'ವರ್ಷಾ' ಕ್ರೀಡಾರಂಗದ ಹರ್ಷ
 

          ಬಾಲ್ಯದಿಂದಲೇ ಈಕೆಗೆ ವಾಲಿಬಾಲ್ ಕ್ರೀಡೆ ಎಂದರೆ ಪಂಚಪ್ರಾಣ. ಶಾಲಾ ಮಟ್ಟದ ವಾಲಿಬಾಲ್ ಟೀಂ ನ ನಾಯಕಿಯೂ ಹೌದು. ಜೊತೆ ಉತ್ತಮ ಸ್ಮಾಷರ್ ಮತ್ತು ಬೆಸ್ಟ್ ಅಟ್ಯಾಕರ್. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ರಾಷ್ಟ್ರಮಟ್ಟವನ್ನು ಪ್ರತಿನಿದಿಸುತ್ತಿದ್ದಳು. ಆದರೆ ಏಳನೇ ತರಗತಿಯಲ್ಲಿ ಈ ಅವಕಾಶ ಈಕೆಯ ಕೈ ತಪ್ಪಿತು. ಇಷ್ಟಕ್ಕೇ ಸುಮ್ಮನಾಗದೆ ತನ್ನ ಪಥವನ್ನು ಬದಲಿಸಿ ಅಥ್ಲೆಟಿಕ್ ರಂಗದಲ್ಲಿ ರಾಷ್ಟ್ರಮಟ್ಟದ ಪ್ರತಿಭೆಯಾಗಿ ಹೊರಹೊಮ್ಮಿದ ಈಕೆಯ ಹೆಸರು ವರ್ಷಾ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉರ್ವಾದ ನಿವಾಸಿಯದ ಈಕೆ ರೊಹಿತ್ ಪೂಜಾರಿ ಮತ್ತು ವಾಣಿ ದಂಪತಿಯರ ಮಗಳು. ತಾಯಿ ಸ್ವತಃ ಅಥ್ಲೆಟಿಕ್ ರಂಗದಲ್ಲಿ ಪಳಗಿರುವುದರಿಂದ ಬಾಲ್ಯದತ್ತವಾಗೇ ಈಕೆಗೆ ಕ್ರೀಡಾಸಕ್ತಿ ಮೈಗೂಡಿತು.
ಬ್ರೇಕ್ ಕೊಟ್ಟ ಸಲಹೆ:
ಚಿಕ್ಕಂದಿನಲ್ಲೇ ಈಕೆಯ ಆಸಕ್ತಿಯ ಕ್ಷೇತ್ರವಾಗಿದ್ದ ವಾಲಿಬಾಲ್ ಕ್ರೀಡೆಗೆ ತಂದೆ ಮತ್ತು ತಾಯಿ ಸಾಥ್ ನೀಡಿದರು. ಮುಂದೊಂದು ದಿನ ಈಕೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಬೇಕೆಂಬ ಇರಾದೆಯೂ ಕೋಚ್ ಲೋರ್ನ್ ಜೋಮ್ಸ್‌ರವರಿಗೆ ಇತ್ತು. ಒಂಬತ್ತನೇ ವಯಸ್ಸಿನಿಂದಲೇ ದಿನಂಪ್ರತಿ ತರಬೇತಿ

ಪಡೆದು ಉತ್ತಮ ಎಗ್ರೆಸಿವ್ ಮತ್ತು ಕಾಂಫಿಡೆನ್ಸ್ ಪ್ಲೇಯರ್ ಆಗಿ ಮಾರ್ಪಟ್ಟಳು.
ಮುಂದಿನ ಎರಡು ವರ್ಷಗಳಲ್ಲಿ ಶಾಲಾ ಮಟ್ಟ ಆಯೋಜಿಸಿದ್ದ ಅನೇಕ ವಾಲಿಬಾಲ್ ಟೂರ್ನಿಮೆಂಟ್‌ಗಳಲ್ಲಿ ಗಮನಾರ್ಹ ಪ್ರದರ್ಶನ ಬೀರಿದಳು. ಏಳನೇ ತರಗತಿ ಕಲಿಯುತ್ತಿದ್ದಾಗ ವಾಲಿಬಾಲ್ ಟೀಂನ ಡಿವಿಜನ್ ಲೆವೆಲ್‌ಗೆ ಆಯ್ಕೆ ನಡೆಯಿತು. ಆದರೆ ವರ್ಷಾಳು ಈ ಕ್ರೀಡೆಯಿಂದ  ಅವಕಾಶ ವಂಚಿತಳಾದಳು.
ಮನನೊಂದಿದ್ದ ಈಕೆಯನ್ನು ಅಂದಿನ ಸೈಂಟ್ ಆನ್ಸ್ ಸ್ಕೂಲಿನ ದೈಹಿಕ ಶಿಕ್ಷಕಿ ಲೋರ್ನ್ ಜೋಮ್ಸ್ ಅಥ್ಲೆಟಿಕ್ ರಂಗದತ್ತ ಮುಖ ಮಾಡಲು ಸಲಹೆ ನೀಡಿದರು.


