ವಿಕಸಿಸುತ್ತಿರುವ 'ವಿಕಸನ'

ಕೈ ಕಟ್ಟಿ ಕೂತರೆ ಏನನ್ನೂ ಸಾಧಿಸಲು ಅಸಾದ್ಯ ಅದರ ಬದಲು ಸಿಕ್ಕ ಅವಕಾಶವನ್ನು ಚೊಕ್ಕವಾಗಿ ಬಳಸಿದರೆ ಇಟ್ಟ ಕನಸಿನೆಡೆಗೆ ದಿಟ್ಟ ಹಜ್ಜೆ ಹಾಕಬಹುದು. ಬಹು ದಿನದಿಂದ ಇದ್ದ ಕನಸು ಸಾಕ್ಷಾತಗಕಾರಗೊಂಡ ಖುಷಿಯಲ್ಲಿದ್ದಾರೆ ಪುತ್ತೂರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು.
ಈ ಮೊದಲೇ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ’ವಿಕಸನ’ ಎಂಬ ಮಾಸಪತ್ರಿಕೆ ತರುತ್ತಿದ್ದು ಪತ್ರಿಕೆಯನ್ನು ಗಮನಿಸಿದ ಪ್ರಜಾವಾಣಿ ಪತ್ರಿಕೆಯ ಅಂಕಣಕಾರ ಡಾ.ಗುರುರಾಜ ಕರ್ಜಗಿ ’ನಾನೂ ನಿಮ್ಮ ಪತ್ರಿಕೆಗೆ ಬರೆಯುತ್ತೇನೆ’ ಎಂದಿರುವುದು ಈ ವಿದ್ಯಾರ್ಥಿಗಳ ಶ್ರಮಕ್ಕೆ ಸಂದ ಗೌರವ.
ಅಂದ ಹಾಗೆ ಈ ವಿಭಾಗ ಇಂದು ಸುದ್ದಿಯಲ್ಲಿ ಮಾಡುತ್ತಿರುವುದು ವಿದ್ಯಾರ್ಥಿಗಲೇ ನಿರ್ಮಿಸಿದ ’ವಿಕಸನ ನ್ಯೂಸ್’ ಎಂಬ ಎಲೆಕ್ಟ್ರಾನಿಕ್ ಮೀಡಿಯಾದ ಮುಖೇನ. ಇದು ಕಾಲೇಜಿನಲ್ಲಿ ನಡೆದ ಎಲ್ಲಾ ಸಂಗತಿಗಳನ್ನು ಭಿತ್ತರಿಸುವ ದೂರದರ್ಶನವಾಗಿದ್ದು ಆಧುನೀಕತೆಗೆ ಒಗ್ಗಿಕೊಳ್ಳುವ ರೀತಿಯ ಬೆಳವಣಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕೊಂದು ಭದ್ರ ಬುನಾದಿ ಹಾಕುವಂತಿದೆ.
ಯಾವುದೇ ಒಂದು ಕೆಲಸ ಪರಿಪೂರ್ಣವಾಗಬೇಕಾದರೆ ಆಯ್ದುಕೊಂಡ ಕೆಲಸದ ಬಗ್ಗೆ ಪ್ರೀತಿ ಇರಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು

