ಚಲನಚಿತ್ರ ವಲಯದ 'ಲಿಖಿತ' ಪ್ರತಿಭೆ

ಸ್ಪಷ್ಟ ಗುರಿ ಮತ್ತು ಸತತ ಪರಿಶ್ರಮವಿದ್ದರೆ ಯಾವುದೇ ರಂಗದಲ್ಲೂ ಮಿಂಚಲು ಸಾಧ್ಯವಿದೆ ಎಂಬುದು ಇವರಿಂದ ರೂಪಿತವಾಗಿದೆ. ಕ್ಯಾಮರಾ ಮುಂದೆ ಕಿಂಚಿತ್ತೂ ಭಯವಿಲ್ಲದೆ  ಲವ-ಲವಿಕೆಯಿಂದ ಮಾತನಾಡಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಮಾತಿನ ಲಹರಿ ಈತನದು. ಈಗ ಹೇಟಲಿಕ್ಕೆ ಹೊರಟಿರುವುದು ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್‌ನಲ್ಲಿ ತನ್ನ ಮನೋಜ್ಞ ನಟನಾ ಸಾಮಥ್ಯವನ್ನು ಪ್ರದರ್ಶಿಸಿರುವ ಕುಡ್ಲದ ಪ್ರತಿಭೆ ಲಿಖಿತ್ ಶೆಟ್ಟಿಯ ಬಗ್ಗೆ.
      ಅಂದ ಹಾಗೆ ಈತನ ಕುಟುಂಬದಲ್ಲಿ ಯಾರೂ ಚನನಚಿತ್ರ ರಂಗದಲ್ಲಿಲ್ಲ. ಆದರೆ ಲಿಖಿತ್‌ಗೆ ಭವಿಷ್ಯದಲ್ಲಿ ಸಿನಿಮಾ ನಟನಾಗಬೇಕೆಂಬ ಆಸೆ ಬಾಲ್ಯದಲ್ಲೇ ಇತ್ತು. ಮಣಿಪಾಲ ಸಮೀಪದ ಹಿರಿಯಡ್ಕ ಊರಿನ ಪ್ರಕಾಶ್ ಚಂದ್ರ ಶೆಟ್ಟಿ ಮತ್ತು ಶಾಲಿನಿ ಪಿ. ಶೆಟ್ಟಿ ದಂಪತಿಯರ ಪುತ್ರರಾದ ಲಿಖಿತ್ ಸಧ್ಯ ನೆಲೆಸುತ್ತಿರುವುದು ಸಿಲಿಕಾನ್ ಸಿಟಿಯಲ್ಲಿ.
      ಚಿತ್ರರಂಗದ ಕಡೆ ಒಲವಿದ್ದ ಇವರಿಗೆ ಮೊದಲು ಅವಕಾಶ ನೀಡಿದ್ದು ಉದಯ ವಾಹಿನಿ. ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಾಚಿದ ಲಿಖಿತ್ ಈ ವಾಹಿನಿ ಆರಿಸಲೂ ಕಾರಣವಿದೆಯಂತೆ. ಇಂದು ಸಿನಿಮಾ ರಂಗದಲ್ಲಿ ಛಾಪು ಮೂಡಿಸುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಇದೇ ವಾಹಿನಿಯಿಂದ ಗುರುತಿಸಿಕೊಂಡಿದ್ದು. ಆದ್ದರಿಂದ ಲಿಖಿತ್‌ಗೆ ಗಣೇಶ್ ಸ್ಪೂರ್ತಿ ಅಂತೆ. ಈ ವಾಹಿನಿಯಲ್ಲಿ ಸತತ ಮೂರು ವರ್ಷಗಳ ಕಾಲ ತನ್ನ ಮಾತಿನ ಮೂಲಕ ಮನಗೆಲ್ಲುತ್ತಾ ’ಜೋಗ್ ಪಾಲ್ಸ್’ ಎಂಬ ಕಾರ್‍ಯಕ್ರಮ ನಡೆಸಿಕೊಡುತ್ತಿದ್ದರು. ನಂತರ ಯು-೨ ಬಕ್ರ ಎಂಬ ಷೋದಲ್ಲಿ ಆಂಕರ್ ಆಗಿ ಕಾಣಿಸಿಕೊಳ್ಳುವುದರ ಜೊತೆ ಹಲವಾರು ಸಂಧರ್ಭದಲ್ಲಿ ವಿಶೇಷ ಅತಿಥಿಗಳೊಂದಿಗೆ ಸಂದರ್ಶನ ಮಾಡಿದ್ದಿದೆ.
      ಮುಂದಿನ ದಿನಗಳಲ್ಲಿ ಝೀ ಕನ್ನಡ ವಾಹಿನಿಯ ಒಗ್ಗರಣೆ ಡಬ್ಬ ಎಂಬ ಅಡುಗೆ ಕಾರ್‍ಯಕ್ರಮದಲ್ಲಿ ಕಾಣಿಸಿಕೊಳ್ಳಲಾರಂಭಿಸಿದ ಇವರಿಗೆ ರಾಜಶೇಖರ್ ನಿರ್ದೇಶನದ ’ಪೆರೋಲ್’ ಎಂಬ ಚಲನಚಿತ್ರದಲ್ಲಿ ನಾಯಕ ನಟನಾಗಿ ನಟಿಸುವ ಅವಕಾಶ ಸಿಕ್ಕಿತ್ತು. 

