ಜಗ್ಗೇಶ್ ಅವರು ಅಂಬಿ ಅವರನ್ನ ಮೊದಲು ನೋಡಿದ್ದು ಯಾವಾಗ ಗೊತ್ತಾ ?
ನವರಸ ನಾಯಕ ಜಗ್ಗೇಶ್ ಮತ್ತು ನಟ ರೆಬಲ್ಸ್ಟಾರ್ ಅಂಬರೀಶ್ ಅವರ ಸ್ನೇಹ ಕೇವಲ ಚಿತ್ರರಂಗದಲ್ಲಲ್ಲ. ರಾಜಕೀಯ ಕ್ಷೇತ್ರದಲ್ಲೂ ಇಬ್ಬರು ತೊಡಗಿಸಿಕೊಂಡವರು. ಇತ್ತೀಚೆಗೆ ಚಲನಚಿತ್ರೋದ್ಯಮದ ಸಮಸ್ಯೆಯ ಬಗ್ಗೆ ಮೀಟಿಂಗ್ನಲ್ಲಿದ್ದಾಗ ನಟ ಅಂಬರೀಶ್ ಅವರ ಬಗ್ಗೆ ಜಗ್ಗೇಶ್ ಅವರ ತಲೆಯಲ್ಲಿ ಹುಟ್ಟಿದ ನೆನಪುಗಳನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ರೀತಿ ವ್ಯಕ್ತಪಡಿಸಿದ್ದಾರೆ.
ನಾನು ಮೊದಲು ಅಂಬರೀಶ್ರನ್ನು ನೋಡಿದ್ದು 1974 ಅಕ್ಟೋಬರ್ನಲ್ಲಿ. ಹ್ಯಾಗೆ ಇಷ್ಟು ಸರಿ ನೆನಪು ಅಂದರೆ ... ಆಗ  SSLC First Term Exam.. ಅಪ್ಪನ ಬೈಕನ್ನು ಯಾರಿಗು ತಿಳಿಯದಂತೆ ಹೊರತೆಗೆದು ಮಿತ್ರ ರವಿ ಹಾಗು ಮಂಜುನಾಥ್ ಸಾಗರ್ ಜೊತೆಗೂಡಿ ದೇವಯ್ಯ ಪಾರ್ಕ್ನಿಂದ ಮಲ್ಲೇಶ್ವರಂ ಸರ್ಕಲ್ವರೆಗೆ Race Riding ಮಾಡೋ Plan ಇತ್ತು...
ನಿಮಗೆ ಆಶ್ಚರ್ಯವಾಗಬಹುದು Traffic ಇರೋಲ್ವ ಅಂತ... ದಿನವೆ ಅದ್ಬುತ Traffic ತುಂಬಾ ವಿರಳವಾಗಿತ್ತು so ಶುರುವಾಯಿತು ನಮ್ಮಿಬ್ಬರ ಆರ್ಭಟ... ಯಾರ ಮುಳ್ಳು 100 ಕಿಮಿ ಮುಟ್ಟುತ್ತೆ ಅಂತ ಶುರುವಾಯಿತು ಬೈಕ್ ರೇಸ್... ಸರಿಯಾಗಿ ರೈಲ್ವೆ ಬಿಡ್ಜ್ ಹತ್ತಿರ ಸಿಮೆ ಎಣ್ಣೆ ಗಾಡಿಯವನುಸೀಮೆ ಎಣ್ಣೆಅಂತ ಕೂಗ್ಕೊಂಡು ಅಡ್ಡ ಬಂದೇಬಿಟ್ಟ..!!!
