ್ತವಾಗಿರಿಸಿರುವುದು ಪರಿಸರದೊಡನೆಯ ಇವರ ನಂಟನ್ನು ಎತ್ತಿ ತೋರಿಸುತ್ತದೆ.          ಸುಮಾರು ನಲವತೈದು ವರ್ಷದ ಹಿಂದೆ ಮರುಭೂಮಿಯಂತಿದ್ದ ಭೂಮಿಯನ್ನು ತೋಟವಾಗಿ ಮಾರ್ಪಡಿಸಿ ಮೂರು ಸಾವಿರದಷ್ಟು ವಿವಿಧ ಜಾತಿಯ ಗಿಡಗಳನ್ನು ಬೆಳೆಸಿದ್ದಾರೆ. ಸಾಮಾನ್ಯವಾಗಿ ಹಳ್ಳಿ ಮದ್ದಿನಲ್ಲಿ  ಬಳಸುವ ಔಷಧಿ ಗಿಡಗಳು ಸದಾ ಇವರ ಮನೆ ಮುಂದೆ ಲಬ್ಯ; ಅದರಲ್ಲೂ ಅಳಿವಿನಂಚಿನಲ್ಲಿರು ಹಲವು ಗಿಡಗಳನ್ನು ಪೋಷಿಸುತ್ತಿರುವ ಭಟ್ಟರದ್ದು ವಿಶೇಷ ಸಾಧನೆಯೇ ಸರಿ. ಇವರ ತೋಟದಲ್ಲಿ ಪುಷ್ಪ ಸಾಮ್ರಾಜ್ಯಕ್ಕೂ ಜಾಗವಿದೆ. ೨೫ ರೀತಿಯ ಬೆಟ್ಟದಾವರೆ, ಟುಡೆ ಟುಮಾರೋ ಯೆಸ್ಟರ್‌ಡೇ ಎಂಬಂತಹ ಅಪರೂಪದ ಗಿಡವಿದ್ದು ಇದರ ಹೂವು ಮೂರು ದಿನ ಮೂರು ಬಣ್ಣಗಳಲ್ಲಿ ಕಂಗಳಿಸುತ್ತದೆ. ’ಕೂವೆ’ ಎಂಬ...
Image
                                       ಒಮ್ಮೆ ಬನ್ನಿ 'ದೇವರಗುಂಡಿಗೆ'         ಸುತ್ತಲೂ ಕಾನನ. ಸುಮಾರು ಅರ್ಧ ಕಿಲೋ ಮೀಟರ್ ಹಿಂದೆಯೇ ನೀರಿನ ಜುಳು ಜುಳು ನಾದದ ದನಿ. ಕುತೂಹಲದಿಂದ ಹಾಗೆಯೇ ಕಾಲಳತೆಯ ದೂರ ಕ್ರಮಿಸಿದರೆ ಮನದಲ್ಲಿ ಜುಂ..! ಆಗುವುದಂತೂ ಖಂಡಿತ. ಏಕಂತೀರಾ ಸುಮಾರು ೧೦ ರಿಂದ ೧೫ ಅಡಿ ಎತ್ತರದಿಂದ ಬೀಳುವ ನೀರಿನ ಜಲಧಾರೆ. ಅಂದ ಹಾಗೆ ಇದು ದೇವರಗುಂಡಿ ಜಲಪಪಾತದ ಸೊಬಗು.  ಈ ಜಲಪಾತವಿರುವುದು ದಕ್ಷಿಣಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿನಾಡ ಭಾಗದಲ್ಲಿ. ಸುಳ್ಯ ಪಟ್ಟಣದಿಂದ ಮಡಿಕೇರಿ ಮಾರ್ಗವಾಗಿ ಸುಮಾರು ಹನ್ನೊಂದು ಕಿಲೋಮೀಟರ್ ಸಾಗಿದರೆ ಅರಂತೋಡು ಎಂಬ ಪುಟ್ಟ ಪಟ್ಟಣ ಸಿಗುತ್ತದೆ. ಇಲ್ಲಿಂದ ಬಲ ಭಾಗಕ್ಕಿರುವ ರಸ್ತೆಯಲ್ಲಿ ಕೇವಲ ಆರು ಕಿಲೋ ಮೀಟರ್ ತೊಡಿಕ್ಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ.  ದೇವಾಲಯದ ದರುಷನ ಮಾಡಿ ಇದೇ ರಸ್ತೆಯಲ್ಲೇ ಹದಿನೈದು ನಿಮಿಷ ಕಾಲ್ನಡಿಗೆಯಲ್ಲೇ ಹೋದರೆ  ’ಅಮೆ ಮನೆ’ ಎಂಬ ಮನೆ ಸಿಗುತ್ತದೆ. ಇಲ್ಲಿಂದ ಅಡಿಕೆ ಹಾಗೂ ಏಲಕ್ಕಿ ತೋಟದಲ್ಲಿ ಸಾಗಿದರೆ ಕೇವಲ ಐದೇ ನಿಮಿಷದಲ್ಲಿ ದೇವರಗುಂಡಿ  ಜಲಧಾ...
