ಕಲಾ ವಲಯದ ಅಕ್ಷಯ ಪಾತ್ರೆ ಯಾವುದೋ ಒಂದು ಕ್ಷೇತ್ರದಲ್ಲಿ ಪ್ರತಿಭೆ ಎಂದು ಗುರುತಿಸಿಕೊಳ್ಳುವುದು ಸಹಜ. ಆದರೆ ಈ
ಪ್ರತಿಭೆಯ ಮೇಲೆ ಕಲಾಶಾರದೆಯ ಒಲವು ಎಷ್ಟಿದೆ ಎಂದರೆ ಬಾಲ್ಯದಲ್ಲೇ ಕಲಾವಲಯವು ಈಕೆಯತ್ತ
ಸೆಳೆಯಿತು. ಭರತನಾಟ್ಯ, ಸಂಗೀತ, ಕವನ ವಾಚನ, ಗೈಡ್ಸ್, ರಂಗೋಲಿ .. ಅಬ್ಬಾ..! ಒಂದಾ
ಎರಡಾ..! ಹೀಗೆ ಹಲವು ಕಲಾ ಪ್ರಕಾರವನ್ನು ಎಳೆ ಪ್ರಾಯದಲ್ಲೇ ವರಿಸಿಕೊಂಡು ಅನೇಕ
ಪ್ರಶಸ್ತಿಗಳನ್ನು ಬಾಚಿದ ಈಕೆಯ ಹೆಸರು ಅಕ್ಷತಾ ಕೊಂಕೋಡಿ.ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಎರಡನೇ ವರ್ಷದ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಈಕೆಯ ಕುಟುಂಬ ಸಾಹಿತ್ಯ ಕ್ಷೇತ್ರದಲ್ಲಿ ಸದಾ ಮುಂದು. ಆ ತರೇನ ಮಗಳೂ ಕೂಡಾ ಬಹುಮುಖಿಯಾಗಿ ರೂಪುಗೊಂಡಳು. ಈಕೆಯ ಕಣ್ಣಿಗೆ ಮೊದಲು ಬಿದ್ದದ್ದು ಸಂಗೀತ ಕ್ಷೇತ್ರ. ತಾನು ಚಿಕ್ಕಂದಿನಲ್ಲಿರುವಾಗಲೇ ಹಾಗೊಮ್ಮೆ ಹೀಗೊಮ್ಮೆ ಹಾಡು ಗುನುಗುತ್ತಿದ್ದಳು. ಆದರೆ ಮೂರನೇ ತರಗತಿಯಲ್ಲಿ ಪ್ರತಿಭಾ ಕಾರಂಜಿಗೆ ಸ್ಪರ್ಧಿಸುವುದರ ಜೊತೆ ಪ್ರಥಮ ಸ್ಥಾನ ತೆಗೆದೇ ಬಿಟ್ಟಳು, ಅಲ್ಲಿಂದ ಶುರುವಾದ ಈಕೆಯ ಸಂಗೀತ ಪಯಣ ಇಂದಿಗೂ ಮುಂದುವರಿದಿದೆ.
ಶಾಸ್ತ್ರೀಯ ಸಂಗೀತದಲ್ಲಿ ಅಕ್ಷತಾಳ ಮೊದಲ ಗುರುಗಳು ಕೃಷ್ಣ ಗೋಪಾಲ. ಸಧ್ಯ ವಿದ್ವಾನ್ ಕಾಂಚನ ಈಶ್ವರ ಭಟ್ ಅವರಲ್ಲಿ ಕರಗತ ಮಾಡುತ್ತಿದ್ದಾಳೆ. ಜ್ಯೂನಿಯರ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣಳಾದ ಈಕೆ ಚಿದಾನಂದ ಕಾಮತ್ ನಿರ್ದೇಶನದ ’ಬಾರಿಸು ಕನ್ನಡ ಡಿಂಡಿಮ’ ತಂಡದ ಸಕ್ರೀಯ ಪ್ರತಿಭೆದ್ದಳು. ಉದಯ ವಾಹಿನಿ ಆಯೋಜಿಸಿದ ಹಾಡು ಬಾ ಕೋಗಿಲೆ ರಿಯಾಲಿಟೀ ಷೋದಲ್ಲೂ ಸ್ಪರ್ಧಿಸಿಹಳು.
