Posts

ಹೈಟೆಕ್ ಆಗಲಿದೆ ಬಿಎಂಟಿಸಿ

Image
ನಗರದ ಜನತೆಗೆ ಸುಗಮ ಸೇವೆಯನ್ನು ನೀಡುವಲ್ಲಿ ಬಿಎಂಟಿಸಿ ಎಂದಿಗೂ ಹಿಂದೆ ಬಿದ್ದಿಲ್ಲ. ಉಳಿದ ರಾಜ್ಯಗಳ ಸಾರಿಗೆ ವ್ಯವಸ್ಥೆಗೆ ಹೋಲಿಸಿದರೆ ಬಿಎಂಟಿಸಿ ನೀಡುತ್ತಿರುವ ಸೇವೆಯನ್ನು ಶ್ಲಾಸಲೇಬೇಕು. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಗುರಿ ಹೊಂದಿರುವ ಬಿಎಂಟಿಸಿ  ಇಂದು ನಷ್ಟದ ಮೂಟೆಯಲ್ಲಿ ಸಿಕ್ಕಿರುವುದಂತೂ ಸುಳ್ಳಲ್ಲ . ಹೌದು .. ಬಿಎಂಟಿಸಿ ಸಂಸ್ಥೆ ಇಂದು ನಷ್ಟದಲ್ಲಿ ನಡೆಯುತ್ತಿದೆ ಎನ್ನುವಂತದ್ದು ಸತ್ಯ. ನಗರಕ್ಕೆ ನಮ್ಮ ಮೆಟ್ರೋ ರೈಲು ಕಾಲಿಟ್ಟ ಮೇಲಂತು ಅನೇಕ ಪ್ರಯಾಣಿಕರು ಮೆಟ್ರೋದ ಲಾಭ ಪಡೆಯುತ್ತಿದ್ದಾರೆ. ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸುವುದರ ಜೊತೆಗೆ ತಲುಪಬೇಕಾದ ಸ್ಥಳಕ್ಕೆ ಅತ್ಯಂತ ವೇಗವಾಗಿ ಕ್ರಮಿಸಬಹುದೆಂಬ ಉದ್ದೇಶ ಪ್ರಯಾಣಿಕರದ್ದುಘಿ. ಕಳೆದ ಕೆಲ ವರ್ಷದಿಂದ ಬಿಎಂಟಿಸಿ ತನ್ನ ನಷ್ಟವನ್ನು ಬರಿಸಲು ಏನೇ ಕಸರತ್ತು ನಡೆಸಿದರೂ ಅಷ್ಟೊಂದು ಪರಿಣಾಮಕಾರಿಯಾಗಲಿಲ್ಲ. ಆದರೆ ಇದೀಗ ಪ್ರಯಾಣಿಕರನ್ನು ಸೆಳೆಯುವ ವಿನೂತನನ ಯೋಜನೆಗೆ ಸಜ್ಜಾಗಿದೆ. ಬಿಎಂಟಿಸಿ ಮುಂದಿನ ದಿನಗಳಲ್ಲಿ ಏನೆಲ್ಲಾ ಯೋಜನೆಗೆ ಸನ್ನದ್ದವಾಗಿದೆ ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ. ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಉಚಿತ ವೈಫೈ ಇಂದಿನ ಯುಗದಲ್ಲಿ ಸ್ಮಾರ್ಟ್ ಫೋನ್ ಕಾಣದವರ ಸಂಖ್ಯೆ ವಿರಳ ಎಂದು ಹೇಳಬಹುದು. ಇಂಟರ್‍ನೆಟ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಮೊಬೈಲ್ ಮೂಲಕ ಅಂತರ್ಜಾಲವನ್ನು ಬಳಸದವರು ಕಡಿಮೆ. ಮುಂದಿನ ದಿನಗಳಲ್ಲಿ...
