ಶೋಭಿಸುತ್ತಿರುವ ಸುಶೋಭಿತಾ
      ಕ್ರಿಯಾಶೀಲತೆ ಮತ್ತು ಸೃಜನಶೀಲತೆಯು ಜೊತೆಗಿದ್ದರೆ ಯಶಸ್ಸಿನೆಡೆಗೆ ತಾನಾಗೆ ಮುಂದುವರೆಯಬಹುದು ಎಂಬುದಕ್ಕೆ ಈಕೆ ಸ್ಪಷ್ಟ ಸಾಕ್ಷಿ. ಭರತನಾಟ್ಯ, ಹಾಡುಗಾರಿಕೆ, ಕ್ರೀಡಾ ವಲಯ ಸೇರಿದಂತೆ ಇತರೇ ಕಲಾ ಚಟುವಟಿಕೆಗಳಲ್ಲಿ ಸಕ್ರೀಯಳಾಗಿರುವ ಈಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರ ಹುಡುಗಿ ಸುಶೋಭಿತಾ.
      ಈಕೆ ಸಂಗೀತದತ್ತ ಚಿತ್ತ ಹರಿಸಿದ್ದು ಏಳನೇ ವಯಸ್ಸಲ್ಲಿ. ಶಾಸ್ತ್ರೀಯ ಸಂಗೀತದ ಪ್ರಮುಖ ತಳಹದಿ ಹಾಕಿದವವರು ದಿವಗಂತ ವಿಧ್ವಾನ್ ಶ್ರೀ ಕಾಂಚನ ನಾರಾಯಣ ಭಟ್. ಮುಂದಿನ ಪಯಣ ಮುಂದುವರೆದದ್ದು ವಿಧೂಷೀ ಶ್ರೀಮತಿ ವೀಣಾ ರಾಘವೇಂದ್ರರವರಲ್ಲಿ. ಸುಗಮ ಸಂಗೀತವೂ ಈಕೆಯ ಮೆಚ್ಚಿನ ಕ್ಷೇತ್ರ. ಮೊದಲು ಕಿರಣ್ ಕುಮಾರ್ ರವರಲ್ಲಿ ಪಳಗಿದ ಸುಶೋಭಿತಾ ಮುಂದೆ ಸ್ವಂತ ಕಾಲಲ್ಲಿ ನಿಲ್ಲಲು ಪ್ರಾರಂಬಿಸಿದಳು.
     ಕರ್ನಾಟಕ ಶಾಸ್ತ್ರೀಯ ಸಂಗೀತದ ಜ್ಯೂನಿಯರ್ ಗ್ರೇಡ್‌ನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಸದ್ಯ ಸೀನಿಯರ್ ಗ್ರೇಡ್‌ನ ಪರಿಕ್ಷಾ ಹಂತದಲ್ಲಿರುವಳು. ಪಿ.ಯು.ಸಿ ಯಲ್ಲಿರುವಾಗ  ಯುನಿವರ್ಸಿಟಿ ವಲಯದವರು

