ಅಭಿಮಾನಿಗಳ ಮನಗೆದ್ದ ನಟಿ ರಂಭಾ
ಯಾವುದಾದರೊಂದು
ಭಾಷೆಯ ಚಲನಚಿತ್ರದಲ್ಲಿ ಗುರುತಿಸಿಕೊಳ್ಳುವುದು ದೊಡ್ಡ ವಿಷಯವಲ್ಲ. ಆದರೆ
ಕನ್ನಡ, ಹಿಂದಿ, ತೆಲುಗು, ತಮಿಳು,
ಮಲಯಾಳಂ, ಬಂಗಾಳಿ, ಸೇರಿದಂತೆ ಹಲವು
ಭಾಷೆಯ ಚಲನಚಿತ್ರದಲ್ಲಿ ಕಾಣಿಸಿಕೊಳ್ಳುವುದು ಸುಲಭವಲ್ಲ ಮಾತಲ್ಲ. ಆದರೆ ಈ ಮಾತಿಗೆ
ಸವಾಲೆಸಗಿದ ನಟಿ ಎಂದರೆ ಅದು
ಬಹುಭಾಷಾ ತಾರೆ ರಂಭಾ. ಮನೋಜ್ಞ ನಟನೆಯ ಮೂಲಕ
ಅಭಿಮಾನಿಗಳ ಮನಗೆದ್ದ ನಟಿ ರಂಭಾ.
ರಂಭಾ ಅವರ ಹುಟ್ಟು ಹೆಸರು
ವಿಜಯಲಕ್ಷ್ಮೀ. ಹುಟ್ಟಿದ್ದು ಆದ್ರಪ್ರದೇಶದ ವಿಜಯವಾಡದಲ್ಲಿ. ಪತಿ ಇಂದಿರನ್ ಪದ್ಮನಾಭಂ
ಉದ್ಯಮಿ. ಜೊತೆಗೆ ಎರಡು ಜನ
ಹೆಣ್ಣು ಮಕ್ಕಳಿರುವ ಕುಟುಂಬ ರಂಭಾ ಅವರದು.
ರಂಭಾ ಅವರು ಮೊದಲ ಬಾರಿಗೆ
ಬಣ್ಣ ಹಚ್ಚಿದ್ದು ಕನ್ನಡ ಚಿತ್ರಕ್ಕೆ. 1993ರಲ್ಲಿ
ನಟ ಜಗ್ಗೇಶ್ ಅವರ ಜೋಡಿಯಾಗಿ
‘ಸರ್ವರ್ ಸೋಮಣ್ಣ’ ಎಂಬ ಚಲನಚಿತ್ರದಲ್ಲಿ
ನಟಿಸಿದರು. ಇದೇ ವರ್ಷ ಶಶಿಕುಮಾರ್,
ಪ್ರಭಾಕರ್ ಅಭಿನಯದ ‘ಕೆಂಪಯ್ಯ ಐ.ಪಿ.ಎಸ್ ‘ ಎಂಬ
ಚಿತ್ರಕ್ಕೂ ನಟಿಸಲು ಅವಕಾಶ ಒದಗಿ
ಬಂತು. ಇದಲ್ಲದೆ ರವಿಚಂದ್ರನ್ ಅಭಿನಯದ
‘ಓ ಪ್ರೇಮವೇ’ ಸಾಹುಕಾರ’, ಶಿವರಾಜ್ಕುಮಾರ್ ಅಭಿನಯದ
‘ಭಾವ ಬಾಮೈದ’, ‘ಗಂಡುಗಲಿ ಕುಮಾರ ರಾಮ’,
ಎಂಬ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಲ್ಲದೆ
‘ಪಾಂಚಾಲಿ’,’ ಪಾಂಡುರಂಗ ವಿಠಲ’ ಎಂಬ ಚಿತ್ರದಲ್ಲಿ
ಕಾಣಿಸಿಕೊಂಡಿದ್ದರು.
ಕೇವಲ ಸ್ಯಾಂಡಲ್ವುಡ್ ಅಲ್ಲದೆ ಮಲಯಾಳಂನಲ್ಲೂ
ಕಾಣಿಸಿಕೊಂಡಿರುವ ರಂಭಾ ಅವರು ಮೊದಲು
ಬಣ್ಣ ಹಚ್ಚಿದ್ದು ‘ಸರ್ಗಮ್’ ಎಂಬ
ಚಿತ್ರಕ್ಕೆ. ಈ ಚಿತ್ರದಲ್ಲಿನ ಇವರ
ನಟನೆಗೆ ರಾಜ್ಯ ಪ್ರಶಸ್ತಿ ಒಲಿಯಿತು.
ಜೊತೆಗೆ ಈ ಚಿತ್ರವು ರಾಷ್ಟ್ರೀಯ
ಪ್ರಶಸ್ತಿಯನ್ನು ಬಾಚಿತು. ಇದಾದ ನಂತರ
‘ಫಿಲ್ಮ್ ಸ್ಟಾರ್’, ’ಪಾಯುಂ ಪುಲಿ’, ‘ಮಾಯಿಲತ್ತಂ’,
‘ಸಿದ್ದಾರ್ಥ’ ಸೇರಿದಂತೆ ಅನೇಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತಮಿಳು ಗುರುತಿಸಿರುವ ರಂಭಾ ಅವರು ‘ಉಲ್ಲತೈಂ
ಅಲ್ಲಿತ್ತ’ ಎಂಬ ಚಿತ್ರವು ದೊಡ್ಡ
ಹಿಟ್ ಚಿತ್ರವಾಯಿತು. ರಂಭಾ ಅವರ ಚಿತ್ರರಂಗದ
ಜೀವನದಲ್ಲಿಯೇ ಈ ಚಿತ್ರವು ಹೊಸ
ಭಾಷ್ಯ ಬರೆಯಿತು. ಬಾಲಿವುಡ್ನಲ್ಲಿ ಮೊದಲು ಬಣ್ಣ
ಹಚ್ಚಿದ್ದು ‘ಜಲ್ಲಾದ್’ ಎಂಬ ಚಿತ್ರಕ್ಕೆ.
ಸದ್ಯ ರಂಭಾ ಅವರ ದಾಂಪತ್ಯ
ಜೀವನದಲ್ಲಿ ಏರು ಪೇರುಗಳಾಗಿವೆ ಎಂಬ
ಗಾಸಿಪ್ ಕೇಳಿ ಬರುತ್ತಿದೆಯಾವರೂ 2
ದಶಕಗಳ ಕಾಲ ಚಿತ್ರರಂಗಕ್ಕೆ ರಂಭಾ
ಅವರ ಕೊಡುಗೆ ಅಮೂಲ್ಯವಾದುದು.

Comments
Post a Comment