ಡಾ.ರಾಜ್ಕುಮಾರ್ ರೋಲ್ನಲ್ಲಿ ಅಮಿತಾಬ್ ?


ರಾಮ್ಗೋಪಾಲ್ ವರ್ಮಾ ಅವರು ಯಾವುದೇ ಚಲನಚಿತ್ರ ನಿರ್ದೇಶಿಸಿದರೂ ಅದರಲ್ಲಿ ದೊಡ್ಡ ತಾರಾಗಣವೇ ಇರುತ್ತದೆ. ರಾಮ್ ಗೋಪಾಲ್ ವರ್ಮಾ ಅವರ ಬಹುನಿರೀಕ್ಷಿತಕಿಲ್ಲಿಂಗ್ ವೀರಪ್ಪನ್ಚಲನಚಿತ್ರದಲ್ಲಿ ಡಾ.ರಾಜ್ಕುಮಾರ್ ಅವರ ಪಾತ್ರವನ್ನು ಅಮಿತಾಬ್ ಬಚ್ಚನ್ ಅವರು ನಿಭಾಯಿಸುತ್ತಾರೆ ಎಂಬ ಗಾಸಿಪ್ ಚಿತ್ರರಂಗದಲ್ಲಿ ಹರಿದಾಡುತ್ತಿದೆ.
ಅಮಿತಾಬ್ ಬಚ್ಚನ್ಗೂ ಕನ್ನಡ ಚಲನಚಿತ್ರಕ್ಕೂ ನಂಟು ಹಿಂದೆಯೇ ಇತ್ತು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಅಮೃತಧಾರೆಚಲನಚಿತ್ರದಲ್ಲಿ ಅತಿಥಿ ಪಾತ್ರವೊಂದನ್ನು ಮಾಡುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಶಿವರಾಜ್ಕುಮಾರ್ ಅಭಿನಯದಕಬೀರಚಲನಚಿತ್ರದಲ್ಲಿ ಅಮಿತಾಭ್ ನಟಿಸುತ್ತಾರೆ ಎಂದು ಹಿಂದೆ ಸುದ್ದಿಯಾಗಿತ್ತು. ಕಲ್ಯಾಣ್ ಜ್ಯುವೆಲ್ಸ್ ಜಾಹಿರಾತಿನಲ್ಲಿ ಅಮಿತಾಬ್ ಮತ್ತು ಶಿವರಾಜ್ಕುಮಾರ್ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದರು.
ಅಮಿತಾಬ್ ಬಚ್ಚನ್ ಮತ್ತು ಡಾ.ರಾಜ್ ಕುಟುಂಬದ ನಂಟು
ಅಮಿತಾಬ್ ಮತ್ತು ಡಾ.ರಾಜ್ ಕುಟುಂಬದ ನಂಟು ಹಿಂದಿನಿಂದಲೇ ಇದೆ. ಅಂದು ಅಮಿತಾಬ್ ನಟನೆಯಕೂಲಿಚಲನಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಮಯದಲ್ಲಿ ನಡೆದ ಅಪಘಾತದಲ್ಲಿ ಅಮಿತಾಬ್ ಉಳಿಯುವುದೇ ಕಷ್ಟವಾಗಿತ್ತು. ಸಮಯದಲ್ಲಿ ಸಾವಿನ ಮನೆಯಿಂದ ದಾಟಿ ಬಂದರೆ ತಿಮ್ಮಪ್ಪನ ಬೆಟ್ಟ ಹತ್ತುತ್ತೇನೆ ಎಂದು ಡಾ.ರಾಜ್ ಹರಕೆ ಹೊತ್ತಿದ್ದರು. ಅಲ್ಲದೆ ಅದರಂತೆಯೇ ನಡೆದುಕೊಂಡರು. ಸಮಯದಲ್ಲಿ ಬಚ್ಚನ್ ಅವರು ಡಾ.ರಾಜ್ ಅವರ ಮನೆಗೆ ಬಂದು ಕೃತಜ್ಞತೆ ಸಲ್ಲಿಸಿದ್ದರು.
“ನಾನು ನಟಿಸುತ್ತಿರುವಕೂಲಿಚಲನಚಿತ್ರದಲ್ಲಿ ಅತಿಥಿ ಪಾತ್ರವೊಂದನ್ನು ಮಾಡುತ್ತೀರಾ?” ಎಂದು ರಾಜ್ಕುಮಾರ್ ಅವರಿಗೆ ಆಹ್ವಾನವಿತ್ತರು. ಆದರೆ ನಾನು ಕನ್ನಡ ಚಲನಚಿತ್ರ ಬಿಟ್ಟು ಬೇರೆ ಭಾಷೆಯ ಚಲನಚಿತ್ರಗಳಲ್ಲಿ ಅಭನಯಿಸುವುದಿಲ್ಲ ಎಂದು ನಯವಾಗಿಯೇ ನಿರಾಕರಿಸಿದ್ದರು. ಡಾ.ರಾಜ್ ಅವರ ಅಪಹರಣವಾದಾಗ ಕುಟುಂಬಕ್ಕೆ ದೂರವಾಣಿಯ ಮೂಲಕ ಸಾಂತ್ವನವನ್ನೇಳಿದ್ದರು. ಇವಿಷ್ಟೇ ಅಲ್ಲದೆ ಡಾ.ರಾಜ್ ಅವರಶಂಕರ್ ಗುರುಚಲನಚಿತ್ರಮಹಾನ್ಹೆಸರಿನಲ್ಲಿ ಹಿಂದಿ ಭಾಷೆಗೆ ಹೋದಾಗ ಚಿತ್ರದಲ್ಲಿ ನಟಿಸಿದ್ದರು.
ಅಮಿತಾಭ್ ಬಚ್ಚನ್ ಅವರಿಗೆ ಡಾ.ರಾಜ್ಕುಮಾರ್ ಅವರ ಬಗ್ಗೆ ಅಪಾರವಾದ ಗೌರವವಿದೆ ಎಂಬುವುದಕ್ಕೆ ಮೇಲಿದ ಉದಾಹರಣೆಗಳು ಪುಷ್ಠಿ ನೀಡುತ್ತದೆ. ಆದ್ದರಿಂದ ರಾಮ್ಗೋಪಾಲ್ ವರ್ಮಾ ನಿರ್ದೇಶನದ ನಟ ಶಿವರಾಜ್ಕುಮಾರ್ ಅವರ ಅಭಿನಯದಕಿಲ್ಲಿಂಗ್ ವೀರಪ್ಪನ್ಚಲನಚಿತ್ರದಲ್ಲಿ ಬಚ್ಚನ್ ಅವರು ಡಾ. ರಾಜ್ಕುಮಾರ್ ರೋಲ್ನಲ್ಲಿ ಕಾಣಿಸಿಕೊಂಡರೆ ಅಚ್ಚರಿಯಿಲ್ಲ.



Comments

Popular posts from this blog