'ನೇಹಾ'ಳ ಕಲಾ ಪ್ರೇಮ

          ಹಾಡುವಿಕೆ ಇರಲಿ ಕುಣಿಯುವಿಕೆ ಇರಲಿ ಈಕೆಗೆ ಪ್ರಿಯ. ಈಕೆಯ ನವಿರಾದ ಕುಂಚದಿಂದ ಹೊರಹೊಮ್ಮಿದ ಚಿತ್ರವನ್ನು ನೋಡುವುದೇ ಅಂದ. ಕಲಿಯುವಿಕೆಯಲ್ಲಂತೂ ಬ್ರಿಲಿಯೆಂಟ್ ಸ್ಟೂಡೆಂಟ್ ಜೊತೆ ಹಲವು ಹವ್ಯಾಸಗಳ ಸ್ನೇಹಿಯಾಗಿರುವ ಈಕೆ ಕರಾವಳಿ ಪ್ರತಿಭೆ ನಿಶಾ ಬಿ.ರಾವ್.

ಮಂಗಳೂರಿನ ಉರ್ವಾದ ಡಾ.ರಮಾನಂದ ರಾವ್ ಮತ್ತು ಲಲಿತಾ ಕಲ್ಕೂರ್ ಅವರ ಮುದ್ದಿನ ಪುತ್ರಿಯಾದ ನೇಹಾಳ ಮನೆಯೇ ಸಂಗೀತ ಕುಟುಂಬ. ತಾಯಿ ಸಂಗೀತದಲ್ಲಿ ಪಳಗಿದ್ದುದರಿಂದ ಈ ಕ್ಷೇತ್ರ ಈಕೆಯತ್ತ ಬಾಲ್ಯದ ಹರೆಯದಲ್ಲೇ ಸೆಳೆಯಿತು.

ತನ್ನ ಆರನೇ ವಯಸ್ಸಲ್ಲಿ ಮಧುರ ಕಂಠದಿಂದ ಹಾಡಲು ಪ್ರಾರಂಭಿದ ನೇಹಾ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತದಲ್ಲಿ ಪರಿಪೂರ್ಣಳಾದಳು. ಈಗಾಗಲೇ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ಮುಗಿಸಿದ್ದು ಹಲವೆಡೆ ಸಂಗೀತದ ಕಂಠವನ್ನು ಹರಿಸಿರುವಳು.

ಒಂದನೇ ತರಗತಿಯಿಂದಲೇ ಭರನಾಟ್ಯ ಕಲಿಕೆ. ಗುರುಗಳಾದ ವಿದುಷಿ ಸುಮಂಗಲಾ ರತ್ನಾಕರ್ ಗರಡಿಯಲ್ಲಿ ಪಳಗುತ್ತಿರುವ ಈ ಪ್ರತಿಭೆ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪೂರ್ಣಗೊಳಿಸಿ ಸದ್ಯ ವಿದ್ವತ್ ಹಂತದಲ್ಲಿದ್ದಾಳೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಂಗವಾಗಿ ನಡೆದ ’ನಮನ್ ೧೮೫೭’ ಸಮಾರಂಭದ ಸೇರಿದಂತೆ ರಾಷ್ಟ್ರಾದ್ಯಂತ ಸುಮಾರು ಇನ್ನೂರೈವತ್ತಕ್ಕೂ ಮಿಕ್ಕಿ ಪ್ರದರ್ಶನದಲ್ಲಿ ಭಾಗವಹಿಸಿರುವಳು.

ಚಿತ್ರಕಲೆಯತ್ತಲೂ  ಈಕೆಗೆ ಎಲ್ಲಿಲ್ಲದ ಒಲವು. ತನ್ನ ಆರನೇ ವಯಸ್ಸಲ್ಲೇ ಕೈಯಲ್ಲಿ ಬ್ರಶ್ ಹಿಡಿಯಲು ಪ್ರಾರಂಭಿಸಿದ ನೇಹಾಳ ಮೊದಲ ಗುರು ದಿ/ಪಿ. ಪುರುಶೋತ್ತಮ ಕಾರಂತ. ಪ್ರಸ್ತುತ ದಯಾನಂದ ಬಿಜೈ ಅವರಲ್ಲಿ ಕಲಿಕೆ ಮುಂದುವರಿಸುತ್ತಿರುವಳು.

