Posts

Showing posts from May, 2013
Image
                                     ಸುಂದರ ಕಡಲಿನ ಜೊತೆ ಕೂಸಳ್ಳಿ ನರ್ತನ ಪ್ರಶಾಂ ತ ವಾತಾ ವರಣದ ನಡುವೆ ಸಮುದ್ರದ ಅಬ್ಬರ. ನಿಮಿಷಕ್ಕೊಮ್ಮೆ ಅಲೆಗಳ ನರ್ತನ. ಸಂಜೆಯಂತೂ ಸೂರ್ಯನೇ ದರೆಗಿಳಿದ ಅನುಭವ. ನಿವೂ ಇಂತಹಾ ಅನುಭ ವಕ್ಕೆ ಸಾಕ್ಷಿಯಾಗಬೇಕಾದರೆ ಒಮ್ಮೆಯಾದರೂ ಒತ್ತಿನೆಣೆ ಬೀಚ್‌ನತ್ತ ಪಯಣಿಸಲೆಬೇಕು. ಉಡುಪಿ ಜಿಲ್ಲೆಯ ಕುಂದಾಪುರದಿಂದ ಸುಮಾರು ೪೦ ಕಿಲೋ ಮೀಟರ್ ಕ್ರಮಿಸಿದರೆ ಬೈಂದೂರು ಪಟ್ಟಣ ಸಿಗುತ್ತದೆ. ಇಲ್ಲಿಂದ ಕೇವಲ ೨ ಕಿಲೋಮೀಟರ್ ಸಾಗಿ ಎಡಕ್ಕೆ ಮಣ್ಣಿನ ರಸ್ತೆಯಲ್ಲಿ ಕೊಂಚ ದೂರ ಕ್ರಮಿಸಿದರೆ ಸಾಕು ಕ್ಷಿತಿಜ ನಿಸರ್ಗಧಾಮ ಬಂದೇ ಬಿಡುತ್ತದೆ. ಅಲ್ಲದೆ ಇಲ್ಲಿ ಪ್ರಶಾಂತ ವಾತಾವರಣದ ನಡುವೆ ಉಳಿದುಕೊಳ್ಳಬೇಕೆಂದರೆ ಬಾಡಿಗೆಗೆ ರೂಮ್ ಕೂಡಾ ಲಭ್ಯ. ಕೊಠಡಿಗಳು ಸಮುದ್ರ ವೀಕ್ಷಣೆಗೆ ಹಂದಿಕೊಂಡಿದ್ದು ಬೀಚ್‌ನ ಪ್ರತೀ ಕಿನಾರೆಯನ್ನೂ ಸವಿಯಬಹುದು. ಅಲ್ಲದೆ ಇಲ್ಲಿನ ಗುಡ್ಡದ ಮೇಲಿನಿಂದ ವಿಶಾಲವಾದ ಕಡಲನ್ನು ನೋಡುವುದು ನಿಜಕ್ಕೂ ಅಚ್ಚಳಿಯದೇ ಉಳಿಯುವುದು. ಸಮುದ್ರದ ದಡಕ್ಕೆ ಇಳಿಯಬೇಕೆಂದಿದ್ದರೆ ಮೆಟ್ಟಿಲುಗಳ ಮೂಲಕ ಪಯಣ. ಛಾಯಾಗ್ರಹಣಕ್ಕೆ ಇದು ಹೇಳಿ ಮಾಡಿಸಿದ ಜಾಗ. ಸಂಜೆ ಆಗುತ್ತಿದ್ದಂತೆಯೇ ಸೂರ್ಯ ಮರೆಯಾಗುವ ದೃಶ್ಯವನ್ನ...
