ರಾಗ 'ಅನು'ರಾಗ

ಮೊಗ ತುಂಬ ನಗು. ಮಧುರ ಕಂಠ. ಗಾಯನದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ಯ. ಇದರೊಡನೆ ಸದ್ದಿಲ್ಲದೆ ಅಭಿಮಾನಿ ವರ್ಗ ಸಂಪಾದಿಸುತ್ತಿರುವ ಈ ಕರಾವಳಿ ಮೂಲದ ಗಾಯಕಿ ಅನುರಾಧ ಭಟ್.
ಹೌದು, ದಕಿಣಕನ್ನಡ ಜಿಲ್ಲೆಯ ಮಂಗಳೂರಿನ ಬೊಂದೆಲ್‌ನ ನಿವಾಸಿ ಶ್ರೀಕೃಷ್ಣ ಭಟ್ ಮತ್ತು ಗಾಯತ್ರೀ ದಂಪತಿಯರ ಪುತ್ರಿಯಾದ ಅನುರಾಧ ಭಟ್‌ಗೆ ಸಂಗೀತವೇ ಸರ್ವಸ್ವ. ಈ ಲೋಕದಲ್ಲಿ ಈಕೆಗೆ ಎಷ್ಟು ಒಲವಿತ್ತೆಂದರೆ ಪದವಿ ಮುಗಿಸಿದ ಬಳಿಕ ಪ್ರತಿಷ್ಟಿತ ಕಂಪನಿಯಲ್ಲಿ ಈಕೆಗೆ ಉದ್ಯೋಗ ದೊರಕಿತು. ಆದರೆ ಸಂಗೀತ ಕ್ಷೇತ್ರದ ಸೆಳೆತ ಹೆಚ್ಚಿದ್ದುದರಿಂದ ಸಿಕ್ಕ ಅವಕಾಶಕ್ಕೆ ಬ್ರೇಕ್ ಹಾಕಿ ತನ್ನನ್ನು ಸಂಪೂರ್ಣವಾಗಿ ಸಂಗೀತ ಲೋಕದಲ್ಲಿ ತೊಡಗಿಸಿಕೊಂಡಳು.
ಚಿಕ್ಕಂದಿನಲ್ಲಿ ಈಕೆಗೆ ಮೊದಲು ಕಣ್ಣು ಬಿದ್ದದ್ದು ಶಾಸ್ತ್ರೀಯ ಕಲೆ ಭರತನಾಟ್ಯ. ಬಾಲ್ಯದಲ್ಲಿ ’ಸಾಗರ ಸಂಗಮ’ ಎಂಬ ಚಲನಚಿತ್ರವನ್ನು ವೀಕ್ಷಿಸುತ್ತಿದ್ದ ಈಕೆ ಆ ಪಾರ್ಥದ ತರೇನ ಮುದ್ರಾ ಬಂಗಿಯನ್ನು ಪ್ರದರ್ಶಿಸುತ್ತಿದ್ದಳಂತೆ. ಇವಳ ಆಸಕ್ತಿಯನ್ನು ಮನವರಿತ ಪೋಷಕರು ಗುರುಗಳಾದ ಉಮಾ ಕಲ್ಲೂರಾಯ ಅವರಲ್ಲಿಗೆ ಭರತನಾಟ್ಯ ತರಬೇತಿಗೆ ಕಳುಹಿಸಿದರು. ಮುಂದೆ ಕಮಲಾ ಭಟ್ ಅವರ ಗರಡಿಯಲ್ಲೂ ಪಳಗಿ ತನ್ನ ವಿದ್ವತ್ ಮಜಲನ್ನು ಪೂರ್ಣಗೊಳಿಸಿದಳು. ಜೊತೆಗೆ ನೂರಕ್ಕೂ ಮಿಕ್ಕಿ ನೃತ್ಯ ಸ್ಪರ್ಧೆಗಳಿಗೂ ಹೆಜ್ಜೆ ಹಾಕಿರುವಳು.
ಗಾಯನ ವಲಯದತ್ತ ಈಕೆಗೆ ಆಸಕ್ತಿ ಬಂದದ್ದು ಐದನೇ ವಯಸ್ಸಲ್ಲಿ. ಶ್ರೀಮತೀ ರಂಗನಾಯಕಿ ವರದರಾಜ್ ಮತ್ತು ಶ್ರೀನಾಥ್ ಮರಾಠೆ ಅವರಲ್ಲಿ ತನ್ನ ಕಲಿಕೆಯನ್ನು ಪೂರ್ಣಗೊಳಿಸಿದ ಅನು ೨೦೦೩ ರಲ್ಲಿ ಬೆಂಗಳೂರು ಬಸ್ಸು ಹತ್ತಿದಳು. ಈಕೆಯ ಜೀವನದ ಮತ್ತೊಂದು ಅಧ್ಯಾಯ ತೆರೆದದ್ದು ಇಲ್ಲಿಂದಲೇ.
ಆಲ್ ಇಂಡಿಯಾ ರೇಡಿಯೋದ ’ಬಿ’ ಗ್ರೇಡ್ ಕಲಾವಿದೆಯಾಗಿ ಹೊರಹೊಮ್ಮಿದ ಅನು ಮೊದಲನೆಯದಾಗಿ ಪೂರ್ಣ ದನಿ ಹಾಕಿದ್ದು ’ಮುರಳಿ ಮಾಧವ ರಾಘವ’  ಚಿತ್ರದ ಹಾಡಿಗೆ. ನಂತರ ಮೋಹಿನಿ, ಜೋಷ್, ಪರಮೇಷ ಪಾನ್‌ವಾಲ, ಇನಿಯಾ, ವೀರಮದಕರಿ, ಜಂಗ್ಲಿ, ಸವಾರಿ, ಕೃಷ್ಣನ್ ಮ್ಯಾರೆಜ್ ಸ್ಟೊರಿ, ಪ್ರೇಮಿಸಂ, ವಿಷ್ಣುವರ್ಧನ, ಬ್ರೇಕಿಂಗ್ ನ್ಯೂಸ್, ಸಾಗರಿ, ಜಾನು ಸೇರಿದಂತೆ ಸುಮಾರು ೩೫೦ ಮಿಕ್ಕಿ ಚನನಚಿತ್ರಕ್ಕೆ ಹಿನ್ನಲೆದನಿ ನೀಡುವ ಅವಕಾಶ ಸಿಕ್ಕಿತು..
