ಬಿಗ್‌ಬಾಸ್ ವೇದಿಕೆಯಿಂದ 'ಶ್ವೇತಾ'ಗಮನ                           
ಸ್ವಲ್ಪ ತರಲೆ, ಸ್ವಲ್ಪ ಕೋಪ, ಚೂರು ಬೇಜಾರು, ಸಿಕ್ಕಾಪಟ್ಟೆ ಫನ್ ಇವೆಲ್ಲಾ ಒಂದೇ ವೇದಿಕೆಯಲ್ಲಿ ಸಿಗಬೇಕಾದರೆ ಬಿಗ್‌ಬಾಸ್ ರಿಯಾಲಿಟೀ ಷೋನ ನೋಡಲೇಬೇಕು. ಈ ವಿಷಯ ಈಗ ಯಾಕೆ ಅಂದ್ಕೊಂಡ್ರಾ..? ಅಂದ ಹಾಗೆ ಈಗ ಹೇಳಲಿಕ್ಕೆ ಹೊರಟಿರೋದು ಇತ್ತೀಚೆಗೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಶ್ವೇತಾ ಪಂಡಿತ್ ಬಗ್ಗೆ.    ಕಡಲತಡಿಯ ಈ ಹುಡುಗಿ ತನ್ನ ಬಾಲ್ಯಕಳೆದದ್ದು ಮೂಡಬಿದಿರೆಯಲ್ಲಿ. ಎಳೆಯಲ್ಲೇ ಶಾಸ್ತ್ರೀಯ ಕಲೆ ಭರತನಾಟ್ಯದತ್ತ ಅಪಾರ ಒಲವು. ಸ್ಮಿತಾ ಭಟ್ ಅವರಲ್ಲಿ ಕೆಲಕಾಲ ಕಲಿಕೆ. ಮುಖದ ಹಾವ-ಬಾವ ಮುದ್ರೆಗಳ ಬಗೆಗೆ ಕಲಿತ ಶ್ವೇತಾಳಿಗೆ ನಟನೆಯ ಸಮಯದಲ್ಲೂ ಇದು ತುಂಬಾನೇ ಸಹಾಯವಾಯಿತಂತೆ.                       ಕಾಲೇಜು ದಿನಗಳಲ್ಲೂ ಶ್ವೇತಾ ಸಖತ್ ಚೂಟಿ. ವಾಲಿಬಾಲ್ ಸೇರಿದಂತೆ ಅನೇಕೆ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಳು. ಅನೇಕ ಜಾಹಿರಾತಿಗೆ ಮಾಡಲ್ ಆಗಿಯೂ ಕಾಣಿಸಿದ್ದಾಳೆ. ಅಲ್ಲದೆ ರಂಗಕಲೆ ನಾಟಕದತ್ತಲೂ ಶ್ವೇತಾಳಿಗೆ ಒಲವು ಜಾಸ್ತಿ. ಮುಂಬೈನ ಶಬಾನಾ ಅಜ್ಮಿ ಫಲ್ಮ್ ಇನ್ಟಿಟ್ಯೂಟ್ ನಲ್ಲಿ ನಟನೆಯನ್ನು ಕಲಿತಿದ್ದಾಳೆ.                                              

