ಯಶ್ ಹೇಳಿದ ಭವಿಷ್ಯ ನಿಜವಾಯ್ತು

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಎಲ್ಲರ ಬಾಯಲ್ಲೂರಂಗಿತರಂಗ’ ಚಲನಚಿತ್ರದ್ದೇ ಮಾತು. ಹೌದು ಚಲನಚಿತ್ರ ಮಾಡಿದ ಮೋಡಿಯೇ ಅಂತದ್ದು. ನಿರ್ದೇಶಕ ಅನೂಪ್ ಭಂಡಾರಿ ತನ್ನ ಮೊದಲನೇ ಪ್ರಯತ್ನದಲ್ಲಿಯೇ ಗೆದ್ದಿದ್ದಾರೆ.
‘ರಂಗಿತರಂಗ’ ಚಲನಚಿತ್ರ ಕಳೆದ ವಾರ ಬಿಡುಗಡೆಯಾಗಿದ್ದು ಚಲನಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿ ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ‘ಬಾಹುಬಲಿ’ ಚಲನಚಿತ್ರ ಬಿಡುಗಡೆಯಾದರೂರಂಗಿತರಂಗ’ ಚಲನಚಿತ್ರವನ್ನು ನೋಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಚಿತ್ರರಂಗದ ಗಣ್ಯರು ಕೂಡಾ ಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಕ್ಕೆ ದೌಡಾಯಿಸುತ್ತಿದ್ದಾರೆ. ಚಲನಚಿತ್ರ ಬಿಡುಗಡೆಗೆ ಮುನ್ನವೇ ಕೇವಲ ಟ್ರೈಲರ್ ನೋಡಿ ರಾಕಿಂಗ್ ಸ್ಟಾರ್ ಯಶ್ ಅವರುರಂಗಿತರಂಗ’ ಚಿತ್ರ ಹಿಟ್ ಆಗುತ್ತದೆ ಎಂದು ಭವಿಷ್ಯ ನುಡಿದ್ದರು.
ಯಶ್ ಏನಂದಿದ್ರು?

“ಒಂದು ಟ್ರೈಲರ್ನಿಂದ ಚಿತ್ರದ ವ್ಯಾಲ್ಯೂ ಏನು ಅನೋದನ್ನ ನಾನು ನಂಬುತ್ತೇನೆ. ‘ರಂಗಿತರಂಗ’ ಟ್ರೈಲರ್ ನೋಡಿ ಇಂಪ್ರೆಸ್ ಆಗಿದ್ದೇನೆ. ಹೊಸಬರ ಪ್ರಯತ್ನ ನೋಡಿ ತುಂಬಾನೇ ಖುಷಿಯಾಗ್ತಿದೆ. ಚಿತ್ರದ ಗುಣಮಟ್ಟದಲ್ಲಿ ತುಂಬಾನೇ ಮುಂದಿದ್ದಾರೆ. ಕನ್ನಡ ಇಂಡಸ್ಟ್ರಿಗೆ ರೀತಿಯ ಚಲನಚಿತ್ರಗಳು ಬರಬೇಕು. ಸಿನಿಮಟೋಗ್ರಫಿ, ಕ್ವಾಲಿಟಿ ಬೇರೆ ಲೆವೆಲ್ಗಿದೆ. ಒಂದೊಂದು ಪ್ರೇಮ್ಗಳು ಪೈಟಿಂಗ್ ತರಹ ಇದೆ.” ಎಂದಿದ್ದರು.
ಕನ್ನಡದಲ್ಲಿ ರಿಮೇಕ್ ಚಲನಚಿತ್ರಗಳ ಹಾವಳಿ ಹೆಚ್ಚಾಗುತ್ತಿರುವ ಸಮಯದಲ್ಲಿ ಕನ್ನಡ ನಾಡಿನ ಸೊಗಡನ್ನೇ ಗಮನದಲ್ಲಿರಿಸಿ ಕಥೆ ಬರೆದು ಚಿತ್ರ ಮಾಡಿದರೆ ಗೆಲ್ಲಬಹುದು ಎಂಬುವುದಕ್ಕೆರಂಗಿತರಂಗ’ ಚಲನಚಿತ್ರವೇ ಉತ್ತಮ ಉದಾಹರಣೆ.


Comments

Popular posts from this blog