Image
                                      'ನೇಹಾ'ಳ ಕಲಾ ಪ್ರೇಮ           ಹಾಡುವಿಕೆ ಇರಲಿ ಕುಣಿಯುವಿಕೆ ಇರಲಿ ಈಕೆಗೆ ಪ್ರಿಯ. ಈಕೆಯ ನವಿರಾದ ಕುಂಚದಿಂದ ಹೊರಹೊಮ್ಮಿದ ಚಿತ್ರವನ್ನು ನೋಡುವುದೇ ಅಂದ. ಕಲಿಯುವಿಕೆಯಲ್ಲಂತೂ ಬ್ರಿಲಿಯೆಂಟ್ ಸ್ಟೂಡೆಂಟ್ ಜೊತೆ ಹಲವು ಹವ್ಯಾಸಗಳ ಸ್ನೇಹಿಯಾಗಿರುವ ಈಕೆ ಕರಾವಳಿ ಪ್ರತಿಭೆ ನಿಶಾ ಬಿ.ರಾವ್. ಮಂಗಳೂರಿನ ಉರ್ವಾದ ಡಾ.ರಮಾನಂದ ರಾವ್ ಮತ್ತು ಲಲಿತಾ ಕಲ್ಕೂರ್ ಅವರ ಮುದ್ದಿನ ಪುತ್ರಿಯಾದ ನೇಹಾಳ ಮನೆಯೇ ಸಂಗೀತ ಕುಟುಂಬ. ತಾಯಿ ಸಂಗೀತದಲ್ಲಿ ಪಳಗಿದ್ದುದರಿಂದ ಈ ಕ್ಷೇತ್ರ ಈಕೆಯತ್ತ ಬಾಲ್ಯದ ಹರೆಯದಲ್ಲೇ ಸೆಳೆಯಿತು. ತನ್ನ ಆರನೇ ವಯಸ್ಸಲ್ಲಿ ಮಧುರ ಕಂಠದಿಂದ ಹಾಡಲು ಪ್ರಾರಂಭಿದ ನೇಹಾ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತದಲ್ಲಿ ಪರಿಪೂರ್ಣಳಾದಳು. ಈಗಾಗಲೇ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ಮುಗಿಸಿದ್ದು ಹಲವೆಡೆ ಸಂಗೀತದ ಕಂಠವನ್ನು ಹರಿಸಿರುವಳು. ಒಂದನೇ ತರಗತಿಯಿಂದಲೇ ಭರನಾಟ್ಯ ಕಲಿಕೆ. ಗುರುಗಳಾದ ವಿದುಷಿ ಸುಮಂಗಲಾ ರತ್ನಾಕರ್ ಗರಡಿಯಲ್ಲಿ ಪಳಗುತ್ತಿರುವ ಈ ಪ್ರತಿಭೆ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌...
