ಭ್ರಷ್ಟಾಚಾರ ಮುಕ್ತ 'ಮರ್ಕಂಜ'

    ಅದೊಂದು ದಿನ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದ ಈ ಗ್ರಾಮ ಇಂದು ಭ್ರಷ್ಟಮುಕ್ತವಾಗುವುದರೆಡೆಗೆ ಸಾಗುತ್ತಿದೆ; ಸಾರ್ವಜನಿಕರ ನಿರಂತರ ಪ್ರೋತ್ಸಾಹ, ಮತ್ತು ಒಗ್ಗಟ್ಟಿನ ಬಲದಿಂದ ರಾಜ್ಯಾ    ದ್ಯಂತ ಗುರುತಿಸಲ್ಪಟ್ಟ ಗ್ರಾಮವೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ.

    ಭ್ರಷ್ಟಾಚಾರ ಮುಕ್ತ ಗ್ರಾಮ ಎಂಬ ಹಣೆಪಟ್ಟಿಯಿರುವ ಇಲ್ಲಿ  ಈ ಹಿಂದೆ ಗ್ರಾಮ ಪಂಚಾಯತ್ ವಲಯದಿಂದಲೇ ಭ್ರಷ್ಟಾಚಾರ ತುಂಬಿತ್ತು. ಅಧಿಕಾರಿಗಳ ಕೈ ಗೆ ಬಿಸಿಮುಟ್ಟಿಸದಿದ್ದರೆ ಒಂದು ಪೈಲು ಕೂಡಾ ಮುಂದೆ ಹೋಗುತ್ತಿರಲಿಲ್ಲ; ಇದರಿಂದ ಜನತೆಗೆ ಪಂಚಾಯತ್‌ನ ಅನುದಾನ ದೊರಕುವುದಂತೂ ಕನಸಿನ ಮಾತು.

    ಪಂಚಾಯತ್‌ಗೆ ಸರಕಾರದಿಂದ ಸವಲತ್ತು ಬಂದರೂ ಸುಮಾರು ೯೦ ಪ್ರತಿಶತದಷ್ಟು ಹಣ ಅಧಿಕಾರಿಗಳ ಪಾಲು, ಹೀಗಿದ್ದಾಗ ಗ್ರಾಮದ ಅಭಿವೃದ್ದಿ ಹೇಗೆ ಸಾದ್ಯ. ಇದರಿಂದ ಬೇಸತ್ತ ಹಲವರು ಮಾಹಿತಿ ಹಕ್ಕು ಪಡೆಯುವ ಕೆಲಸಕ್ಕೆ ಅಣಿಯಾದರು. ಇಲ್ಲೂ ಹಿನ್ನಡೆ, ದಿನೇ ಅಲೆದಾಟದ ಸಮಸ್ಯೆ ಬಿಟ್ಟರೆ ಮಾಹಿತಿ ದೊರಕಲೇ ಇಲ್ಲ.

    ಈ ಹಿನ್ನಡೆಯಿಂದಾಗಿಯೂ ಮಾಹಿತಿ ಹಕ್ಕು ಸಮಿತಿಯ ಮೊರೆ ಹೋಗಿ ಪ್ರಮಾಣ ಪತ್ರ ಪಡೆದೇ ಬಿಟ್ಟರು, ಆಗ ಇವರಿಗೆ ಊಹೆಗೂ ನಿಲುಕದ ಭ್ರಷ್ಟಾಚಾರದ ದಾಖಲೆ ಹೊರ ಬಂತು. ಸಿಕ್ಕ ದಾಖಲೆಯ ಸಮಗ್ರ ತನಿಖೆಗೆ ಸೂಕ್ತ ಅಧಿಕಾರಿಗಳ ನೇಮಕ ಮಾಡಿದರೂ ಪ್ರಯೋಜನ ಮಾತ್ರ ಶೂನ್ಯ.

    ತನಿಖೆಯ ಉದ್ದೇಶದಿಂದ ಗ್ರಾಮದ ನಿಯೋಗವು ಅಂದಿನ ಜಿಲ್ಲಾದಿಕಾರಿಯವರನ್ನು ಭೇಟಿಯಾದಾಗ ತನಿಖೆ ನಡೆಸುವ ಮುನ್ಸೂಚನೆ ನೀಡಿದರು. ತಕ್ಷಣ ತನಿಖೆಗೆ ಉನ್ನತ ಮಟ್ಟದ ನಿಯೋಗವೂ ಬಂತು. ಗ್ರಾಮದ ಭ್ರಷ್ಟಾಚಾರಿಗಳ ಎದುರು ಈ ನಿಯೋಗದ ಕೆಲಸ ಹೆಚ್ಚೇನು ನಡೆಯಲಿಲ್ಲ. ಇಂಥಹಾ ಸಮಯದಲ್ಲಿ ಭ್ರಷ್ಟಾಚಾರದ ಅವ್ಯವಸ್ಥೆಯನ್ನು ಮಟ್ಟ ಹಾಕಲು  ಹುಟ್ಟಿದ್ದು ಭ್ರಷ್ಟಾಚಾರ ವಿರೋಧಿ ಜನಜಾಗೃತಿ ಸಮಿತಿ.