Image
                    'ವೃಂದಾ'ನ್ವೇಷಣೆ ಶಾಸ್ತ್ರೀಯ ಕಲೆಯಾದ ಭರತನಾಟ್ಯ ಇರಲಿ, ಗಂಡುಕಲೆ ಯಕ್ಷಗಾನ ಇರಲಿ ಈಕೆಗೆ ಸಲೀಸು. ವೇದಿಕೆಯಲ್ಲಿ ಮೈಕ್ ಹಿಡಿದು ಹಾಡು ಹಾಡಬೇಕೆಂದರೂ ಸೈ ಎನ್ನುತ್ತಾಳೆ. ಅಷ್ಟೇ ಏಕೆ ಚಿತ್ರಕಲೆಯಲ್ಲೂ  ಪರಿಣತಿ. ಇದಲ್ಲದೆ ಕ್ರೀಡೆ, ಕ್ವಿಝ್ ಸ್ಪರ್ಧೆಯಲ್ಲೂ ಸಾಧನೆ. ಬಾಲ್ಯದಲ್ಲೇ ಕಲಾ ಕ್ಷೇತ್ರದತ್ತ ಅತೀವ ಒಲವಿರುವ  ಕರಾವಳಿ ಬೆಡಗಿ ವೃಂದಾ ಕೊನ್ನಾರ್.                                                 ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಬೈಕಂಪಾಡಿಯ ಬಿ. ಸುಬ್ಬ ರಾವ್ ಮತ್ತು ಶ್ರೀಮತಿ ವಿದ್ಯಾ ದಂಪತಿಯರ ಪುತ್ರಿಯಾದ ವೃಂದಾಳಿಗೆ ಯಕ್ಷಗಾನದತ್ತ ಆಸಕ್ತಿ ಬರಲು ಕಾರಣ ಈಕೆಯ ತಂದೆಗೆ ಕಲಾ ಕ್ಷೇತ್ರದ ಮೇಲಿದ್ದ ಪ್ರೀತಿ. ಅಲ್ಲದೆ ತಾವೂ ಯಕ್ಷಗಾನ ಕಲಾವಿದರಾಗಿದ್ದು ಮಗಳು ಕೂಡಾ ಈ ವಲಯದಲ್ಲಿ ಮುಂದುವರಿಯಬೇಕೆಂಬ ಹಂಬಲವಿತ್ತು. ಈಕೆಗೆ ಹತ್ತು ವರ್ಷವಿರುವಾಗಲೇ ಯಕ್ಷಗಾನ ಕಲೆಯತ್ತ ಆಸಕ್ತಿ ಹುಟ್ಟಿತು. ಇವಳ ಆಸಕ್ತಿಗೆ ನೀರೆರೆದು ಪೋಷಿಸಿದವರೆಂದರೆ ಗುರುಗ ಳಾದ ಶಂ...
Image
                                                ಬಿಗ್‌ಬಾಸ್ ವೇದಿಕೆಯಿಂದ 'ಶ್ವೇತಾ'ಗಮನ                            ಸ್ವಲ್ಪ ತರಲೆ, ಸ್ವಲ್ಪ ಕೋಪ, ಚೂರು ಬೇಜಾರು, ಸಿಕ್ಕಾಪಟ್ಟೆ ಫನ್ ಇವೆಲ್ಲಾ ಒಂದೇ ವೇದಿಕೆಯಲ್ಲಿ ಸಿಗಬೇಕಾದರೆ ಬಿಗ್‌ಬಾಸ್ ರಿಯಾಲಿಟೀ ಷೋನ ನೋಡಲೇಬೇಕು. ಈ ವಿಷಯ ಈಗ ಯಾಕೆ ಅಂದ್ಕೊಂಡ್ರಾ..? ಅಂದ ಹಾಗೆ ಈಗ ಹೇಳಲಿಕ್ಕೆ ಹೊರಟಿರೋದು ಇತ್ತೀಚೆಗೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಶ್ವೇತಾ ಪಂಡಿತ್ ಬಗ್ಗೆ.    ಕಡಲತಡಿಯ ಈ ಹುಡುಗಿ ತನ್ನ ಬಾಲ್ಯಕಳೆದದ್ದು ಮೂಡಬಿದಿರೆಯಲ್ಲಿ. ಎಳೆಯಲ್ಲೇ ಶಾಸ್ತ್ರೀಯ ಕಲೆ ಭರತನಾಟ್ಯದತ್ತ ಅಪಾರ ಒಲವು. ಸ್ಮಿತಾ ಭಟ್ ಅವರಲ್ಲಿ ಕೆಲಕಾಲ ಕಲಿಕೆ. ಮುಖದ ಹಾವ-ಬಾವ ಮುದ್ರೆಗಳ ಬಗೆಗೆ ಕಲಿತ ಶ್ವೇತಾಳಿಗೆ ನಟನೆಯ ಸಮಯದಲ್ಲೂ ಇದು ತುಂಬಾನೇ ಸಹಾಯವಾಯಿತಂತೆ.                 ...