Image
                                          ರಂಝಾನ್ ಆಚರಣಾ ವಿಶೇಷ ಮಾನವ ಕುಲಕ್ಕೆ ಅಥವಾ ಯಾವುದೇ ಜೀವಿಗಳಿಗೆ ಹಸಿವು ಎಂಬುದು ಬಹಳ ಮರ್ಮ ಪ್ರಧಾನವಾದದ್ದು. ಹಸಿದ ಒಬ್ಬ ವ್ಯಕ್ತಿಗೆ ಇನ್ನೊಬ್ಬರ ಕಷ್ಟ ನೋವಿನಬಗ್ಗೆ ಬಹು ಬೇಗ ಅರಿವು ಮೂಡುತ್ತದೆ. ಮಾನವನು ಹಸಿದವನಾಗಿದ್ದರೆ ಬಹುಬೇಗ ಜಗತ್ತಿನ ಕಷ್ಟ-ಕಾರ್ಪಣ್ಯಗಳ ಬಗ್ಗೆ ಅರಿವಾಗುತ್ತದೆ. ಇದಕ್ಕೆ ಉತ್ತಮಉದಾಹರಣೆಯಾಗಿದೆ ರಂಝಾನ್ ಮಾಸದಲ್ಲಿ ಮುಸ್ಲಿಂ ಭಾಂಧವರು ಆಚರಿಸುವ ಉಪವಾಸ ಕ್ರಮ. ಪ್ರವಾದಿ ಮಹಮ್ಮದ್ ಮುಸ್ತಫಾ(ಸ.ಅ) ಸ್ವಲ್ಲಂ ೧೪೦೦ ವರ್ಷಗಳ ಹಿಂದೆ ತನ್ನ ಉಮ್ಮತ್ (ಅನುಯಾಯಿಗಳ) ಈ ಕ್ರಮವನ್ನು ಕಲಿಸಿಕೊಟ್ಟರು. ಅರಬೀ ಮಸದ ಪ್ರಕಾರ ಶಅಬಾನ್ ಮಾಸದ ಚಂದ್ರಾಸ್ತಮಾನಗೊಂಡು ರಂಝಾನ್ ಮಾಸದ ಚಂದ್ರೋದಯವಾದಾಗ ಉಪವಾಸದ ತಿಂಗಳು ಆರಂಭವಾಗುತ್ತದೆ. ಎಲ್ಲದಕ್ಕೂ ಕಾಲಾವಕಾಶಗಳ ಮಿತಿಗಳಿರುವಂತೆ ಈ ಉಪವಾಸ ವೃತಕ್ಕೂ ನಿಭಂಧನೆಗಳಿವೆ. ಮುಸ್ಲಿಂ ಭಾಂಧವರು ಈ ಕ್ರಮವನ್ನು ಕಡ್ಡಾಯವಾಗಿ ಆಚರಿಸುತ್ತಾರೆ. ರಂಝಾನ್ ತಿಂಗಳ ಪ್ರತೀ ದಿನದಲ್ಲೂ ಸೂರ್ಯೋದಯಕ್ಕೆ ಮುಂಚಿತವಾಗಿ ಆಹಾರ ಪಾನೀಯಗಳನ್ನು ಉಪಯೋಗಿಸುತ್ತಾರೆ. ಸೂರ್ಯೋದಯದಿಂದ ನಂತರ ಸೂರ್ಯಾ...