ಆಯೋಜಿಸಿದ ರಾಜ್ಯಮಟ್ಟದ ಗಾನ ಸ್ಪರ್ದೆಯಲ್ಲಿ ಮಂಗಳೂರಿನಲ್ಲಿ ನಡೆದ ಮೊದಲ ಹಂತದಲ್ಲಿ ಪ್ರಥಮ ಸ್ಥಾನ, ಮಂಡ್ಯದಲ್ಲಿ ನಡೆದ ದ್ವಿತೀಯ ಹಂತದಲ್ಲಿ ಪ್ರಥಮ ಸ್ಥಾನ, ಮತ್ತು ಬೆಂಗಳೂರಿನಲ್ಲಿ ನಡೆದ ಅಂತಿಮ ಹಂತದಲ್ಲಿ ಮೂರನೇ ಸ್ಥಾನ ಸಂಪಾದಿಸಿದಳು.
      ರಾಜ್ಯಾದ್ಯಂತ ಸುಮಾರು ನೂರಕ್ಕೂ ಮಿಕ್ಕಿ ಗಾನಸುದೆ ಬೀರಿದ ಈಕೆ ಚಿದಾನಂದ ಕಾಮತ್ ನೇತೃತ್ವದ ಬಾರಿಸು ಕನ್ನಡ ಡಿಂಡಿಮವ ಕಾರ್‍ಯಕ್ರಮದ ಸಕ್ರೀಯ ಅಭ್ಯರ್ಥಿ.
      ನಾಟ್ಯಕಲೆಯು ಸುಶೋಭಿತಾ ಶೋಭಿಸುತ್ತಿರುವ ಮತ್ತೊಂದು ಕ್ಷೇತ್ರ. ಬಾಲ್ಯದಲ್ಲಿರುವಾಗ ಮದುವೆ ಸಮಾರಂಭಗಳಲ್ಲಿ ಹೆಜ್ಜೆ ಹಾಕುತ್ತಿದ್ದ ಈಕೆಯ ಪರಿಯನ್ನು ಗಮನಿಸಿದ ಪೋಷಕರು ಭರನಾಟ್ಯ ಕಲೆಗೆ ಸೇರಿಸುವ ಇರಾದೆ ಹೊಂದಿದರು.
ಏಳನೇ ವಯಸ್ಸಲ್ಲಿ ಬಾಲಕೃಷ್ಣ ಮಂಜೇಶ್ವರ ಅವರಲ್ಲಿ ಕಾಲಿಗೆ ಗೆಜ್ಜೆ ಕಟ್ಟಲು ಪ್ರಾರಂಭಿಸಿದ ಈಕೆ ಸೀನಿಯರ್ ಮತ್ತು ಜ್ಯೂನಿಯರ್ ಗ್ರೇಡ್‌ಗಳ ಪರೀಕ್ಷೆಗಳಲ್ಲಿನ ಡಿಸ್ಟಿಂಕ್ಷನ್ ಪ್ರತಿಭೆ. ಸದ್ಯ ವಿದ್ವತ್ ಮಜಲಿನ ಕಲಿಕಾ ಹಂತದಲ್ಲಿರುವಳು.
      ಮೈಸೂರಿನ ದಸರಾ ವೇದಿಕೆ, ಹಾಸನದ ಎಮ್.ಆರ್.ಪಿ.ಎಲ್ ಸಂಸ್ಥೆ ಆಯೋಜಿಸಿದ ಸಮಾರಂಭ, ಸೇರಿದಂತೆ ಮಂಡ್ಯ, ಮಂಗಳೂರು, ಪುತ್ತೂರು, ಮಡಿಕೇರಿ, ಉಡುಪಿ ಸೇರಿದಂತೆ ರಾಜ್ಯಾದ್ಯಂತ ಈಗಾಗಲೇ ಸುಮಾರು ೧೫೦ಕ್ಕೂ ಮಿಕ್ಕಿ ಪ್ರದರ್ಶನ ಈಕೆಯಿಂದ ಮೂಡಿ ಬಂದಿದೆ.
      ರಾಷ್ಟ್ರ ಮಟ್ಟದ ಗವರ್‍ನಮೆಂಟ್ ಬೋರ್‍ಡ್ ಆಯೋಜಿಸಿದ ಸ್ಕಾಲರ್‌ಷಿಪ್‌ಗಾಗಿರುವಂತಹಾ ೮ ಮಜಲಿನ ಹಿಂದಿ ಪರೀಕ್ಷೆಯಲ್ಲಿ ೪