         ಏನೇನ್ ಕೆಲಸ:

    ಈ ಸಮಿತಿಯ ಪ್ರಥಮ ಕೆಲಸ ಗ್ರಾಮದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು. ಮೂಲೆಗುಂಪಾಗಿದ್ದ ಪಂಚಾಯತ್‌ನ ಸಮಗ್ರ ತನಿಖೆಗೆ ಪಾಂಚಜನ್ಯ  ಯಾತ್ರೆ ಎಂಬ ಹೆಸರಿನಲ್ಲಿ ಹೋರಾಟ ನಡೆಯಿತು. ಮುಂದೆ ಕಾವೂರಿನಿಂದ ಸುಳ್ಯದ ವರೆಗೆ ೨೭ ಕಿಲೋ ಮೀಟರ್ ಪಾದಯಾತ್ರೆಯನ್ನು ಕೈಗೊಂಡರು; ಈ ಯಾತ್ರೆಯಲ್ಲಿ ಯುವಕರಿಂದ ವೃದ್ದರವರೆಗೆ ಪಾಲ್ಗೊಂಡರು. ಜನರು ಭ್ರಷ್ಟಾಚಾರ ಕೆಲಸದಲ್ಲಿ ಭಾಗಿಯಾಗಬಾರದೆಂಬ ಪೂರ್ಣ ಮಾಹಿತಿಯನ್ನು ಪ್ರತೀ ಮನೆಗೂ ನೀಡುವತ್ತ ಈ ಸಮಿತಿ ನಿರತವಾಗಿದೆ.

    ಹೋರಾಟದ ಫಲವಾಗಿ ತನಿಖೆ ಪೂರ್ಣಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯೂ ಆಯಿತು. ಈ ಸಮೀತಿಯಲ್ಲಿದ್ದ ಶಂಕರನಾರಾಯಣ ಶಾಸ್ತ್ರಿ, ವೀರಪ್ಪ ಗೌಡ, ಮಾದವ ಗೌಡ, ಆನಂದ ಗೌಡ ನಾರ್ಕೋಡ್, ಚೆನ್ನಕೇಶವ ದೋಳ ತಮ್ಮನ್ನು ಪೂರ್ತಿಯಾಗಿ ಈ ಸಮಿತಿಗೆ ತೊಡಗಿಸಿಕೊಂಡವರಲ್ಲಿ ಪ್ರಮುಖರು.

     ಆ ಸಮಯದಲ್ಲಿ ಗ್ರಾಮದಲ್ಲಿ ಜಾರಿಯಲ್ಲಿದ್ದ ಉದ್ಯೋಗ ಖಾತ್ರಿ ಯೋಜನೆಯ ಫಲವನ್ನು ಗ್ರಾಮದಲ್ಲಿನ ಪ್ರತೀ ಮನೆ ಪಡೆಯಲು ಈ ಸಮಿತಿ ಸಹಾಯಕವಾಯಿತು. ಭ್ರಷ್ಟತೆಯ ಸಮಯದಲ್ಲಿ ೪೦೦ ಕುಟುಂಬ ಮಾತ್ರ  ಉದ್ಯೋಗ ಖಾತ್ರಿಯ ಲಾಭ ಪಡೆದಿತ್ತು; ಕಾರಣ ಗ್ರಾಮಸ್ಥರಿಗಿದ್ದ ಮಾಹಿತಿಯ ಕೊರತೆ; ಆದರೆ ಇಂದು ಈ ನೀತಿ ಇದಕ್ಕೆ ಮೂಲ ಸಮಿತಿ ಗ್ರಾಮಸ್ಥರಿಗೆ ನಿಡುತ್ತಿರುವ ತಿಳುವಳಿಕೆ. ಪ್ರಸ್ತುತ ಗ್ರಾಮದಲ್ಲಿರುವ ೯೨೩ ಕುಟುಂಬದ ಪೈಕಿ ಸುಮಾರು ೬೦೦ ಕುಟುಂಬ ಈ ಯೋಜನೆಯ ಪಲಾನುಭವಿಗಳು. ಮುಂದಿನ ದಿನದಲ್ಲಿ ಈ ಯೋಜನೆಯನ್ನು ಪ್ರತೀ ಕುಟುಂಬಕ್ಕೆ ತಲುಪಿಸುವ ಗುರಿ ಈ ಸಮಿತಿಗಿದೆ.


    ಪ್ರತೀ ಕುಟುಂಬದ ೧೪ ದಿನದ ಕೆಲಸವನ್ನು ಸಾರ್ವಜನಿಕ ಕೆಲಸಕ್ಕೆ ಮೀಸಲಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ೫೦ ದಿನಕ್ಕೆ ವಿಸ್ತರಿಸುವ ಯೋಚನೆ ಗ್ರಾಮಸ್ಥರಿಗಿದೆಯಂತೆ.

