‘ಚಾಲಿಪೋಲಿಲು’ ತುಳು ಚಿತ್ರ 250 ದಿನಗಳ ಪ್ರದರ್ಶನ
 ತುಳು ಸಿನಿಮಾ ರಂಗದಲ್ಲಿ ಈಗ ಸಮೃದ್ಧಿಯ ಕಾಲವಾಗಿದ್ದು ಅನೇಕ ಚಲನಚಿತ್ರಗಳು ತೆರೆ ಕಾಣುತ್ತಿವೆ.   ಪೈಕಿ  ಜಯಕಿರಣ ಲಾಂಛನದಡಿಯಲ್ಲಿ ಪ್ರಕಾಶ್ ಪಾಂಡೇಶ್ವರ ನಿರ್ಮಾಣದಚಾಲಿಪೋಲಿಲುಚಲನಚಿತ್ರವೂ ಒಂದು. ಚಿತ್ರಕ್ಕೆ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರ್ ಅವರ  ನಿರ್ದೇಶನವಿದ್ದು ಮಲ್ಟಿಪ್ಲೆಕ್ಸ್ ನಲ್ಲಿ ಈ ಚಿತ್ರವು ಇಂದಿಗೆ 250 ದಿನಗಳನ್ನು ಪೂರೈಸಿ ದಾಖಲೆಗೆ ಕಾರಣವಾಗಿದೆ.
 
 ಕೇವಲ 60 ಲಕ್ಷ ಬಜೆಟ್ನಲ್ಲಿ ತಯಾರಾದಚಾಲಿಪೋಲಿಲು’ ಚಿತ್ರವು ಹಿಂದೆ 5 ಚಿತ್ರಮಂದಿರಗಳಲ್ಲಿ 75 ದಿನ ಮತ್ತು 3 ಚಿತ್ರಮಂದಿರದಲ್ಲಿ 100 ದಿನಗಳಿಗೂ ಮಿಕ್ಕಿ ಪ್ರದರ್ಶನ ಕಂಡಿತ್ತು. ಪ್ರಸ್ತುತ ಪಾಂಡೇಶ್ವರ ಪಿವಿಆರ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ದಿನಂಪ್ರತಿ  ಪ್ರದರ್ಶನ ಕಾಣುತ್ತಿದ್ದು, ಇಂದಿಗೆ 250ನೇ ದಿನದ ಪ್ರದರ್ಶನ ನೀಡಿದೆ. ದೇಶವ್ಯಾಪಿಯಾಗಿ ಇರುವ ಪಿ.ವಿ.ಆರ್  ಯಾವುದೇ ಚಿತ್ರಮಂದಿರದಲ್ಲಿ ಪ್ರಾದೇಶಿಕ ಭಾಷೆಯ  ಸಿನಿಮಾವೊಂದು ರೀತಿಯ ಪ್ರದರ್ಶನ ಕಂಡಿರಲಿಲ್ಲ. ಈ ಹಿಂದೆ ನಡೆದ ತುಳು ಸಿನಿಮಾ ಪ್ರಶಸ್ತಿ ಸ್ಪರ್ಧೆಯಲ್ಲಿ  ‘ಚಾಲಿಪೋಲಿಲು8 ಪ್ರಶಸ್ತಿಯನ್ನೂ ಬಾಚಿಕೊಂಡಿತ್ತು.
ಹೊಸಬರ ಸಿನಿಮಾ
ಸಿನಿಮಾ ರಂಗಕ್ಕೆ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಮತ್ತು ನಿರ್ದೇಶಕ ವೀರೇಂದ್ರ ಶೆಟ್ಟಿ ಅವರಿಬ್ಬರೂ ಹೊಸಬರು. ಛಾಯಾಗ್ರಾಹಕ ಉತ್ಪಲ್ ನಾಯನಾರ್ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ. ವಿ. ಮನೋಹರ್ ಸಂಗೀತ, ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತವಿರುವಚಾಲಿಪೋಲಿಲುಚಿತ್ರಕ್ಕೆ ಕೂಲ್ ಜಯಂತ್ ಅವರ ನೃತ್ಯ ನಿರ್ದೇಶನವಿದೆ. ತುಳುರಂಗಭೂಮಿಯ ಪ್ರಮುಖರಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್ ಸುಂದರ್ ರೈ ಮಂದಾರ, ಚೇತನ್ ರೈ, ಲಕ್ಷ್ಮಣ್ ಕುಮಾರ್ ಮಲ್ಲೂರು, ರಾಘವೇಂದ್ರ ರೈ, ಸರೋಜಿನಿ ಶೆಟ್ಟಿ, ದಿವ್ಯಶ್ರೀ ಸೇರಿದಂತೆ ಪ್ರಮುಖ ತಾರಾಗಣವಿದ್ದು ಖ್ಯಾತ ಕನ್ನಡ ಸಿನಿಮಾ ನಟಿ ಪದ್ಮಜಾ ರಾವ್ ಅವರು  ಕೂಡ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.
ಗರಿಷ್ಠ ಮೊತ್ತಕ್ಕೆ ವೀಡಿಯೋ ಮಾರಾಟ
ಈ ಚಿತ್ರದ ವಿಡಿಯೋ ಹಕ್ಕು ಕೂಡ 11 ಲಕ್ಷ ರೂಪಾಯಿ ಗರಿಷ್ಠ ಮೊತ್ತಕ್ಕೆ ಮಾರಾಟವಾಗಿದೆ. ಮಂಗಳೂರಿನ ಮ್ಯೂಸಿಕ್ ಹೌಸ್ ಸಂಸ್ಥೆಯೊಂದು ಚಿತ್ರದದ ವಿಡಿಯೋ ಹಕ್ಕನ್ನು ಪಡೆದುಕೊಂಡಿದ್ದು, ತುಳು ಸಿನಿಮಾ ರಂಗದಲ್ಲಿ ಇದೂ ಕೂಡ ಒಂದು ಹೊಸ ದಾಖಲೆಯಾಗಿದೆ.
ಆಸ್ಟ್ರೇಲಿಯಾದಲ್ಲಿ ಪ್ರದರ್ಶನ
ಚಾಲಿಪೋಲಿಲು ತಿಂಗಳಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಪ್ರದರ್ಶನಗೊಳ್ಳಲಿದೆ. ಅಲ್ಲದೆ ಮುಂದಿನ ವಾರ ಮುಂಬಾಯಿ ಮತ್ತು ಬೆಂಗಳೂರಿನಲ್ಲಿ ಮರು ಪ್ರದರ್ಶನಗೊಳ್ಳಲಿದೆ.


ದಬಕ್ ದಬಾ ಐಸಾ ಹೊಸ ತುಳು ಚಿತ್ರ

ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಅವರುದಬಕ್ ದಬಾ ಐಸಾಎಂಬ ಹೊಸ ತುಳು ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಚಿತ್ರವು ಉದ್ಯಮಿ ರೋಹನ್ ಮೊಂತೆರೋ ನಿರ್ಮಾಣದಲ್ಲಿ ಸೆಪ್ಟೆಂಬರ್ನಲ್ಲಿ ಚಿತ್ರೀಕರಣ ನಡೆಸಲಿದೆ.

Comments

Popular posts from this blog