ಹಂತವನ್ನು ಈಗಾಗಾಲೇ ಡಿಸ್ಟಿಂಕ್ಷನ್ ಲೆವೆಲ್‌ನಲ್ಲಿ ಉತ್ತೀರ್ಣಳಾದ ಪ್ರತಿಭೆ ಈಕೆ. ಇಷ್ಟಲ್ಲದೇ ರಾಷ್ಟ್ರ ಮಟ್ಟದ ವಿಜ್ಞಾನ ಪರೀಕ್ಷೆ ಮತ್ತು ಅಂತರಾಷ್ಟ್ರೀಯ ಮಟ್ಟದ ಗಣಿತ ಪರೀಕ್ಷೆಯಲ್ಲಿ ರ್‍ಯಾಂಕ್ ಸಂಪಾದಿಸಿರುವಳು.
      ಈಕೆಯ ಸಾಧನೆಯನ್ನು ಗಮನಿಸಿ ಸುವರ್ಣ ಕನ್ನಡ ವಾಹಿನಿಯಯಲ್ಲಿ ಪ್ರಸಾರವಾಗುತ್ತಿದ್ದ ಹೃದಯ ಹೃದಯ ಎಂಬ ನೇರಪ್ರಸಾರದಲ್ಲಿ ಪಾಲ್ಗೊಂಡಳಲ್ಲದೆ, ಪತ್ತೂರಿನ ಪಿ.ಸಿ.ಎನ್ ವಾಹಿನಿಯಲ್ಲೂ ಗುರುತಿಸಿ ಸೈ ಎನಿಸಿದಳು. ಸುಶೋಭಿತಾಳಿಗೆ ಕ್ರಿಡಾ ವಲಯವೂ ಒಲವಿನ ಕ್ಷೇತ್ರ.

ವಾಲೀಬಾಲ್ ಕ್ರೀಡೆಯಲ್ಲಿ ರಾಜ್ಯಮಟ್ಟದ ಮತ್ತು ಅಥ್ಲೆಟಿಕ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಗುರುತಿಸಿದಳು.
      ರಂಗೋಲಿ ಸ್ಪರ್ದೆಯಲ್ಲಿ ರಾಜ್ಯ ಮಟಮಟ್ಟಕ್ಕೆ ಹೋಗಿಬಂದಿರುವ ಈಕೆಗೆ ಕವನ ಬರೆಯುವುದೆಂದರೆ ಹವ್ಯಾಸ. ದೇಶಪ್ರೇಮ, ಬಾವಗೀತೆ, ಮಾತೃವಾತ್ಸಲ್ಯ ಕ್ಕೆ ಸೇರಿದಂತಹಾ ಕವನಗಳು ಈಗಾಗಲೇ ೫೦ ಕ್ಕೂ ಮಿಕ್ಕಿ ಇಕೆಯಲ್ಲಿದೆ. ಅಲ್ಲದೆ ೨೫ ಕವನಗಳ ಪುಸ್ತಕ ನಾರಾಯಣ್ ರೈ ಕುಕ್ಕುವಳ್ಳಿ ಅವರ ಮಾರ್ಗದರ್ಶನದಲ್ಲಿ ಸದ್ಯದಲ್ಲೇ ಹೊರಬರಲಿದೆ.

ಪುತ್ತೂರಿನ ಸುದರ್ಶನ್ ಮತ್ತು ಶೋಭಾ ಸುದರ್ಶನ್ ದಂಪತಿಯ ಪುತ್ರಿಯಾದ ಸುಶೋಭಿತಾ ಸದ್ಯ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಕಂಪ್ಯೂಟರ್ ಸೈನ್ಸ್ ಅಭ್ಯಸಿಸುತ್ತಿರುವಳು ಜೊತೆ ಓದಿನಲ್ಲಿ ಸದಾ ಪ್ರಥಮ.

                                                        ಇತೀ ತಮ್ಮ ವಿಶ್ವಾಸಿ,
                                                      ನವೀನ್ ಭಟ್,ಇಳಂತಿಲ
                                                    ವಿವೇಕಾನಂದ ಕಾಲೇಜು ಪುತ್ತೂರು ವಿಳಾಸ-
ನವೀನ್ ಭಟ್.ಎಚ್
ತೃತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ನೆಹರೂ ನಗರ ಪೋಸ್ಟ್
ಪುತ್ತೂರು ತಾಲೂಕು, ದಕ್ಷಿಣ ಕನ್ನಡ
ಮೊಬೈಲ್ ನಂ-೯೮೪೪೬೩೮೫೪೫

Comments

Popular posts from this blog