ಸುಂದರ ಕಡಲಿನ ಜೊತೆ ಕೂಸಳ್ಳಿ ನರ್ತನ

ಪ್ರಶಾಂತ ವಾತಾವರಣದ ನಡುವೆ ಸಮುದ್ರದ ಅಬ್ಬರ. ನಿಮಿಷಕ್ಕೊಮ್ಮೆ ಅಲೆಗಳ ನರ್ತನ. ಸಂಜೆಯಂತೂ ಸೂರ್ಯನೇ ದರೆಗಿಳಿದ ಅನುಭವ. ನಿವೂ ಇಂತಹಾ ಅನುಭವಕ್ಕೆ ಸಾಕ್ಷಿಯಾಗಬೇಕಾದರೆ ಒಮ್ಮೆಯಾದರೂ ಒತ್ತಿನೆಣೆ ಬೀಚ್‌ನತ್ತ ಪಯಣಿಸಲೆಬೇಕು. ಉಡುಪಿ ಜಿಲ್ಲೆಯ ಕುಂದಾಪುರದಿಂದ ಸುಮಾರು ೪೦ ಕಿಲೋ ಮೀಟರ್ ಕ್ರಮಿಸಿದರೆ ಬೈಂದೂರು ಪಟ್ಟಣ ಸಿಗುತ್ತದೆ. ಇಲ್ಲಿಂದ ಕೇವಲ ೨ ಕಿಲೋಮೀಟರ್ ಸಾಗಿ ಎಡಕ್ಕೆ ಮಣ್ಣಿನ ರಸ್ತೆಯಲ್ಲಿ ಕೊಂಚ ದೂರ ಕ್ರಮಿಸಿದರೆ ಸಾಕು ಕ್ಷಿತಿಜ ನಿಸರ್ಗಧಾಮ ಬಂದೇ ಬಿಡುತ್ತದೆ. ಅಲ್ಲದೆ ಇಲ್ಲಿ ಪ್ರಶಾಂತ ವಾತಾವರಣದ ನಡುವೆ ಉಳಿದುಕೊಳ್ಳಬೇಕೆಂದರೆ ಬಾಡಿಗೆಗೆ ರೂಮ್ ಕೂಡಾ ಲಭ್ಯ. ಕೊಠಡಿಗಳು ಸಮುದ್ರ ವೀಕ್ಷಣೆಗೆ ಹಂದಿಕೊಂಡಿದ್ದು ಬೀಚ್‌ನ ಪ್ರತೀ ಕಿನಾರೆಯನ್ನೂ ಸವಿಯಬಹುದು. ಅಲ್ಲದೆ ಇಲ್ಲಿನ ಗುಡ್ಡದ ಮೇಲಿನಿಂದ ವಿಶಾಲವಾದ ಕಡಲನ್ನು ನೋಡುವುದು ನಿಜಕ್ಕೂ ಅಚ್ಚಳಿಯದೇ ಉಳಿಯುವುದು. ಸಮುದ್ರದ ದಡಕ್ಕೆ ಇಳಿಯಬೇಕೆಂದಿದ್ದರೆ ಮೆಟ್ಟಿಲುಗಳ ಮೂಲಕ ಪಯಣ.
ಛಾಯಾಗ್ರಹಣಕ್ಕೆ ಇದು ಹೇಳಿ ಮಾಡಿಸಿದ ಜಾಗ. ಸಂಜೆ ಆಗುತ್ತಿದ್ದಂತೆಯೇ ಸೂರ್ಯ ಮರೆಯಾಗುವ ದೃಶ್ಯವನ್ನಂತೂ ನೋಡಲು ಎರಡು ಕಣ್ಣುಗಳೇ ಸಾಲದು. ಬಾನಂಗಳದಿ ಕೆಂಪಾಗಿ ಕತ್ತಲಾಗುವ ದೃಶ್ಯವಂತೂ ಸೋಜಿಗವೆನಿಸುತ್ತದೆ. ಬೀಚ್ ಕನಾರೆಯಲ್ಲಿ ಮಕ್ಕಳ ಮೋಜು ಮಸ್ತಿ, ನೀರಿನಲ್ಲಿ ವಿಧವಿಧದ ಪ್ರತಿಬಿಂಬ ಹೀಗೆ ಮನೆಮಂದಿಯೆಲ್ಲಾ ಹೊಗಬಹುದಂತಹಾ ಪೆವರೇಟ್ ಸ್ಪೋಟ್ ಒತ್ತಿನೆಣೆ. ಬೀಚ್‌ನ ಸಮೀಪ ಯಾವುದೇ ಅಂಗಡಿಗಳಿಲ್ಲ. ಆದುದರಿಂದ ಬಳಕೆಯ ವಸ್ತುಗಳನ್ನು ಮುಂಚಿತವೇ ತೆಗೆದುಕೊಂಡು ಹೋಗುವುದು ಸೂಕ್ತ.
ಇಲ್ಲೇ ಸಮುದ್ರಕ್ಕೆ ಹೊಂದಿಕೊಂಡಂತೆ ಸೋಮೇಶ್ವರ ದೇವಾಲಯವಿದ್ದು  ಬೀಚ್ ವೀಕ್ಷಣೆಗೆ ಬರುವ ಪ್ರವಾಸಿಗರು ದೇವರ ದರ್ಶನವನ್ನೂ ಪಡೆಯಬಹುದು.
ಈ ಪಟ್ಟಣವು ಕೇವಲ ಸಮುದ್ರಕ್ಕೆ ಮಾತ್ರ ಫೇಮಸ್ಸಲ್ಲ. ಬೈಂದೂರಿನಿಂದ ಕೇವಲ ೧೫ ಕಿಲೋಮೀಟರ್ ಒಳಮಾರ್ಗದಲ್ಲಿ  ಕ್ರಮಿಸಿದರೆ ಜಲಪಾತವೊಂದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅದೇ ’ಕೂಸಳ್ಳಿ ಜಲಪಾತ’. ಬೈಂದೂರಿನಿಂದ ಶಿರೂರು ಮಾರ್ಗವಾಗಿ ಸುಮಾರು ೮ ಕಿಲೋಮೀಟರ್ ಕ್ರಮಿಸಿದರೆ ತೂದಳ್ಳಿ ಎಂಬ ಊರಿಗೆ ತಲುಪುತ್ತೇವೆ. ಅಲ್ಲಿಂದ ಸುಮಾರು ಹದಿನೈದು ನಿಮಿಷಗಳ ಕಾಡಿನ