Image
            ಶೋಭಿಸುತ್ತಿರುವ ಸುಶೋಭಿತಾ       ಕ್ರಿಯಾಶೀಲತೆ ಮತ್ತು ಸೃಜನಶೀಲತೆಯು ಜೊತೆಗಿದ್ದರೆ ಯಶಸ್ಸಿನೆಡೆಗೆ ತಾನಾಗೆ ಮುಂದುವರೆಯಬಹುದು ಎಂಬುದಕ್ಕೆ ಈಕೆ ಸ್ಪಷ್ಟ ಸಾಕ್ಷಿ. ಭರತನಾಟ್ಯ, ಹಾಡುಗಾರಿಕೆ, ಕ್ರೀಡಾ ವಲಯ ಸೇರಿದಂತೆ ಇತರೇ ಕಲಾ ಚಟುವಟಿಕೆಗಳಲ್ಲಿ ಸಕ್ರೀಯಳಾಗಿರುವ ಈಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರ ಹುಡುಗಿ ಸುಶೋಭಿತಾ.       ಈಕೆ ಸಂಗೀತದತ್ತ ಚಿತ್ತ ಹರಿಸಿದ್ದು ಏಳನೇ ವಯಸ್ಸಲ್ಲಿ. ಶಾಸ್ತ್ರೀಯ ಸಂಗೀತದ ಪ್ರಮುಖ ತಳಹದಿ ಹಾಕಿದವವರು ದಿವಗಂತ ವಿಧ್ವಾನ್ ಶ್ರೀ ಕಾಂಚನ ನಾರಾಯಣ ಭಟ್. ಮುಂದಿನ ಪಯಣ ಮುಂದುವರೆದದ್ದು ವಿಧೂಷೀ ಶ್ರೀಮತಿ ವೀಣಾ ರಾಘವೇಂದ್ರರವರಲ್ಲಿ. ಸುಗಮ ಸಂಗೀತವೂ ಈಕೆಯ ಮೆಚ್ಚಿನ ಕ್ಷೇತ್ರ. ಮೊದಲು ಕಿರಣ್ ಕುಮಾರ್ ರವರಲ್ಲಿ ಪಳಗಿದ ಸುಶೋಭಿತಾ ಮುಂದೆ ಸ್ವಂತ ಕಾಲಲ್ಲಿ ನಿಲ್ಲಲು ಪ್ರಾರಂಬಿಸಿದಳು.      ಕರ್ನಾಟಕ ಶಾಸ್ತ್ರೀಯ ಸಂಗೀತದ ಜ್ಯೂನಿಯರ್ ಗ್ರೇಡ್‌ನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಸದ್ಯ ಸೀನಿಯರ್ ಗ್ರೇಡ್‌ನ ಪರಿಕ್ಷಾ ಹಂತದಲ್ಲಿರುವಳು. ಪಿ.ಯು.ಸಿ ಯಲ್ಲಿರುವಾಗ  ಯುನಿವರ್ಸಿಟಿ ವಲಯದವರು ಆಯೋಜಿಸಿದ ರಾಜ್ಯಮಟ್ಟದ ಗಾನ ಸ್ಪರ್ದೆಯಲ್ಲಿ ಮಂಗಳೂರಿನಲ್ಲಿ ನಡೆದ ಮೊದಲ ಹಂತದಲ್ಲಿ ಪ್ರಥಮ ಸ್ಥಾನ, ಮಂಡ್ಯದಲ್ಲಿ ನಡೆದ...
Image
                                      'ವರ್ಷಾ' ಕ್ರೀಡಾರಂಗದ ಹರ್ಷ             ಬಾಲ್ಯದಿಂದಲೇ ಈಕೆಗೆ ವಾಲಿಬಾಲ್ ಕ್ರೀಡೆ ಎಂದರೆ ಪಂಚಪ್ರಾಣ. ಶಾಲಾ ಮಟ್ಟದ ವಾಲಿಬಾಲ್ ಟೀಂ ನ ನಾಯಕಿಯೂ ಹೌದು. ಜೊತೆ ಉತ್ತಮ ಸ್ಮಾಷರ್ ಮತ್ತು ಬೆಸ್ಟ್ ಅಟ್ಯಾಕರ್. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ರಾಷ್ಟ್ರಮಟ್ಟವನ್ನು ಪ್ರತಿನಿದಿಸುತ್ತಿದ್ದಳು. ಆದರೆ ಏಳನೇ ತರಗತಿಯಲ್ಲಿ ಈ ಅವಕಾಶ ಈಕೆಯ ಕೈ ತಪ್ಪಿತು. ಇಷ್ಟಕ್ಕೇ ಸುಮ್ಮನಾಗದೆ ತನ್ನ ಪಥವನ್ನು ಬದಲಿಸಿ ಅಥ್ಲೆಟಿಕ್ ರಂಗದಲ್ಲಿ ರಾಷ್ಟ್ರಮಟ್ಟದ ಪ್ರತಿಭೆಯಾಗಿ ಹೊರಹೊಮ್ಮಿದ ಈಕೆಯ ಹೆಸರು ವರ್ಷಾ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉರ್ವಾದ ನಿವಾಸಿಯದ ಈಕೆ ರೊಹಿತ್ ಪೂಜಾರಿ ಮತ್ತು ವಾಣಿ ದಂಪತಿಯರ ಮಗಳು. ತಾಯಿ ಸ್ವತಃ ಅಥ್ಲೆಟಿಕ್ ರಂಗದಲ್ಲಿ ಪಳಗಿರುವುದರಿಂದ ಬಾಲ್ಯದತ್ತವಾಗೇ ಈಕೆಗೆ ಕ್ರೀಡಾಸಕ್ತಿ ಮೈಗೂಡಿತು. ಬ್ರೇಕ್ ಕೊಟ್ಟ ಸಲಹೆ: ಚಿಕ್ಕಂದಿನಲ್ಲೇ ಈಕೆಯ ಆಸಕ್ತಿಯ ಕ್ಷೇತ್ರವಾಗಿದ್ದ ವಾಲಿಬಾಲ್ ಕ್ರೀಡೆಗೆ ತಂದೆ ಮತ್ತು ತಾಯಿ ಸಾಥ್ ನೀಡಿದರು. ಮುಂದೊಂದು ದಿನ ಈಕೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಬೇಕೆಂಬ ಇರಾದೆಯೂ ಕೋಚ್ ಲೋರ್ನ್ ಜೋಮ್ಸ್‌ರವರಿಗೆ ಇತ್ತು. ಒಂಬತ್ತನೇ ವ...