ಸಾಧನೆಯ ಮೆಟ್ಟಿಲು:

ಟೊಯೋಟ ಸಂಸ್ಥೆಯವರು ನಡೆಸಿದ ನನ್ನ ಕನಸಿನ ಕಾರು ರಾಷ್ಟ್ರೀಯ ಚಿತ್ತಕಲಾ ಸ್ಪರ್ದೆಯಲ್ಲಿ ತೃತೀಯ ಬಹುಮಾನದೊಡನೆ ೧೦,೦೦೦ ನಗದನ್ನು ತನ್ನದಾಗಿಸಿದಳು. ಶಂಕರ್ ಅಂತರಾಷ್ಟ್ರೀಯ ಚಿತ್ರಕಲಾ ಸ್ಪರ್ದೆಯಲ್ಲಿ ರಜತ ಪದಕ ಈಕೆಗೊಲಿದಿದೆ. ೨೦೦೭ ರಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ಅವರು ಆಯೋಜಿಸಿದ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಬಾಚಿದಳಲ್ಲದೆ, ಈಕೆಯ ಚಿತ್ರವನ್ನು ಭಾರತ ಸ್ಕೌಟ್ ಮತ್ತು ಗೈಡ್ಸ್‌ನ ಗ್ರೀಟಿಂಗ್ ಕಾರ್ಡ್‌ನ ಮುಖಪುಟದಲ್ಲಿ ಬಳಸಲಾಗಿದೆ.

ಈ ಪೋರಿಯ ಕುಂಚ ಪ್ರದರ್ಶನ ಇಷ್ಟಕ್ಕೇ ನಿಂತಿಲ್ಲ. ೨೦೧೧ ರಲ್ಲಿ ರೇಡಿಯೋ ಮಿರ್ಚಿ ಸಂಸ್ಥೆ ಮಂಗಳೂರಿನ ಕರ್ದಿ ಪಾರ್ಕ್‌ನಲ್ಲಿ ಆಯೋಜಿಸಿದ ಫಾಬ್ರಿಕ್ ಚಿತ್ರಕಲಾ ಸ್ಪರ್ದೆಯಲ್ಲ್ಲಿ ೧*೧ ಮೀಟರ್ ಬಟ್ಟೆಯ ಮೇಲೆ ’ಮೈ ಇಂಡಿಯಾ ಮೈ ಪ್ರೀಡಂ’ ಎಂಬ ಕಾನ್ಸೆಪ್ಟ್‌ನಡಿ ಮೂಡಿಬಂದಿರುವ ಚಿತ್ರಕ್ಕೆ ಪ್ರಥಮ ಬಹುಮಾನ ದಕ್ಕಿದೆ.

ಧಾರವಾಡ ಕಲಾಮಂಡಲ ಸಂಸ್ಥೆಯವರು ನಡೆಸಿದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ರಜತ ಪದಕ, ಬೂ ಪ್ರ್ರ ಚುಯಿಂಗಮ್ ಸಂಸ್ಥೆಯವರು ನಡೆಸಿದ ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ  ಬಹುಮಾನ, ರಾಮಕೃಷ್ಣ ವಿಜಯಂ, ಚೆನ್ನೈ ನಡೆಸಿದ ರಾಷ್ಟ್ರೀಯ  ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಬಹುಮಾನ, ೨೦೧೦ ರಲ್ಲಿ ಧರ್ಮಸ್ಥಳದಲ್ಲಿ ನಡೆದ ಅಂಚೆ ಕುಂಚ’ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ  ಬಹುಮಾನವನ್ನು ಪಡೆದ ನೇಹಾ ವಾಟರ್ ಕಲರ್, ಮಿನಿಯೇಚರ್, ಡೆಕೊರೇಟಿಂಗ್, ಲ್ಯಾಂಡ್ ಸ್ಕೇಪ್ ಸೇರಿದಂತೆ ಚಾರ್‍ಕೋಲ್ ಪೈಂಟಿಂಗ್‌ನಲ್ಲೂ ಪರಿಣಿತಳು.