ಸಂಗೀತ ಲೋಕದ ಪ್ರಮುಖರಾದ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ, ಗುರುಕಿರಣ್, ಇಳೆಯರಾಜ, ಕಿರವಾಣಿ, ಹಂಸಲೇಖ ಮುಂತಾದ ದಿಗ್ಗಜರ ಸಲಹೆಯಡಿ ಬೆಳೆದ ಈಕೆಗೆ ಬೆಹರಿನ್, ಕುವೈತ್, ಸಿಂಗಾಪುರ್ ಲಂಡನ್, ಭಾರತ ಸೇರಿದಂತೆ ಸುಮಾರು ೧೦೦೦ ಕ್ಕೂ ಮಿಕ್ಕಿ ಪ್ರದರ್ಶನವಿತ್ತ ಅನುಭವವಿದೆ.
ಭಕ್ತಿಗೀತೆ, ಜನಪದ ಗೀತೆ, ಭಾವಗೀತೆ, ಪಾಶ್ಚಾತ್ಯ ಗೀತೆಗಳನ್ನೂ ಸಲೀಸಾಗಿ ಹಾಡುವ ಈಕೆ ರಾಜಕುಮಾರಿ, ಚಿತ್ರಲೇಖ, ಸಾವಿತ್ರೀ, ಮಡದಿ, ಸಾಗುತ ದೂರಾ ದೂರಾ, ಆವರಣ ಸೇರಿದಂತೆ ಹತ್ತಲವು ದಾರವಾಹಿಗಳಲ್ಲೂ ಹಾಡಿನ ಲಹರಿ ಹರಿಸಿರುವಳು.
ಈಕೆಯ ಹಿನ್ನಲೆ ದನಿಯಿರುವ ’ಚಿನ್ನು’ ಎಂಬ ಆನಿಮೇಟೆಡ್ ಚಿತ್ರ ಈಗಾಗಲೇ ಬಿಡುಗಡೆಯಾಗಿದೆ. ಈ ಟಿ.ವಿ ಕನ್ನಡದ ಎಂದೂ ಮರೆಯದ ಹಾಡು, ಜನಶ್ರೀ ಟಿ.ವಿಯ ನಕ್ಷತ್ರ ಮಂಥನ, ಕಸ್ತೂರಿ ಟಿ.ವಿಯ ಸಪ್ತಸ್ವರ-೩, ದೂರದರ್ಶನದ ಬೆಳಗು ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿಯೂ ಮಿಂಚಿರುವಳು. ಅಲ್ಲದೆ ಈಕೆಯ ನಿರೂಪಣೆಯಲ್ಲಿ ಉದಯ ಟಿ.ವಿಯಲ್ಲಿ ಪ್ರಸಾರವಾಗುವ ’ಅಕ್ಷರ ಮಾಲೆ’ ಎಂಬ ರಿಯಾಲಿಟೀ ಷೋ ಈಗಾಗಲೇ ಜನಮೆಚ್ಚುಗೆ ಪಡೆದಿದೆ.
ಕಡಲತಡಿಯಲ್ಲಿ ಹುಟ್ಟಿ ತನ್ನ ಕೀರ್ತಿ ಪತಾಕೆಯನ್ನು ದೇಶದ ಉದ್ದಗಲಕ್ಕೂ ಪಸರಿಸುತ್ತಿರುವ ಕರಾವಳಿ ಹುಡುಗಿ ಅನುರಾಧಾ ಭಟ್ ಅವರ ಮುಂದಿನ ನಡೆಗೆ ಶಹಬ್ಬಾಸ್ ಎನ್ನೋಣ.
                                                            ಇತೀ ತಮ್ಮ ವಿಶ್ವಾಸಿ,
                                                         ನವೀನ್ ಭಟ್,ಇಳಂತಿಲ
                                                     ತೃತೀಯ ಪತ್ರಿಕೋದ್ಯಮ ವಿಭಾಗ
                                                  ವಿವೇಕಾನಂದ ಕಾಲೇಜು ಪುತ್ತೂರು 

                                                 ಮೊಬೈಲ್ ನಂ-೯೮೪೪೬೩೮೫೪೫



Comments

Popular posts from this blog