ತನ್ನ ಸಹೋದ್ಯೋಗಿ ಅವರಿಂದ ಈಕೆಯ ಪೊಟೋ ನಿರ್ದೇಶಕ ಯೋಗರಾಜ ಭಟ್ ಅವರ ಕೈಗೆ ಸಿಕ್ಕಿತ್ತು. ತಾನು ನಿರ್ದೇಶನದ ’ಪರಮಾತ್ಮ’ ಚಲನಚಿತ್ರಕ್ಕೆ ಶ್ವೇತಾಳನ್ನು ಆಯ್ಕೆ ಮಾಡಿದರು. ಸಿಕ್ಕ ಅವಕಾಶಕ್ಕೆ ಜೀವತುಂಬಿದ ಈಕೆ 'ಕತ್ಲಲ್ಲಿ ಕರಡಿಗೆ' ಮತ್ತು 'ಕಾಲೇಜ್ ಗೇಟಲ್ಲಿ' ಹಾಡಿಗೂ ಹೆಜ್ಜೆ ಹಾಕಿದ್ದಳು.                    ಸದ್ಯ ಗಾಂದೀನಗರದಲ್ಲಿ ಬಿಡುಗಡೆಗೆ ಸಿದ್ದವಾದ ಮಹೇಶ್ ರಾವ್ ನಿರ್ದೇಶನದ 'ಕೇಸ್ ನಂ: ೧೮/೯' ನಲ್ಲಿ ಕಾಲೇಜು ಹುಡುಗಿಯ ರೋಲ್‌ನಲ್ಲಿ ನಟಿಸಿದ್ದಾಳೆ. ಅಷ್ಟೇಕೆ ತೆಲುಗು ಇಂಡಸ್ಟ್ರಿಗೂ ಈಕೆ ಪರಿಚಿತೆ. ಈಗಾಗಲೇ ತೆರೆಕಂಡ ಶ್ರೀನಿವಾಸ ರಾಜು ನಿರ್ದೇಶನದ 'ಥಿಯೇಟರ್ ಲೋ' ಎಂಬ ಚಲನಚಿತ್ರದಲ್ಲಿ ನಟಿಸಿದ ಅನುಭವ ಈ ಬೆಡಗಿಗಿದೆ.                                                                                      ನಂತರ ಶ್ವೇತಾಳಿಗೆ ದೊಡ್ಡ ಬ್ರೇಕ್ ಕೊಟ್ಟದ್ದು  ಈ ಟಿ.ವಿ ಕನ್ನಡದ ಬಿಗ್‌ಬಾಸ್ ರಿಯಾಲಿಟೀ ಷೋ. ಗೆಲ್ಲಲೇಬೇಕೆಂಬ ಪಣತೊಟ್ಟು ಬಿಗ್‌ಬಾಸ್ ಮನೆಗೆ ಕಾಲಿಟ್ಟ ಶ್ವೇತಾ ಬರೋಬ್ಬರಿ ೨೧ ದಿನ ಆ ಮನೆಯಲ್ಲಿದ್ದಳು. ಈ ಷೋದಲ್ಲಿ ಅಗ್ನಿಹೋಮ, ರಾಣಿಯರ ಟಾಸ್ಕ್ ಮತ್ತು ರಾಕ್ಷಸರು ಮತ್ತು ದೇವತೆಯರ ಟಾಸ್ಕ್ ಸೆರಿದಂತೆ ಮೂರು ಟಾಸ್ಕ್‌ನಲ್ಲೂ ಉತ್ತಮ ಪ್ರದರ್ಶನ ಈಕೆಯಿಂದ ಮೂಡಿದೆ.                                                      

'ಈ ಷೋದಲ್ಲಿ ಚಿಕ್ಕ ಚಿಕ್ಕ ವಿಷಯಕ್ಕೆ ನಿಖಿತಾ ಮತ್ತು ನನ್ನ ಜೊತೆ ಹಲವಾರು ಬಾರಿ ಜಗಳಗಳು ನಡೆದದ್ದಿದೆ. ಆದರೂ ಅದನ್ನು ನಾನು ಸಂಬಾಲಿಸಿದೆ. ತಿಲಕ್ ನನ್ನ ಬೆಸ್ಟ್ ಪ್ರೆಂಡ್' ಎನ್ನುವ ಶ್ವೇತಾ ಈ ಮನೆಯಿಂದ ಹಲವಾರು ವಿಚಾರವನ್ನು ಕಲಿತಳಂತೆ. ಜೊತೆ ಇಂದು ತುಂಬಾನೇ ಮಿಸ್ ಮಾಡ್ಕೊಳ್ತಿದ್ದಾಳಂತೆ.       ವಿನಾಯಕ್ ಮತ್ತು ಶ್ರೀಮತಿ ಅರುಣಾ ದಂಪತಿಯರ ಪುತ್ರಿಯಾದ ಶ್ವೇತಾಳಿಗೆ ತನ್ನ ಕಲೆಯನ್ನು ಕೇವಲ ಒಂದು ಭಾಷೆಗೆ ಸೀಮಿತ ಪಡಿಸಿಕೊಡದೆ ಅನ್ಯ ಭಾಷೆಯಲ್ಲೂ ನಟಿಸುವ ಬಯಕೆ ಇದೆ. 

                               ಇತೀ ತಮ್ಮ ವಿಶ್ವಾಸಿ,
                             ನವೀನ್ ಭಟ್,ಇಳಂತಿಲ
                         ಮೊಬೈಲ್ ನಂ-೯೮೪೪೬೩೮೫೪೫

                                                                                      



Comments

Popular posts from this blog