ಶ್ರವಂತ್ ಶ್ರಾವಂತಿಕೆ                         

ಕಿರುತೆರೆಯಿಂದ ಪರಿಚಯವಾದ ಅದೆಷ್ಟೋ ಪ್ರತಿಭೆಗಳು ಇಂದು ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ. ಮೊನ್ನೆ ಮೊನೆ ಟಿ.ವಿ ಪರದೆ ಮುಂದೆ ಹಾಯ್... ಹಲೋ .. ಅನ್ನುತ್ತಿದ್ದ ಹುಡುಗ ಇಂದು ನಾಯಕ ನಟನಾಗುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾನೆ. ಹೌದು ಅಂದ ಹಾಗೆ ಈಗ ಹೇಳಲಿಕ್ಕೊರಟಿರುವುದು ಪರಾರಿ ಚಲನಚಿತ್ರದ ನಾಯಕ ನಟ ಶ್ರವಂತ್ ರಾವ್ ಅವರ ಬಗ್ಗೆ.

ಬಾಲ್ಯದಿಂದಲೇ ಈತನಿಗೆ ಉತ್ತಮ ನಟನಾಗುವ ಬಯಕೆ ಇತ್ತು. ಅಷ್ಟಲ್ಲದೆಯೂ ಚಿತ್ರರಂಗದ ವಾತಾವರಣದಲ್ಲೇ ಬೆಳೆದ ಹುಡುಗ.  ಈತನ ತಾತ ವಾಸುದೇವ ರಾವ್ ಮತ್ತು ತಂದೆ ಮಂಜುನಾಥ ಅವರು ನಡೆಸುತ್ತಿದ್ದ ಸಫಾರಿ ಪ್ರೊಡಕ್ಷನ್‌ನಲ್ಲಿ ಅನೇಕ್ ಹಿಟ್ ಚಿತ್ರ ತೆರೆಕಂಡಿದೆ. ಮುಂದಿನ ದಿನದಲ್ಲಿ ಈ ಪ್ರೊಡಕ್ಷನ್ ಲಾಸ್ ಆದಾಗ ತಾನು ಚಿತ್ರರಂಗಕ್ಕೆ ಬರಲು ಈತ ಆರಿಸಿದ್ದು  ಆಂಕರಿಂಗ್ ಕ್ಷೇತ್ರ.
ಸತತ ಆರು ವರ್ಷಗಳ ಕಾಲ ಖಾಸಗಿ ಮ್ಯೂಸಿಕ್ ಚಾನೆಲ್ ನಲ್ಲಿ ಆಂಕರಿಂಗ್ ಮಾಡುತ್ತಿದ್ದ. ಆ ಸಮಯಕ್ಕಾಗಲೇ ನಿರೂಪಕನಾಗಿದ್ದ ಗಣೇಶ್ ಮುಂಗಾರುಮಳೆ ಚಿತ್ರದಿಂದ ರಾತ್ರೋ ರಾತ್ರಿ ಹೀರೋ ಆಗಿದ್ದರು. ಇದರಿಂದಾಗಿ ನಿರೂಪಕನಾಗಿದ್ದ ಶ್ರವಂತ್‌ಗೂ ಪಿಲ್ಮ್‌ಲ್ಯಾಂಡ್‌ಗೆ ಛಾನ್ಸ್ ಸಿಕ್ಕಿತ್ತು. ಚೆನ್ನಗಂಗಪ್ಪ ನಿರ್ದೇಶನದ

'ಚಿಕ್ಕಮಗಳೂರ ಚಿಕ್ಕಮಲ್ಲಿಗೆ' ಚಿತ್ರದಲ್ಲಿ. ಲವರ್ ಬಾಯ್ ಆಗಿ ಕಾಣಿಸಿಕೊಂಡ ಶ್ರವಂತ್ ಮುಂದೆ ಎರಡು ವರ್ಷಗಳ ಕಾಲ ಸ್ಟಡಿ ವಿಷಯಕ್ಕಾಗಿ ಚಿತ್ರರಂಗಕ್ಕೆ ಬ್ರೇಕ್ ಹಾಕಿದ್ದ.

