‘ಕೆಸರುಡೊಂಜಿ
ದಿನ’ ರಕ್ಷಿತ್ ಶೆಟ್ಟಿ ಕುಣಿದ್ರು
ಅಲ್ಲಿ ಮುಗಿಲು ಮುಟ್ಟಿದ ಉತ್ಸಾಹವಿತ್ತು.
ರೈತರ ಮೊಗದಲ್ಲಿ ನಗುವಿತ್ತು. ಮಕ್ಕಳಲ್ಲಂತೂ ಸೋತೋಷಕ್ಕೇ ಪಾರವೇ ಇರಲಿಲ್ಲ. ಇವರೆಲ್ಲರ
ಜೊತೆ ನಾನೊಬ್ಬ ಸೆಲೆಬ್ರೆಟಿ ಎಂಬ
ಅಹಂನ್ನು ಅವರಲ್ಲಿ ಒಂದಾಗಿ ಕುಣಿದಿದ್ದೇ
ಕುಣಿದಿದ್ದು. ಯಾರಪ್ಪಾ ಈ ಸೆಲೆಬ್ರೆಟಿ?
ಏನು ಸ್ಟೋರಿ ಎಂದು ಆಶ್ಚರ್ಯ
ಪಡಬೇಡಿ ನಾವು ಹೇಳ್ತೀವಿ.
ಅದು ಉಡುಪಿ ಜಿಲ್ಲೆಯ ಅಲೆವೂರು
ಎಂಬ ಗ್ರಾಮ. ಈ ಗ್ರಾಮದಲ್ಲಿ
ಹುಟ್ಟಿ ಬೆಳೆದ ಹುಡುಗ ಇಂದು
‘ಫಿಲಂಫೇರ್ ಬೆಸ್ಟ್ ಡೈರೆಕ್ಟರ್’ ವಿಜೇತ.
ಅಂದಹಾಗೆ ಇವರ ಹೆಸರು ರಕ್ಷಿತ್
ಶೆಟ್ಟಿ. ‘ಉಳಿದವರು ಕಂಡಂತೆ’ ‘ಸಿಂಪಲ್ಲಾಗ್
ಒಂದು ಲವ್ ಸ್ಟೋರಿ’ ಮುಂತಾದ
ಚಲನಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ
ನಟ ರಕ್ಷಿತ್ ಶೆಟ್ಟಿ ನಿನ್ನೆ
ತನ್ನ ಹುಟ್ಟೂರಿಗೆ ಬಂದಿದ್ರು.
ಹೌದು ರಕ್ಷಿತ್ ಶೆಟ್ಟಿ ಅವರು
ಬಾಲ್ಯವನ್ನು ಕಳೆದದ್ದು ಇದೇ ಊರಿನಲ್ಲಿ. ಅಲೆವೂರಿನ
ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಮ್ಮಿಕೊಂಡಿದ್ದ 10ನೇ
ವರ್ಷದ ‘ಕೆಸರುಡೊಂಜಿ ದಿನ’ ಎಂಬ ಕ್ರೀಡಾಕೂಟವನ್ನು
ನೋಡಲು ಬಂದಿದ್ದ ನಟ ರಕ್ಷಿತ್
ಶೆಟ್ಟಿ ಅವರು ತಮ್ಮದೇ ನಿರ್ದೇಶನದ
‘ಉಳಿದವರು ಕಂಡಂತೆ’ ಚಲನಚಿತ್ರದ ಹುಲಿ
ಕುಣಿತದ ಹಾಡಿಗೆ ಕೆಸರು ಚಿಮ್ಮುವಂತೆ
ಸ್ಟೆಪ್ ಹಾಕಿದ್ದೇ ಹಾಕಿದ್ದು.
“ಗ್ರಾಮೀಣ
ಕ್ರೀಡೆಗಳು ಇಂದು ಅಳಿವಿನಂಚಿಗೆ ಸಾಗುತ್ತಿದೆ.
ಇಂತಹಾ ಕ್ರೀಡೆಯನ್ನು ಉಳಿಸುವಂತಹಾ ಜವಾಬ್ದಾರಿ ನಮ್ಮ ಕೈಲಿದೆ.” ಎಂದ
ರಕ್ಷಿತ್ ಶೆಟ್ಟಿ ಅವರು ಮುಂದಿನ
ದಿನದಲ್ಲಿ ಸುದೀಪ್ ನಿರ್ದೇಶನದ ಚಿತ್ರವೊಂದರಲ್ಲಿ
ನಟಿಸುತ್ತೇನೆ ಎಂದು ಹೇಳಿದರು. ರಕ್ಷಿತ್
ಅಭಿನಯದ ‘ರಿಕ್ಕಿ’ ಚಲನಚಿತ್ರ ಸದ್ಯದಲ್ಲೇ
ತೆರೆಕಾಣಲಿದೆ. ‘ಗೋಧಿ ಬಣ್ಣ ಸಾಧಾರಣ
ಮೈಕಟ್ಟು’, ‘ಅವನೇ ಶ್ರೀಮನ್ನಾರಾಯಣ’ ಮುಂತಾದ
ಚಲನಚಿತ್ರಗಳ ಚಿತ್ರೀಕರಣ ನಡೆಯಲಿಕ್ಕಿದೆ.


Comments
Post a Comment