Image
                                                ಭ್ರಷ್ಟಾಚಾರ ಮುಕ್ತ 'ಮರ್ಕಂಜ'     ಅದೊಂದು ದಿನ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದ ಈ ಗ್ರಾಮ ಇಂದು ಭ್ರಷ್ಟಮುಕ್ತವಾಗುವುದರೆಡೆಗೆ ಸಾಗುತ್ತಿದೆ; ಸಾರ್ವಜನಿಕರ ನಿರಂತರ ಪ್ರೋತ್ಸಾಹ, ಮತ್ತು ಒಗ್ಗಟ್ಟಿನ ಬಲದಿಂದ ರಾಜ್ಯಾ    ದ್ಯಂತ ಗುರುತಿಸಲ್ಪಟ್ಟ ಗ್ರಾಮವೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ.     ಭ್ರಷ್ಟಾಚಾರ ಮುಕ್ತ ಗ್ರಾಮ ಎಂಬ ಹಣೆಪಟ್ಟಿಯಿರುವ ಇಲ್ಲಿ  ಈ ಹಿಂದೆ ಗ್ರಾಮ ಪಂಚಾಯತ್ ವಲಯದಿಂದಲೇ ಭ್ರಷ್ಟಾಚಾರ ತುಂಬಿತ್ತು. ಅಧಿಕಾರಿಗಳ ಕೈ ಗೆ ಬಿಸಿಮುಟ್ಟಿಸದಿದ್ದರೆ ಒಂದು ಪೈಲು ಕೂಡಾ ಮುಂದೆ ಹೋಗುತ್ತಿರಲಿಲ್ಲ; ಇದರಿಂದ ಜನತೆಗೆ ಪಂಚಾಯತ್‌ನ ಅನುದಾನ ದೊರಕುವುದಂತೂ ಕನಸಿನ ಮಾತು.     ಪಂಚಾಯತ್‌ಗೆ ಸರಕಾರದಿಂದ ಸವಲತ್ತು ಬಂದರೂ ಸುಮಾರು ೯೦ ಪ್ರತಿಶತದಷ್ಟು ಹಣ ಅಧಿಕಾರಿಗಳ ಪಾಲು, ಹೀಗಿದ್ದಾಗ ಗ್ರಾಮದ ಅಭಿವೃದ್ದಿ ಹೇಗೆ ಸಾದ್ಯ. ಇದರಿಂದ ಬೇಸತ್ತ ಹಲವರು ಮಾಹಿತಿ ಹಕ್ಕು ಪಡೆಯುವ ಕೆಲಸಕ್ಕೆ ಅಣಿಯಾದರು. ಇಲ್ಲೂ ಹಿನ್ನಡೆ, ದಿನೇ ಅಲೆದಾಟದ ಸಮಸ್ಯೆ ಬಿಟ್ಟರೆ ಮಾಹಿತಿ ದೊರಕಲೇ ಇಲ್ಲ.   ...
Image