Image
ಯಶ್ ಹೇಳಿದ ಭವಿಷ್ಯ ನಿಜವಾಯ್ತು ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಎಲ್ಲರ ಬಾಯಲ್ಲೂ ‘ ರಂಗಿತರಂಗ’ ಚಲನಚಿತ್ರದ್ದೇ ಮಾತು . ಹೌದು ಈ ಚಲನಚಿತ್ರ ಮಾಡಿದ ಮೋಡಿಯೇ ಅಂತದ್ದು . ನಿರ್ದೇಶಕ ಅನೂಪ್ ಭಂಡಾರಿ ತನ್ನ ಮೊದಲನೇ ಪ್ರಯತ್ನದಲ್ಲಿಯೇ ಗೆದ್ದಿದ್ದಾರೆ . ‘ರಂಗಿತರಂಗ’ ಚಲನಚಿತ್ರ ಕಳೆದ ವಾರ ಬಿಡುಗಡೆಯಾಗಿದ್ದು ಚಲನಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿ ಎಲ್ಲೆಡೆ ಹೌಸ್ ‌ ಫುಲ್ ಪ್ರದರ್ಶನ ಕಾಣುತ್ತಿದೆ . ‘ ಬಾಹುಬಲಿ’ ಚಲನಚಿತ್ರ ಬಿಡುಗಡೆಯಾದರೂ ‘ ರಂಗಿತರಂಗ’ ಚಲನಚಿತ್ರವನ್ನು ನೋಡುವವರ ಸಂಖ್ಯೆ ಕಡಿಮೆಯಾಗಿಲ್ಲ . ಚಿತ್ರರಂಗದ ಗಣ್ಯರು ಕೂಡಾ ಈ ಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಕ್ಕೆ ದೌಡಾಯಿಸುತ್ತಿದ್ದಾರೆ . ಈ ಚಲನಚಿತ್ರ ಬಿಡುಗಡೆಗೆ ಮುನ್ನವೇ ಕೇವಲ ಟ್ರೈಲರ್ ನೋಡಿ ರಾಕಿಂಗ್ ಸ್ಟಾರ್ ಯಶ್ ಅವರು ‘ ರಂಗಿತರಂಗ’ ಚಿತ್ರ ಹಿಟ್ ಆಗುತ್ತದೆ ಎಂದು ಭವಿಷ್ಯ ನುಡಿದ್ದರು . ಯಶ್ ಏನಂದಿದ್ರು ? “ಒಂದು ಟ್ರೈಲರ್ ‌ ನಿಂದ ಆ ಚಿತ್ರದ ವ್ಯಾಲ್ಯೂ ಏನು ಅನೋದನ್ನ ನಾನು ನಂಬುತ್ತೇನೆ . ‘ ರಂಗಿತರಂಗ’ ಟ್ರೈಲರ್ ನೋಡಿ ಇಂಪ್ರೆಸ್ ಆಗಿದ್ದೇನೆ . ಹೊಸಬರ ಈ ಪ್ರಯತ್ನ ನೋಡಿ ತುಂಬಾನೇ ಖುಷಿಯಾಗ್ತಿದೆ . ಚಿತ್ರದ ಗುಣಮಟ್ಟದಲ್ಲಿ ತುಂಬಾನೇ ಮುಂದಿದ್ದಾರೆ . ಕನ್ನಡ ಇಂಡಸ್ಟ್ರಿಗೆ ಈ ರೀತಿಯ ಚಲನಚಿತ್ರಗಳು   ಬರಬೇಕು . ಸಿ...