ಮಾತಿಲ್ಲಾ ಕಥೆಯಿಲ್ಲಾ ನನ್ನ ಬೈಕಿಗು ಸೀಮೆ ಎಣ್ಣೆ ಗಾಡಿಗೂ 100ಕಿಮೀ ವೇಗದ ಸ್ಪರ್ಷ ಪ್ರೇಮ ಆಗೇ ಬಿಟ್ಟಿತು... ಹೊಡೆದ ರಭಸಕ್ಕೆ ಸೀಮೆ ಎಣ್ಣೆ ಗಾಡಿ ಹಳ್ಳದ ಗ್ರೌಂಡಿಗೆ ಸಿನಿಮಾ ಫೈಟರ್ ರೀತಿ ಜಂಪಾಗಿ ಲ್ಯಾಂಡಿಂಗ್ ಆಯ್ತು ಅಷ್ಟೆ... ರಕ್ತ ಬರುತ್ತಿದ್ದರು ಲೆಕ್ಕಿಸದೆ ನಾನು ಬೈಕನ್ನು ಕ್ಷಣಮಾತ್ರದಲ್ಲಿ ಮನೆ ಮುಂದೆ ನಿಲ್ಲಿಸಿದೆ... ಅದನ್ನ ನೋಡಿ ಅಮ್ಮ "ನಿಂಗೆ ಹಾವ್ಕಡಿಯಾ... ನಿನ್ನ ಹಣೆಗ್ ಅಕ್ಕಿ ಇಕ್ಕಿ ಚಾಪೇಲ್ ಮುದುರ್ಕೊಂಡ್ ಹೋಗಾ... ನಿಂಗೆ ಮಲ್ಲಾಗ್ರ ಬರಾ ಅಂತ ಅವಳ Regular ಬೈಗುಳ ಶುರುಹಚ್ಕೂಂಡ್ಳು... ನೆನಪಿರಬೇಕು ನನ್ನ Cinema  ಡೈಲಾಗ್, ಎಲ್ಲಾ ಅಮ್ಮಂದೆ ಕೊಡುಗೆ... ಬೈಯುತ್ತಾ, ಬರ್ತಾನೆ ತಡಿ ಅಪ್ಪ ದಡಿ (ಕೋಲು) ತಗೂಂಡು ಅಂದಳು... ದಡಿ ಒದೆ ತಿಂದು ಅನುಭವ ಇದ್ದ ನಾನು scape ಅಂತ ಅಮ್ಮ ಚೀಟಿ ಕಟ್ಟೊ ದುಡ್ಡು ಎಗರಿಸಿ ಮೈಸೂರಿಗೆ ಹೋಗಿ Land ಆದೆ... ಹೋಟೆಲ್ ಕೆಲಸಕ್ಕೆ ಹುಡುಗರನ್ನ  Catch ಹಾಕೊ ಗ್ಯಾಂಗು ನನ್ನನ್ನ ನಾಯಿ ಥರ ಎತ್ತಾಕ್ಕೊಂಡು ಹೋಗಿ Govt ಆಸ್ಪತ್ರೆ ಎದುರಿನ  Quality Bar and Restaurant ಗೆ ಸೇರಿಸಿಬಿಟ್ಟರು... ಅಪ್ಪನ ಕೋಪ ಕಮ್ಮಿಯಾಗೋವರ್ಗು Safe ಜಾಗ ಅಂತ ನಾನು Settle ಆದೆ... ಹೋಟೆಲ್ Regular ಗಿರಾಕೀನೇ ನಮ್ಮಅಂಬಿ ಸಾರ್... 555 ಸಿಗರೇಟ್ ತಂದು ಕೊಡುವ ಕೆಲಸ ನನ್ನದಾಗಿತ್ತು... ‘ಮೊನ್ನೆ ಅವರ ಜೊತೆ ಉದ್ಯಮ ವಿಷಯವಾಗಿ ಒಟ್ಟಿಗೆ ಕೂತಾಗ ಹಳೆಯ ನೆನಪುಗಳು Black and White ಸಿನಿಮಾದಂತೆ ತಲೆಯಲ್ಲಿ ಓಡುತ್ತಾ ಸಮಯ ಹೋಗಿದ್ದು ಗೊತ್ತಾಗದೆ ಸಭೆ ಮುಗಿಸಿ ಮನೆಗೆ ಬಂದೆ.


Comments

Popular posts from this blog