ಕಾಸರಗೋಡು, ಮಂಗಳೂರು, ಪುತ್ತೂರು, ವಿಟ್ಲ, ಬಂಟ್ವಾಳ ಸೇರಿದಂತೆ ಕರ್ನಾಟಕದಾಧ್ಯಂತ ಹಲವು ಸ್ಪರ್ಧೆಗಳಲ್ಲಿ ಈಕೆಯ ಗಾಯನ ಪ್ರೇಕ್ಷಕರಿಗೆ ಮುದ ನೀಡಿದೆ. ಅಷ್ಟೇಕೆ ಕಲಾ ಪ್ರಕಾರಗಳಲ್ಲೊಂದಾದ ಭರತನಾಟ್ಯವೂ ಅಕ್ಷತಾಳ ನೆಚ್ಚಿನ ಕ್ಷೇತ್ರವಂತೆ. ಏಳನೇ ವಯಸ್ಸಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದ ಅಕ್ಷತಾಳು ಬಾಲಕೃಷ್ಣ ಮಂಜೇಶ್ವರ ಅವರ ಗರಡಿಯಲ್ಲಿ ಪಳಗುತ್ತಿದ್ದಳೆ. ಜ್ಯೂನಿಯರ್ ಗ್ರೇಡನ್ನು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾದ ಈಕೆ ಕಾರಸಗೋಡು, ಕಲ್ಲಿಕೋಟೆ, ಮಂಜೇಶ್ವರ, ಮೂಡಬಿದಿರೆ, ಮಂಗಳೂರು, ಪುತ್ತೂರು ಸೇರಿದಂತೆ ಅನೇಕ ಕಡೆ ಪ್ರದರ್ಶನ ಬೀರಿದ್ದಾಳೆ.
ಸಾಹಿತ್ಯ ವಲಯ ಎಂದರೆ ಈಕೆಗೆ ಅಚ್ಚು ಮೆಚ್ಚು. ಈಗಾಗಲೇ ’ಅಕ್ಷತೆ’ ಎಂಬ ಕವನ ಸಂಕಲನ ಬಿಡುಗಡೆಯಾಗಿದೆ. ಈ ಕವನ ಸಂಕಲನ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ದತ್ತಿನಿಧಿಗೆ ಆಯ್ಕೆಯಾಗಿದೆ.
ಮೈಸೂರಲ್ಲಿ ನಡೆದ ಮಕ್ಕಳ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ, ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕವಿಗೋಷ್ಠಿ ಅಧ್ಯಕ್ಷತೆ,
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಶಿವಮೊಗ್ಗದಲ್ಲಿ ಕನ್ನಡ
ಸಾಹಿತ್ಯ ಪರಿಷತ್ ಮತ್ತು ಶಿಕ್ಷಣ ಇಲಾಖೆ ಆಯೋಜಿಸಿದ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನದ
ವಿಚಾರ ಗೋಷ್ಠಿಯ ಅಧ್ಯಕ್ಷತೆಯ ಪಟ್ಟ ಈ ಪ್ರತಿಭೆಗೆ ಒಲಿದಿದೆ.ಮಣ್ಣಗುಡ್ಡೆಯಲ್ಲಿ ನಡೆದ ಶ್ರಾವಣ ಕವಿಗೋಷ್ಠಿ, ಕವಿ ಸಂಗಮ ಕವಿಗೋಷ್ಠಿ, ಮಂಗಳೂರಿನ ಕರಾವಳಿ ಸಾಹಿತ್ಯ ವೇದಿಕೆ ಆಯೋಜಿತ ಆಷಾಡ ಮಾಸ-ಮುಂಗಾರ ಕವಿಗೋಷ್ಠಿ, ಸೇರಿಒದಂತೆ ಹಲವೆಡೆ ಕವಿಗೋಷ್ಠಿಯಲ್ಲಿ ದನಿ ನೀಡಿಹಳು. ಜೊತೆಗೆ ತುಂಬೆಯ ನಿರತ ಸಾಹಿತ್ಯ ಸಂಪದ ಆಯೋಜಿತ ಕಾರ್‍ಯಕ್ರಮದಲ್ಲಿ ಹನಿಗವನ ವಾಚಿಸಿರುತ್ತಾಳೆ. ಈಕೆಯ ಕವನ ಕೌಶಲ್ಯವನ್ನು ಮೆಚ್ಚಿ ನಾಡೋಜ ಡಾ| ಕಾಯ್ಯಾರ ಕಿಞ್ಞಣ್ಣ ರೈ ಅವರು ಮನಬಿಚ್ಚಿ ಹರಸಿದ್ದಾರೆ. ಸತತ ಎರಡು ವರ್ಷ ಮಂಗಳೂರು ಆಕಾಶವಾಣಿಯ ಯುವವಾಣಿ ಕಾರ್‍ಯಕ್ರಮದಲ್ಲಿ ಸ್ವ-ರಚಿತ ಕವನ ವಾಚಿಸಿ ಸೈ ಎನಿಸಿಹಳು.