ಸದಾ ನಿಸ್ಸೀಮರು. ಏಕಂತೀರಾ, ವಿಕಸನ ನ್ಯೂಸ್ ಪ್ರಾರಂಬಿಸುವ ಹಂತದಲ್ಲಿ ವಿದ್ಯಾರ್ಥಿಗಳ ಕೈಯಲ್ಲೊಂದು ಹ್ಯಾಂಡಿ ಕ್ಯಾಮರಾ ಆಗಲೀ ಕನಿಷ್ಟ ಪಕ್ಷ ಸ್ಕ್ರಿಪ್ಟ್ ಕೂಡಾ ಇರಲಿಲ್ಲ. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ರಾಕೇಶ್ ಕುಮಾರ್ ಕಮ್ಮಜೆ ಮತ್ತು ಸ್ವಾತಿ ಭಟ್ ಅವರ ನಿರಂತರ ಪ್ರೋತ್ಸಾಹ ಸಾಧನೆಯ ಬೀಜವನ್ನು ಮೊಳಕೆಯೊಡೆಯುವಂತೆ ಮಾಡಿತು.
ನ್ಯೂಸ್ ಚಾನೆಲ್ ಆರಂಭಿಸುವುದೆಂದರೆ ಹೇಳಿದಷ್ಟು ಸುಲಭದ ಮಾತಲ್ಲ. ಅದಕ್ಕೆ ಸುಸಜ್ಜಿತ ಸ್ಡುಡಿಯೋ ಅತ್ಯವಶ್ಯ. ಈ ಹಂತದಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಿದ್ದು ಕಾಲೇಜಿನ ಬೈಂದೂರು ಪ್ರಭಾಕರ ರಾವ್ ಸಭಾಭವನ. ಸಂಜೆ ತರಗತಿಗಳೆಲ್ಲಾ ಬಿಟ್ಟ ಮೇಲೆ ವಾರ್ತಾ ವಾಚನದ ರೆಕಾರ್ಡಿಂಗ್ ಸ್ಟಾರ್ಟ್. ಸ್ಟುಡಿಯೋದ ಜೋಡನೆ ಹಿಡಿದು ವಿಡಿಯೋ ಎಡಿಟಿಂಗ್, ಧ್ವನಿ ಸಂಕಲನ, ಶೂಟಿಂಗ್, ಸ್ಕ್ರಿಪ್ಟ್, ಬರವಣಿಗೆ ಎಲ್ಲವೂ ವಿದ್ಯಾರ್ಥಿಗಳ ಶ್ರಮದಿಂದಲೇ ಮೂಡಿಬರುತ್ತಿರುವುದು ವಿಶೇಷ.
ಕಾಲೇಜಿನಲ್ಲಿದ್ದ ಕಂಪ್ಯೂಟರ್ ಲ್ಯಾಬನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡು ಇದ್ದ ಸೌಲಬ್ಯಗಳನ್ನು ಚೊಕ್ಕವಾಗಿ ಬಳಸಿ ಕಾರ್‍ಯನಿರ್ವಹಿಸುತ್ತಿರುವುದು ಗಮನಾರ್ಹ. ಪ್ರತೀ ಹಂತದಲ್ಲಿ ವಿದ್ಯಾರ್ಥಿಗಳ ಕನಸಿಗೆ ಬೆನ್ನೆಲುಬಾಗಿ ನಿಂತವರು ಪ್ರಾಂಶುಪಾಲ ಡಾ. ಎಚ್ ಮಾಧವ್ ಭಟ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಎಚ್.ಜಿ , ಮತ್ತು ಆಂಗ್ಲ ವಿಭಾಗದ ಉಪನ್ಯಾಸಕ ಗಣೇಶ್ ಪ್ರಸಾದ್.
ಒಂದು ಚಾನೆಲ್ ಎಂದ ಮೇಲೆ ವರದಿಗಾರರು ಬೇಕೇ ಬೇಕು. ಈ ನಿಟ್ಟಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಒಂದೊಂದು ಟೀಂನ್ನು ಕಟ್ಟಲಾಗಿದ್ದು

ಕಾಲೇಜಿನಲ್ಲಾಗುವ ಸಭೆ ಸಮಾರಂಭಗಳ ಸಂಪೂರ್ಣ ವಿವರವನ್ನು ಕಲೆ ಹಾಕುವುದು ಇವರ ಕೆಲಸ. ಆಯ್ಕೆಯಾದ ಪ್ರತಿಯೊಬ್ಬರಿಗೂ ಸೂಕ್ತ ತರಬೇತಿಯನ್ನೂ ನೀಡಲಾಗುತ್ತದೆ.
ವಾರ್ತಾ ವಾಹಿನಿ ಎಂದಾಕ್ಷಣ ಮೈನ್ ಎಟ್ರಾಕ್ಷನ್ ನಿರೂಪಣೆ. ಈ ಹಂತದಲ್ಲೂ ಸೈ ಎನಿಸಿರುವ ವಿಭಾಗದ ವಿದ್ಯಾರ್ಥಿಗಳು ಮೊದಲ ಹಂತದಲ್ಲೇ ಸುಮಾರು ೨೫ ಕ್ಕೂಮಿಕ್ಕಿ ಹೆಸರು ನೊಂದಾಯಿಸಿದ್ದು ಪ್ರತೀ ತಿಂಗಳಿಗೊಬ್ಬರಂತೆ ನಿರೂಪಣೆಗೆ ಅವಕಾಶ.

 ಪತ್ರಿಕೋದ್ಯಮ ಎಂದರೆ ಕೇವಲ ಓದಲ್ಲ. ಅದರ ಬದಲು ಪ್ರಾಯೋಗಿಕ ಜ್ಞಾನವಿರಬೇಕು ಎಂದರಿತು ಹೊಸ ಹೊಸ ಯೋಜನೆಯ ಯೋಚನೆಯಲ್ಲಿ ತೊಡಗಿಸಿರುವ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಮುಂದಿನ ನಡೆಗೆ ಆಲ್ ದಿ ಬೆಸ್ಟ್ ಎನ್ನೋಣ.

                                                 ಇತೀ ತಮ್ಮ ವಿಶ್ವಾಸಿ,
                                            ನವೀನ್ ಭಟ್,ಇಳಂತಿಲ
                                        ತೃತೀಯ ಪತ್ರಿಕೋದ್ಯಮ ವಿಭಾಗ
                                         ವಿವೇಕಾನಂದ ಕಾಲೇಜು ಪುತ್ತೂರು





Comments

Popular posts from this blog