ರಂಝಾನ್ ಆಚರಣಾ ವಿಶೇಷ

ಮಾನವ ಕುಲಕ್ಕೆ ಅಥವಾ ಯಾವುದೇ ಜೀವಿಗಳಿಗೆ ಹಸಿವು ಎಂಬುದು ಬಹಳ

ಮರ್ಮ ಪ್ರಧಾನವಾದದ್ದು. ಹಸಿದ ಒಬ್ಬ ವ್ಯಕ್ತಿಗೆ ಇನ್ನೊಬ್ಬರ ಕಷ್ಟ ನೋವಿನಬಗ್ಗೆ ಬಹು ಬೇಗ ಅರಿವು ಮೂಡುತ್ತದೆ. ಮಾನವನು ಹಸಿದವನಾಗಿದ್ದರೆ ಬಹುಬೇಗ ಜಗತ್ತಿನ ಕಷ್ಟ-ಕಾರ್ಪಣ್ಯಗಳ ಬಗ್ಗೆ ಅರಿವಾಗುತ್ತದೆ. ಇದಕ್ಕೆ ಉತ್ತಮಉದಾಹರಣೆಯಾಗಿದೆ ರಂಝಾನ್ ಮಾಸದಲ್ಲಿ ಮುಸ್ಲಿಂ ಭಾಂಧವರು ಆಚರಿಸುವ ಉಪವಾಸ ಕ್ರಮ.
ಪ್ರವಾದಿ ಮಹಮ್ಮದ್ ಮುಸ್ತಫಾ(ಸ.ಅ) ಸ್ವಲ್ಲಂ ೧೪೦೦ ವರ್ಷಗಳ ಹಿಂದೆ ತನ್ನ ಉಮ್ಮತ್ (ಅನುಯಾಯಿಗಳ) ಈ ಕ್ರಮವನ್ನು ಕಲಿಸಿಕೊಟ್ಟರು. ಅರಬೀ ಮಸದ ಪ್ರಕಾರ ಶಅಬಾನ್ ಮಾಸದ ಚಂದ್ರಾಸ್ತಮಾನಗೊಂಡು ರಂಝಾನ್ ಮಾಸದ ಚಂದ್ರೋದಯವಾದಾಗ ಉಪವಾಸದ ತಿಂಗಳು ಆರಂಭವಾಗುತ್ತದೆ. ಎಲ್ಲದಕ್ಕೂ ಕಾಲಾವಕಾಶಗಳ ಮಿತಿಗಳಿರುವಂತೆ ಈ ಉಪವಾಸ ವೃತಕ್ಕೂ ನಿಭಂಧನೆಗಳಿವೆ.
ಮುಸ್ಲಿಂ ಭಾಂಧವರು ಈ ಕ್ರಮವನ್ನು ಕಡ್ಡಾಯವಾಗಿ ಆಚರಿಸುತ್ತಾರೆ. ರಂಝಾನ್ ತಿಂಗಳ ಪ್ರತೀ ದಿನದಲ್ಲೂ ಸೂರ್ಯೋದಯಕ್ಕೆ ಮುಂಚಿತವಾಗಿ ಆಹಾರ ಪಾನೀಯಗಳನ್ನು ಉಪಯೋಗಿಸುತ್ತಾರೆ. ಸೂರ್ಯೋದಯದಿಂದ ನಂತರ

ಸೂರ್ಯಾಸ್ತಮಾನದ ವರೆಗೆ ಸಂಪೂರ್ಣ ಅನ್ಯಹಾರಗಳನ್ನು ತ್ಯಜಿಸುತ್ತಾರೆ.
ಕೇವಲ ಅನ್ನಹಾರ ಪಾನೀಯಗಳನ್ನು ತ್ಯಜಿಸುವುದರಿಂದ ಅವನು ಉಪವಾಸಿಯಾಗಲಾರ ಕಾರಣ ಆರೋಗ್ಯ ನಿಯಂತ್ರಣದ ಜತೆಗೆ ಅವನು ಆತ್ಮಶುದ್ದಿಯುಳ್ಳವನೂ ಆಗಬೇಕಾದರೆ ಕೆಲವು ನಿಬಂಧನೆಗಳನ್ನು ಅನುಸರಿಸಬೇಕು.
ಮಾನವರು ಒಬ್ಬ ಆತ್ಮಶುದ್ಧಿಯುಳ್ಳವನಾಗಬೇಕಾದರೆ ಕೆಲವು ಅನ್ಯಆಹಾರದ ಜೊತೆ ವೃತದಾರಿಯೂ ಕಾಮ, ಕ್ರೋದ, ಮೋಹ, ಮದ, ಮತ್ಸರಗಳನ್ನು ನಿಯಂತ್ರಿಸಬೇಕು. ಧಾನ ಧರ್ಮಗಳನ್ನು ಮಾಡಿ ಆತ್ಮಶುದ್ದಿಗೊಳಿಸಬೇಕು. ಇನ್ನೊಬ್ಬರ ಕಷ್ಟಗಳನ್ನರಿತು ಅವನಿಗೆ ಧಾನಮಾಡಬೇಕು. ಎಂದು ಮುತ್ತು ಮಹಮ್ಮದ್ ಮುಸ್ತಫಾ (ಸ.ಅ) ರವರು ಕಲಿಸುತ್ತಾರೆ.
ರಂಝಾನ್ ಆಚರಣೆ ಮೂವತ್ತು ದಿನಗಳ ಕಾಲ ವೃತ್ತಾಚರಿಸಿ ವ್ಯಕ್ತಿಯು ಶವ್ವಾಲ್ ಚಂದ್ರದರ್ಶನವಾದ ದಿನ ’ಪೆರುನಾಳ್’ ಆಚರಿಸುತ್ತಾರೆ. ತನ್ನ ನೆರೆಹೊರೆಯವರನ್ನು, ಆರ್ಥಿಕವಾಗಿ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಅವರ ಕಷ್ಟದಲ್ಲಿ ಭಾಗಿಯಾಗಿ ಸಮಾಜದಲ್ಲಿ ಸಮಾನತೆಯನ್ನು ಮೆರೆಯುವುದು ಈ ರಂಝಾನ್ ವೃತ್ತಾಚರಣೆಯ ಮತ್ತು ಪೆರುನಾಳ್ ಆಚರಣೆಯ ಸಂದೇಶವಾಗಿರುತ್ತದೆ. (ಮಾಹಿತಿ:ಬಿ.ಎ ಹಮೀದ್.ಕರಾವಳಿ)
                                                                            ಇತೀ ತಮ್ಮ ವಿಶ್ವಾಸಿ;
                                                                            ನವೀನ್ ಭಟ್,ಇಳಂತಿಲ


     

Comments

Popular posts from this blog