ಮುಂದಿನ ದಿನಗಲ್ಲಿ ನಾವಿಕ ಎಂಬ ಚಿತ್ರಕ್ಕೆ ಅವಕಾಶ ಬಂತು. ಪಕ್ಕಾ ಪೋಲೀಸ್ ರೋಲ್‌ನಲ್ಲಿ ಮಿಂಚಿದ ಈತನ ಆಕ್ಟಿಂಗ್‌ಗೆ ಹಲವಾರು ಮಂದಿ ಶಹಬ್ಬಾಸ್ ಎಂದದ್ದುಂಟು. ನಂತರ ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾದ ಶ್ರವಂತ್ ನಿರ್ದೇಶಕ ಎ.ಎಮ್.ಆರ್ ರಮೇಶ್ ಅವರ ಅಟ್ಟಹಾಸ ಚಿತ್ರದಲ್ಲಿ ಪೋಲೀಸ್ ಆಫೀಸರ್‌ನ ಪಾರ್ಥದಲ್ಲಿ ಕಾಣಿಸಿಕೊಂಡಿದ್ದ.                                                                                     ಅಭಿನಯ ತರಂಗ' ಇನ್ಸ್ಟಿಟ್ಯೂಟ್‌ನಲ್ಲಿ ಹೆಚ್ಚಿನ ಟ್ರೈನಿಂಗ್ ಪಡೆದ  ಶ್ರವಂತ್‌ಗೆ ಎನ್ ಎನ್ ಚೈತನ್ಯ ನಿರ್ದೇಶನದ ಬಿಡುಗಡೆಗೆ ತಯಾರಾದ 'ಪರಾರಿ' ಚಿತ್ರ ದೊಡ್ಡ್ ಬ್ರೇಕ್ ಕೊಡುವ ಹಂತದಲ್ಲಿದೆಯಂತೆ.
ಶಂಕರ್‌ನಾಗ್ ಮತ್ತು ಪ್ರಕಾಶ್ ರೈ ನನ್ನ ರೋಲ್ ಮಾಡೆಲ್ ಎನ್ನುವ ಶ್ರವಂತ್ ಸದ್ಯ

ಎ.ಎಮ್. ಆರ್ ರಮೇಶ್ ನಿರ್ದೇಶನ ಮಾಡುತ್ತಿರುವ ರಾಜೀವ್ ಗಾಂಧಿ ಹತ್ಯೆಯ ರಿಯಲ್ ಕಥೆಯುಳ್ಳ ಹೊಸ ಸಿನಿಮಾದಲ್ಲಿ ನಟಿಸುವ ತರಾತುರಿಯಲ್ಲಿದ್ದಾನೆ. ಇಷ್ಟಲ್ಲದೆ ಶ್ರೀನಿವಾಸ್ ನಿರ್ದೇಶನದ ಹೊ ಟೀಂವುಳ್ಳ ಇನ್ನೂ ಹೆಸರಿಡದ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾನೆ.

ಇವನೊಬ್ಬ ಆಂಕರ್, ಏನೂ ಮಾಡುವ ಯೋಗ್ಯತೆ ಇಲ್ಲ. ಕ್ಯಾಮರಾ ಮುಂದೆ ನಿಂತು ಹಾಡು ಪ್ರಸಾರ ಮಾಡುವುದು ಮಾತ್ರ ಈತನಿಗೆ ಗೊತ್ತು. ಅನ್ನುವ ಅನೇಕ ಮಂದಿಗೆ ಸಡ್ಡು ಹೊಡೆದ ಶ್ರವಂತ್ ನೆಗೆಟಿವ್ ರೋಲ್ ಸಿಕ್ಕಿದರೆ ಛಾಲೆಂಜಿಂಗ್ ಆಗಿ ಮಾಡ್ತಾರಂತೆ.                                                                                                                                                                  ಇತೀ ತಮ್ಮ ವಿಶ್ವಾಸಿ,
                                                              ನವೀನ್ ಭಟ್,ಇಳಂತಿಲ
                                                          ತೃತೀಯ ಪತ್ರಿಕೋದ್ಯಮ ವಿಭಾಗ
                                                     ವಿವೇಕಾನಂದ ಕಾಲೇಜು ಪುತ್ತೂರು
                                                          ಪೋನ್: ೯೮೪೪೬೩೮೫೪೫

Comments

Popular posts from this blog