Image
ತುಳು ಚಿತ್ರದಲ್ಲೂ ನಟಿಸಲು ರೆಡಿ ಎಂದ ರಾಗಿಣಿ “ಉಳಿದ ಚಿತ್ರರಂಗದಂತೆಯೇ ತುಳು ಚಲನಚಿತ್ರ ರಂಗ ಕೂಡಾ ಬೆಳೆಯುತ್ತಿದೆ . ತುಳುವಿನಲ್ಲೂ ಅನೇಕ ಒಳ್ಳೆಯ ಚಲನಚಿತ್ರಗಳು ಬರುತ್ತಿದೆ . ಒಂದು ವೇಳೆ ತುಳು ಭಾಷೆಯಲ್ಲಿ ನಟಿಸುವ ಅವಕಾಶ ಸಿಕ್ಕರೆ ನಾನು ರೆಡಿ” ಎಂದು ನಾಯಕಿ ರಾಗಿಣಿ ದ್ವಿವೇದಿ ಹೇಳಿದ್ದಾರೆ . ‘ ಜುಗಾರಿ ’ ಬಲಿಪೆರ ಇಜ್ಜಿ ಎಂಬ ತುಳು ತುಳು ಚಲನಚಿತ್ರದ ಮುಹೂರ್ತ ಸಮಾರಂಭದಲ್ಲಿ ಪಾಲ್ಗೊಂಡ ತುಪ್ಪದ ಬೆಡಗಿ ಇತ್ತೀಚೆಗೆ ಕನ್ನಡ ಚಲನಚಿತ್ರ ರಂಗದಲ್ಲಿ ನಾಯಕಿ ಪ್ರಧಾನವಾದ ಚಲನಚಿತ್ರಗಳು ಬರುತ್ತಿದೆ . ನಾನು ಕೂಡಾ ಈ ಹಿಂದೆ ‘ ರಾಗಿಣಿ ಐ . ಪಿ . ಎಸ್’ ಚಲನಚಿತ್ರದಲ್ಲಿ ನಟಿಸಿದ್ದೇನೆ . ಈ ಚಿತ್ರಕ್ಕೆ ಉತ್ತಮ ಮನ್ನಣೆ ದೊರೆಯಿತು . ಸದ್ಯ ‘ ವೀರ ರಣಚಂಡಿ ’ ಚಲನಚಿತ್ರದಲ್ಲಿ ನಟಿಸಿದ್ದು ಅಗಷ್ಟ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದರು . ಜುಗಾರಿ ’ ಬಲಿಪೆರ ಇಜ್ಜಿ ಚಲನಚಿತ್ರದಲ್ಲಿ ನಾಯಕನಾಗಿ ‘ ಯಶೋದೆ ’ ಧಾರವಾಹಿಯ ನಟ ಕಾರ್ತಿಕ್ ಅತ್ತಾವರ್ ನಟಿಸುತ್ತಿದ್ದು ನಾಯಕಿಯಾಗಿ ಎಸ್ತೇರ್ ನರೋನ್ಹಾ ನಟಿಸುತ್ತಿದ್ದಾರೆ . ಉಳಿದಂತೆ ಅಮಿತ್ ರಾವ್ , ನವೀನ್ ಡಿ . ಪಡೀಲ್ , ಅರವಿಂದ ಬೋಳಾರ್ , ಭೋಜರಾಜ ವಾಮಂಜೂರ್ ಮುಂತಾದವರು ತಾರಾಗಣದಲ್ಲಿದ್ದಾರೆ . ಈ ಹಿಂದೆ ರಾಷ್ಟ್ರ ಪ್ರಶಸ್ತಿ ವಿಜೇತ ‘ ಕೋಟಿ ಚೆನ್ನಯ ’ ಚಲನಚಿತ್ರವನ್ನು...
Image
ಮನ’ಮೋಹನ ’  ಸಂಕಲನ ಒಂದು ಚಲನಚಿತ್ರವನ್ನು ಎರಡು ಘಂಟೆ ನೋಡಿ ನಾವು ಆನಂದ ಪಡ್ತೀವಿ . ಆದರೆ ಆ ರೀತಿ ಮೂಡಿ ಬರಲು ತಂತ್ರಜ್ಞರ ಸಹಕಾರ ಬಹುಮುಖ್ಯ . ಅದರಲ್ಲಿ ಎಡಿಟಿಂಗ್ ಕೆಲಸವಿಲ್ಲದಿದ್ದರೆ ಚಲನಚಿತ್ರವು ಸಂಪೂರ್ಣವಾಗಲಾರದು . ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಪ್ರತಿಭಾವಂತ ಸಂಕಲನಕಾರರಿದ್ದಾರೆ ಅಂತಹವರ ಪೈಕಿ ಮೋಹನ್ ಕಾಮಾಕ್ಷಿ ಕೂಡಾ ಒಬ್ಬರು .   