ಈಕೆಯ ಬುಮುಖಿತ್ವಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡಲಾಗುವ ಜಿಲ್ಲಾ ಮಟ್ಟದಲ್ಲಿ  ಹಾಗೂ ರಾಜ್ಯ ಮಟ್ಟದಲ್ಲಿ ಅಸಾಧಾರಣ ಪ್ರತಿಭೆ ಪುರಸ್ಕಾರವನ್ನು ರಾಜ್ಯಪಾಲ ಹಂಸರಾಜ ಭಾರದ್ವಜ್‌ರಿಂದ ದಕ್ಕಿದೆ. ಅಲ್ಲದೆ ರಾಷ್ಟ್ಟ್ರಮಟ್ಟದ ಪ್ರಶಸ್ತಿಗೆಂದು ಶಿಫಾರಸು ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ೧೫ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ  ಸನ್ಮಾನ ಪಡೆದಳಲ್ಲದೆ ೨೦೧೦ ರಲ್ಲಿ ಜಿಲ್ಲಾಡಳಿತ ವತಿಯಿಂದ  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಳು.

ಕೇಂದ್ರ ಸರಕಾರದ ೨೦೧೦ ರ ಸಿ.ಸಿ.ಆರ್.ಟಿ ಸ್ಕಾಲರ್‌ಷಿಪ್‌ಗೆ ರಾಜ್ಯದ ಮೂವರ ಪೈಕಿ ಆಯ್ಕೆಯಾದ ಈಕೆ ಮಂಗಳೂರು ಆಕಾಶವಾಣಿಯಲ್ಲಿನ ಅರಳು

ಪ್ರತಿಭೆ ಕಾರ್ಯಕ್ರಮ, ನಮ್ಮ  ಟಿ.ವಿ ವಾಹಿನಿಯ ಚಿಗುರು ಕಾರ್‍ಯಕ್ರಮ ಪ್ರದರ್ಶನ ನೀಡಿದ್ದಾಳೆ.

ಇಷ್ಟೇ ಅಲ್ಲದೆ ರಂಗವಲ್ಲಿ, ಭಗವದ್ಗೀತೆ,ಕಂಠಪಾಠ, ರಸಪ್ರಶ್ನೆ, ಭಾಷಣ,



ಪ್ರಬಂಧ, ಕಸೂತಿ, ಹೂ ಜೋಡಣೆ, ಕ್ರಾಫ್ಟ್, ಕ್ರೀಡಾಕ್ಷೇತ್ರ ನೇಹಾಳ ಹವ್ಯಾಸ.


ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾದಲ್ಲಿ ಕಲಿಯುತ್ತಿರುವ ನೇಹಾ ಓದಿನಲ್ಲಿ ಎಲ್ಲರಿಗಿಂತ ಮುಂಚೂಣಿ ಎಂಬುದಕ್ಕೆ ೨೦೧೨ರ ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ ರಾಜ್ಯದಲ್ಲಿ ೫ನೇ ಸ್ಥಾನ(೬೧೮/೬೨೫ ಅಂಕ)ಪಡೆದಿರುವುದೇ ನಿದರ್ಶನ.


                                                                   ಇತೀ ತಮ್ಮ ವಿಶ್ವಾಸಿ,

                                                              ನವೀನ್ ಭಟ್,ಇಳಂತಿಲ

                                                        ವಿವೇಕಾನಂದ ಕಾಲೇಜು ಪುತ್ತೂರು

ವಿಳಾಸ-

ನವೀನ್ ಭಟ್,ಇಳಂತಿಲ

ತೃತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು ಪುತ್ತೂರು

ನೆಹರೂ ನಗರ ಪೋಸ್ಟ್

ಪುತ್ತೂರು ತಾಲೂಕು, ದಕ್ಷಿಣ ಕನ್ನಡ

ಮೊಬೈಲ್ ನಂ-೯೮೪೪೬೩೮೫೪೫

Comments

Popular posts from this blog