      ಇದೇ ಸಮಯದಲ್ಲಿ ತುಳು ಚಿತ್ರರಂಗವೂ ಕೈ ಬೀಸಿ ಕರೆಯಿತು. ವಿಜಯ ಕುಮಾರ್ ಕೊಡಿಯಾಲ್‌ಬೈಲ್  ಅವರ ೨೦೦ ದಿನಗಳ ಕಾಲ ಪ್ರದರ್ಶನಗೊಂಡ ’ಒರಿಯೊರ್ದೊರಿ ಅಸಲ್’ ಎಂಬ ಚಲನಚಿತ್ರಕ್ಕೆ ರಮ್ಯಾ ಬಾರ್ನ ಅವರ ಜೊತೆ ನಾಯಕನಾಗಿ ನಟಿಸಿದ ಲಿಖಿತ್‌ರ ಮನೋಜ್ಞ ಅಭಿನಯಕ್ಕೆ ಪ್ರೇಕ್ಷಕರು ಮನಮೆಚ್ಚಿ ಹರಸಿದ್ದಾರಂತೆ.

ಇದರ ನಡುವೆ ದಯಾಳ್ ನಿರ್ದೇಶನದ ’ಶ್ರೀ ಹರಿ ಕಥೆ’ ಚಲನಚಿತ್ರದಲ್ಲಿ ಪೂಜಾಗಾಂಧಿ ಅವರ ಜೊತೆ ನೃತ್ಯಕ್ಕೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿತ್ತು. ಇಷ್ಟೇ ಅಲ್ಲದೆ ’ಪಂಚಾಮೃತ’ ಎಂಬ ಚಿತ್ರದಲ್ಲೂ ತನ್ನ ನಟನಾ ಕೌಶಲ್ಯವನ್ನು ಮೆರೆದಿದ್ದಾರೆ. ಸಧ್ಯ ಪ್ರೀತಂ ಗುಬ್ಬಿ ನಿರ್ದೇಶನದ ’ನಮ್ ದುನಿಯಾ ನಮ್ ಸ್ಟೈಲ್’ ಎಂಬ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

      'ಅನುಭವಿ ಕಲಾವಿದರಾದ ರಂಗಾಯಣರಘು, ಸಾಧುಕೋಕಿಲ ಮುಂತಾದವರ ಸಲಹೆ ಪಡೆದ ನನಗೆ ನಟನಾ ವಲಯದ ಅನೇಕ ಸಂಗತಿಗಳ ಬಗ್ಗೆ ಸಲಹೆ ದೊರಕಿತು ಎಂಬುದು’ ಲಿಖಿತ್ ಅವರ ಮನದಾಳದ ಮಾತು.
ತನ್ನ ನಟನಾ ಕೌಶಲ್ಯವನ್ನು ಹೆಚ್ಚಿಸಲು ಬೆಂಗಳೂರಿನ ನವರಸ ಕಲಾ ಕೇಂದ್ರವನ್ನು ಸೇರಿದ ಲಿಖಿತ್‌ಗೆ ಸವಾಲೆನಿಸಿದ್ದು ಕನ್ನಡ ಭಾಷಾ ಜ್ಞಾನ. ಏಕೆಂದರೆ  ಈತ ಹುಟ್ಟಿದ್ದು ಕರ್ನಾಟಕದಲ್ಲಾದರೂ ವಿದ್ಯಾಬ್ಯಾಸ ನಡೆಸಿದ್ದೆಲ್ಲಾ ಅನ್ಯ ರಾಜ್ಯದಲ್ಲಿ. ಈ ಕೇಂದ್ರದ ಆಡಿಷನ್‌ನಲ್ಲೇ ಹತ್ತಕ್ಕೆ ಒಂಭತ್ತು ಅಂಕ ಗಿಟ್ಟಿಸಿ ಗುರುಗಳ ಮನಗೆದ್ದಿದ್ದ.
ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಡಿಪ್ಲಮೋ ಇನ್ ಇಂಟೀರಿಯರ್ ಡಿಸೈನ್ ಕೋರ್ಸ್ ಪೂರ್ಣಗೊಳಿಸಿ ಅಂಬೆಯೆನ್‌ಸಿಯಸ್ ಎಂಬ ಕಂಪನಿಯನಿಯನ್ನು ನಡೆಸುತ್ತಿದ್ದಾರೆ. ಕರಾವಳಿ ಹುಡುಗ ಲಿಖಿತ್ ಶೆಟ್ಟಿಯವರು ಅಸಲ್ ತಂಡದವರ 'ಮದಿಮೆ' ಎಂಬ ತುಳು ಚಲನಚಿತ್ರಕ್ಕೆ ಬಣ್ಣ ಹಚ್ಚುವ ತಯಾರಿಯಲ್ಲಿದ್ದಾರೆ. ಚಲನಚಿತ್ರ ವಲಯದಲ್ಲಿ ಮತ್ತಷ್ಟು ಸಾಧಿಸಬೇಕೆಂಬ ಬಯಕೆ ಹೊಂದಿರುವ ಲಿಖಿತ್ ಶೆಟ್ಟಿ ಅವರ ಮುಂದಿನ ನಡೆಗೆ ಆಲ್ ದಿ ಬೆಸ್ಟ್ ಎನ್ನೋಣ.

                                                                                                   ಇತೀ ತಮ್ಮ ವಿಶ್ವಾಸಿ,
                                                                                               ನವೀನ್ ಭಟ್,ಇಳಂತಿಲ
                                                                                          ವಿವೇಕಾನಂದ ಕಾಲೇಜು ಪುತ್ತೂರು

                                                                                                  Ph: 9844638545

Comments

Popular posts from this blog