ಮೂಲತಃ ಬೆಂಗಳೂರಿನವರಾದ ಇವರಿಗೆ ನಿರ್ದೇಶಕರಾಗಬೇಕೆಂಬ ಅತೀವ ಆಸಕ್ತಿ ಇತ್ತು . ಆದರೆ ಇಳಿದದ್ದು ಎಡಿಟಿಂಗ್ ವಿಭಾಗಕ್ಕೆ, ಆದರೇನಂತೆ ಅಲ್ಲೂ ಸಕ್ಸಸ್ . ಮೋಹನ್ ಕಾಮಾಕ್ಷಿ ಅವರು ‘ ಡೈರೆಕ್ಟರ್ ಸ್ಪೆಷಲ್ ’ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ . ಜೊತೆ ಇವರ ನಿರ್ದೇಶನದ ಹೊಸದೊಂದು ಚಿತ್ರದ ಮಾತುಕತೆ ಕೂಡಾ ನಡೆಯುತ್ತಿದೆ . ‘ ಹುಡುಗರು ’, ‘ ಯಾರೇ ಕೂಗಾಡಲಿ ’ ಚಲನಚಿತ್ರದ ಮೂಲ ತಮಿಳು ಭಾಷೆಯಾಗಿದ್ದು ಈ ಭಾಷೆಯಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ . ಇವರ ಪ್ರತಿ ಕೆಲಸದ ಹಿಂದೆ ತಂದೆ ವರದರಾಜ್ ತಾಯಿ ಅಣ್ಣಮ್ಮ ಮತ್ತು ಪತ್ನಿ ಧನಲಕ್ಷ್ಮೀ ಅವರ ಪ್ರೋತ್ಸಾಹವಿದೆ . ಬಹುಮುಖ ಪ್ರತಿಭೆಯಾದ ಮೋಹನ್ ಕಾಮಾಕ್ಷಿ ಅವರು ತಮ್ಮ ಮನದಾಳದ ಮಾತನ್ನು ‘ ಬಾಲ್ಕನಿ ಡಾಟ್ ಕಾಮ್ ’ ಜೊತೆಹಂಚಿಕೊಂಡದ್ದು ಹೀಗೆ : ಸಂಕಲನ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಹುಟ್ಟಿದ...
Image
ಸುದೀಪ್ ಜೊತೆ ನಟಿಸ್ತಾರಾ ಶಿವಣ್ಣ ? ಕಳೆದ ವಾರ ಸಟ ಸುದೀಪ್ ಅಭಿನಯ ‘ ರನ್ನ ’ ಚಿತ್ರ ಬಿಡುಗಡೆಗೊಂಡಿದ್ದು ಬಾಕ್ಸ್ ‌ ಆಫೀಸ್ ‌ ನ್ನು ಕೊಳ್ಳೆ ಹೊಡೆಯುತ್ತಿದೆ . ಇದೇ ಸಂದರ್ಭದಲ್ಲಿ ಸುದೀಪ್ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ ನಾನು ಮತ್ತು ಶಿವಣ್ಣ ಒಳ್ಳೆಯ ಸ್ನೇಹಿತರು . ನಾನು ಕಾಲೇಜು ದಿನಗಳಿಂದ ಶಿವಣ್ಣ ಅವರ ಚಿತ್ರವನ್ನು ನೋಡಿ ಬೆಳೆದವನು ಎಂದು ಹೇಳಿದ್ದರು . ನಟ ಶಿವರಾಜ್ ಕುಮಾರ್ ಅವರು ತಾನು ನಟಿಸುತ್ತಿರುವ ಮುಂದಿನ ವಾರ ತೆರೆ ಕಾಣಬೇಕಾದ ‘ ವಜ್ರಕಾಯ ’ ಸಿನಿಮಾದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ‘ ನಾನು ಮತ್ತು ಸುದೀಪ್ ಒಳ್ಳೆಯ ಸ್ನೇಹಿತರು . ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎನ್ನುವುದು ಕೇವಲ ಗಾಳಿಸುದ್ದಿ . ಇದನ್ನು ಅಭಿಮಾನಿಗಳು ನಂಬಬೇಡಿ’ ಎಂದು ಹೇಳಿದ್ದಾರೆ . ನಮ್ಮ ನಡುವೇ ಯಾವುದೇ ರೀತಿಯಲ್ಲಿ ಸ್ಟಾರ್ ‌ ವಾರ್ ಇಲ್ಲ . ಈ ಹಿಂದೆ ಸುದೀಪ್ ನಿರ್ದೇಶಿಸಿದ್ದ ‘ ಶಾಂತಿನಿವಾಸ ’ ಚಿತ್ರದಲ್ಲಿಯೂ ಪೋಷಕ ನಟನಾಗಿ ನಾನು ಕಾಣಿಸಿಕೊಂಡಿದ್ದೆ . ನಮ್ಮ ಕುಟುಂಬದ ಬಗ್ಗೆ ಸುದೀಪ್ ಅವರಿಗೆ ತುಂಬಾನೇ ಗೌರವವಿದೆ . ನನ್ನ ಪತ್ನಿ ಗೀತಾ ಮಾಡುವ ಅಕ್ಕಿರೊಟ್ಟಿ ಎಂದರೆ ಸುದೀಪ್ ‌ ಗೆ ತುಂಬಾ ಇಷ್ಟ ಎಂದಿದ್ದಾರೆ . ನನ್ನ ನಟನೆಯ ‘ ವಜ್ರಕಾಯ ’ ಚಲನಚಿತ್ರವನ್ನು ...