ಪಲಾನುಭವಿಗಳು ಇಂದು ಸದಾ ಉದ್ಯೋಗದಲ್ಲಿ ನಿರತರು. ಚರಂಡಿ ವೈವಸ್ಥೆ, ರಸ್ಥೆ ಕಾಮಗಾರಿ ಕೆಲಸದಲ್ಲಿ ಭಾಗಿಯಾಗುವ ಇವರಿಗೆ ನಿರುದ್ಯೋಗದ ಸಮಸ್ಯೆ ಕಾಡಿಲ್ಲವಂತೆ.

    ಗ್ರಾಮದಲ್ಲಿ ಉದ್ಯೋಗ ಮಿತ್ರ ಎಂಬ ಗುಂಪನ್ನು ರಚನೆ ಮಾಡಿ ಸರ್ಕಾರದ ಪ್ರತೀ ಯೋಜನೆಯ ಪೂರ್ಣ ಮಾಹಿತಿಯನ್ನು ಮನೆ ಮನೆಗೆ ತಲುಪಿಸುವಲ್ಲಿ ಇದು ಸಹಕಾರಿಯಾಗಿದೆ.

    ಮರ್ಕಂಜದ ಗ್ರಾಮ ಪಂಚಾಯತ್, ಭ್ರಷ್ಟಾಚಾರ ವಿರೋಧಿ ಜನಜಾಗೃತಿ ಸಮಿತಿಯ ಜೊತೆ ಸೇರಿ ಹಸಿರು ಗ್ರಾಮ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಪ್ರತೀ ಗ್ರಾಮದ ಸುಚಿತ್ವವನ್ನು ಕಾಪಾಡುವುದು, ರಸ್ಥೆಗಳ ಇಕ್ಕೆಲಗಳನ್ನು ಹಸಿರು ಮುಕ್ತವಾಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.

    ಪ್ರತಿಯೊಬ್ಬ ಜನಸಾಮನ್ಯನಿಗೂ ಸರ್ಕಾರ ಹೊರ ತರುವಂತಹಾ ಯೋಜನೆಯ ಸಂಪೂರ್ಣ ಮಾಹಿತಿ ಸಿಗುವಂತಾಗಬೇಕು; ಈ ನಿಟ್ಟಿನಲ್ಲಿ ಭ್ರಷ್ಟಾಚಾರ ಜನಜಾಗೃತಿ ಸಮಿತಿಯಂತೆ ಪ್ರತೀ ಗ್ರಾಮದಲ್ಲೂ ರಚನೆಗೊಂಡರೆ ಗ್ರಾಮ ಮಟ್ಟದಲ್ಲಿ ಭ್ರಷ್ಟಾಚಾರವನ್ನು ತಡೆಯಬಹುದು ಎಂಬುದು ಗ್ರಾi ಪಂಚಾಯತ್ ಉಪಾಧ್ಯಕ್ಷ ಆನಂದ ಗೌಡರ ಅಂಬೋಣ.

    ಭ್ರಷ್ಟಾಚಾರದ ತಡೆಗೆ ಒಂದೆಡೆ ಅಣ್ಣಾ ಹಜಾರೆ ನಿರಂತರ ಶ್ರಮಿಸುತ್ತಿದ್ದರೂ ಇವರ ಆಸೆ ಪೂರ್ಣವಾಗಿ ಈಡೇರಲಿಲ್ಲಿ; ಗ್ರಾಮ ಮಟ್ಟದಿಂದಲೇ ಭ್ರಷ್ಟಾಚಾರ ತೊಡಗಿಸುವಲ್ಲಿ ಜನತೆ ಮುಂದಾದರೆ ಮುಂದೊಂದು ದಿನ ನಮ್ಮ ದೇಶ ಭ್ರಷ್ಟಮುಕ್ತ ವಾಗುವುದರಲ್ಲಿ ಸಂಶಯವಿಲ್ಲ.

  ವಿಳಾಸ:                                                        ಇತೀ ತಮ್ಮ ವಿಶ್ವಾಸಿ;

ದ್ವಿತೀಯ ಪತ್ರಿಕೋದ್ಯಮ ವಿಭಾಗ                        ನವೀನ್ ಭಟ್,ಇಳಂತಿಲ

ವಿವೇಕಾನಂದ ಕಾಲೇಜು ಪುತ್ತೂರು                    ಮೊಬೈಲ್: ೯೮೪೪೬೩೮೫೪೫

     ನೆಹರೂ ನಗರ ಪೋಸ್ಟು

     ಪುತ್ತೂರು ತಾಲೂಕು

        ದಕ್ಷಿಣ ಕನ್ನಡ

                                             

                                                                                         

 

Comments

Popular posts from this blog