ನಡಿಗೆಯಲ್ಲಿ ಕ್ರಮಿಸಿದರೆ ಸಾಕು ಜಲಪಾತ ನಮ್ಮ ಕಣ್ಣ ಮುಂದೆ. ವರ್ಷವಿಡೀ ನೀರಿರುವ ಈ ಜಲಪಾತ ಗ್ರಾಮದ ಜನತೆಗೆ ಜೀವನಾಧಾರ. ಆದರೆ ಇಲ್ಲಿಗೆ ಬರಲು ಕೈಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾಗದ-ಪತ್ರಗಳನ್ನು ಹಿಡಿದುಕೊಂಡು ಬರಬೇಕು. ಜಲಪಾತಕ್ಕೆ ಹೋಗಬೇಕಾದರೆ ದುಬಾರಿ ಪ್ರವೇಶ ಶುಲ್ಕ ಪಾವತಿಸತಕ್ಕದ್ದು.
ದಿನ ನಿತ್ಯದ ಕಾಯಕದ ನಡುವೆ ಮನಸ್ಸಿಗೆ ರಿಲಾಕ್ಸ್ ಬೇಕೆಂದು ಪ್ರವಾಸ ಹೋಗುವ ಯೋಜನೆ ನಿಮಗಿದ್ದರೆ ಖಂಡಿತಾ ಈ ಸ್ಪೋಟನ್ನು ನೋಡಲು ಮರೆಯದಿರಿ.


                                                                   ಇತೀ ತಮ್ಮ ವಿಶ್ವಾಸಿ,
                                                      ನವೀನ್ ಭಟ್,ಇಳಂತಿಲ
                                                 ಮೊಬೈಲ್ ನಂ-೯೮೪೪೬೩೮೫೪೫



Comments

Popular posts from this blog