Image
‘ಚಾಲಿಪೋಲಿಲು’ ತುಳು ಚಿತ್ರ 250 ದಿನಗಳ ಪ್ರದರ್ಶನ   ತುಳು ಸಿನಿಮಾ ರಂಗದಲ್ಲಿ ಈಗ ಸಮೃದ್ಧಿಯ ಕಾಲವಾಗಿದ್ದು ಅನೇಕ ಚಲನಚಿತ್ರಗಳು ತೆರೆ ಕಾಣುತ್ತಿವೆ . ಈ   ಪೈಕಿ   ಜಯಕಿರಣ ಲಾಂಛನದಡಿಯಲ್ಲಿ ಪ್ರಕಾಶ್ ಪಾಂಡೇಶ್ವರ ನಿರ್ಮಾಣದ ‘ ಚಾಲಿಪೋಲಿಲು ’ ಚಲನಚಿತ್ರವೂ ಒಂದು . ಈ ಚಿತ್ರಕ್ಕೆ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರ್ ಅವರ   ನಿರ್ದೇಶನವಿದ್ದು ಮಲ್ಟಿಪ್ಲೆಕ್ಸ್ ನಲ್ಲಿ ಈ ಚಿತ್ರವು ಇಂದಿಗೆ 250 ದಿನಗಳನ್ನು ಪೂರೈಸಿ ದಾಖಲೆಗೆ ಕಾರಣವಾಗಿದೆ .     ಕೇವಲ 60 ಲಕ್ಷ ಬಜೆಟ್ ‌ ನಲ್ಲಿ ತಯಾರಾದ ‘ ಚಾಲಿಪೋಲಿಲು’ ಚಿತ್ರವು ಈ ಹಿಂದೆ 5 ಚಿತ್ರಮಂದಿರಗಳಲ್ಲಿ 75 ದಿನ ಮತ್ತು 3 ಚಿತ್ರಮಂದಿರದಲ್ಲಿ 100 ದಿನಗಳಿಗೂ ಮಿಕ್ಕಿ ಪ್ರದರ್ಶನ ಕಂಡಿತ್ತು . ಪ್ರಸ್ತುತ ಪಾಂಡೇಶ್ವರ ಪಿವಿಆರ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ದಿನಂಪ್ರತಿ   ಪ್ರದರ್ಶನ ಕಾಣುತ್ತಿದ್ದು , ಇಂದಿಗೆ 250ನೇ ದಿನದ ಪ್ರದರ್ಶನ ನೀಡಿದೆ . ದೇಶವ್ಯಾಪಿಯಾಗಿ ಇರುವ ಪಿ.ವಿ.ಆರ್ ‌ ನ   ಯಾವುದೇ ಚಿತ್ರಮಂದಿರದಲ್ಲಿ ಪ್ರಾದೇಶಿಕ ಭಾಷೆಯ   ಸಿನಿಮಾವೊಂದು ಈ ರೀತಿಯ ಪ್ರದರ್ಶನ ಕಂಡಿರಲಿಲ್ಲ . ಈ ಹಿಂದೆ ನಡೆದ ತುಳು ಸಿನಿಮಾ ಪ್ರಶಸ್ತಿ ಸ್ಪರ್ಧೆಯಲ್ಲಿ   ‘ ಚಾಲಿಪೋಲಿಲು ’ 8 ಪ್ರಶಸ್ತಿಯನ್ನೂ ಬಾಚಿಕೊಂಡಿತ್ತು . ಹೊಸ...