ಸ್ಕೌಟ್- ಗೈಡ್ಸ್ ವಿಭಾಗದಲ್ಲಿ ರಾಷ್ಟ್ರ ಮಟ್ಟ ಗುರುತಿಸಿವಂತಹಾ ಸಾಧನೆ ಮಾಡಿರುವ ಅಕ್ಷತಾಳು ಬಾಲ್ಯದಲ್ಲಿ ಗೈಡ್ಸ್ ವಿಭಾಗದಲ್ಲಿ ಆಗಿನ ರಾಜ್ಯಪಾಲರಾಗಿದ್ದ ಟಿ.ಎನ್ ಚತುರ್ವೇದಿ ಅವರಿಂದ ಪ್ರಶಸ್ತಿ ಮತ್ತು ಪದಕ ಸ್ವೀಕರಿಸಿರುವಳು. ಅಷ್ಟೇ ಅಲ್ಲದೆ ಅನೇಕ ಕ್ಯಾಂಪ್‌ಗಳಲ್ಲೂ ಪಾಲ್ಗೊಂಡಿರುವಳು. ಇತ್ತೀಚೆಗೆ ಗೈಡ್ಸ್ ವಿಭಾಗದಲ್ಲಿ ದೊಡ್ಡ ಬಳ್ಳಾಪುರದಲ್ಲಿ ’ರಾಷ್ಟ್ರಪತಿ
ನಮ್ಮ ಟಿ.ವಿ ವಾಹಿನಿಯ ’ಚಿಗುರು’ ಕಾರ್‍ಯಕ್ರಮದಲ್ಲಿ ಭಾಗವಹಿಸಿದ ಈಕೆ ಈಜು ಸ್ಪರ್ಧೆಯನ್ನೂ ಕರಗತ ಮಾಡಿರುವಳು. ದೇವರನಾಮ ವಾಚನ, ಮುಖವಾಡ ತಯಾರಿ, ಗೊಂಬೆ ತಯಾರಿಕೆ, ಹೂವಿನ ಬೊಕೆಗಳ ತಯಾರಿ, ಗೂಡು ದೀಪ ತಯಾರಿ, ನಾಣ್ಯ ಸಂಗ್ರಹ, ಅಪರೂಪ ಗಿಡ ಮೂಲಿಕೆಗಳ ಮಾಹಿತಿ ಸಂಗ್ರಹ, ಸೇರಿದಂತೆ ಅನೇಕ ವಲಯವನ್ನು ಆಸಕ್ತಿಯ ಕ್ಷೇತ್ರವನ್ನಾಗಿಸಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತುರು ತಾಲೂಕಿನ ಕೊಂಕೋಡಿಯ ಸುಬ್ರಾಯ ಭಟ್ ಮತ್ತು ಗೀತಾ ದಂಪತಿಯರ ಪುತ್ರಿಯಾದ ಅಕ್ಷತಾಳು ಓದಿನಲ್ಲಿ ಎಂದೂ ಪ್ರಥಮ ಬಿಟ್ಟು ಕೊಟ್ಟಿಲ್ಲ.
ವಿಳಾಸ: ಇತೀ ತಮ್ಮ ವಿಶ್ವಾಸಿ;
ನವೀನ್ ಭಟ್,ಇಳಂತಿಲ ನವೀನ್ ಭಟ್,ಇಳಂತಿಲ
ತೃತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ನೆಹರೂ ನಗರ ಪೋಸ್ಟು
ಪುತ್ತೂರು ತಾಲೂಕು. ದಕ್ಷಿಣ ಕನ್ನಡ.
ಮೊಬೈಲ್: ೯೮೪೪೬೩೮೫೪೫
Comments
Post a Comment