ಇದಕ್ಕೆ ಓ.ಕೆ ಎಂದ ವರ್ಷಾ ಇಂದು ಅಥ್ಲೆಟಿಕ್ ರಂಗದಲ್ಲಿ ’ಜ್ಯೂನಿಯರ್ ಪಿ.ಟಿ ಉಷಾ’ ಎಂದೇ ಪರಿಚಿತ.
’ಜೋಮ್ಸ್ ಏನಂತಾರೆ’:
ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ  ಸಿಂಥೆಟಿಕ್ ಕಾರ್‍ಯ ಇನ್ನೂ ತ್ವರಿತಗತಿಯಲ್ಲಿ ನಡೆಯಬೇಕಿದೆ, ಈ ನಿಟ್ಟಿನಲ್ಲಿ ಇತ್ತ ಕಡೆ ಸರ್ಕಾರ ಹೆಚ್ಚಿನ ಚಿತ್ತವಹಸಿದರೆ ಅದೆಷ್ಟೋ ಗ್ರಾಮೀಣ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಮಿಂಚಲು ಸಹಕಾರಿಯಾಗುತ್ತದೆ.
ಈಡೇರಿದ ಸೆಕೆಂಡ್ ಇನ್ನಿಂಗ್ಸ್ ಕನಸು:
ಯಾವುದೇ ವಲಯದಲ್ಲಿ ಉತ್ತಮ ಆಟಗಾರರಾಗಿ ರೂಪುಗೊಳ್ಳಲು ಕಠಿಣ ಅಭ್ಯಾಸ ಅಗತ್ಯ, ಇದಕ್ಕೆ ಪೂರಕವೆಂಬಂತೆ ಪ್ರತೀ ದಿನ ೫ ಗಂಟೆ ಕಾಲ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ತರಬೇತುದಾರ ದಿನೇಶ್ ಕುಂದರ್ ರವರಲ್ಲಿ ಅಭ್ಯಾಸಕ್ಕೆ ಅಣಿಯಾಗುವಳು.
ಅಥ್ಲೆಟಿಕ್ ವಲಯದಲ್ಲಿ ಈಕೆಯ ಸಾಧನೆ ಗುರುತಿಸುವಂತದ್ದು. ತಾಲೂಕು ಮಟ್ಟದಿಂದ ಹಿಡಿದು ರಾಜ್ಯ ಮಟ್ಟದ ವರೆಗೂ ಮಿಂಚಿದ ಈ ಮಂಗಳೂರ ಪೋರಿ ಕರ್ನಾಟಕದಲ್ಲಿ ನಡೆದ ಪ್ರತೀ ಇವೆಂಟ್‌ಗಳಲ್ಲಿ ಚಿನ್ನದ ಪದಕ ಸಂಪಾದಿಸಿದವಳು.  ೨೦೧೦ ರಲ್ಲಿ ಬೆಂಗಳೂರಿನಲ್ಲಿ ನಡೆದ ೨೨ ನೇ ಸೌತ್ ಝೋನ್ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ನಲ್ಲಿ ೧೦೦ ಮೀಟರ್ ಓಟವನ್ನು ಕೇವಲ ೧೨.೬ ಸೆಕೆಂಡ್ ನಲ್ಲೇ ಕ್ರಮಿಸಿ ಹೊಸ ಕೂಟ ದಾಖಲೆಯನ್ನು ನಿರ್ಮಿಸಿದಳು!!. ಅದೇ ರೀತಿ ೨೨ ನೇ ಕರ್ನಾಟಕ ರಾಜ್ಯ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್ ಷಿಪ್ ನಲ್ಲಿ ೧೨.೭ ಸೆಕೆಂಡ್‌ನಲ್ಲಿ ಕ್ರಮಿಸಿ ಮೊದಲ ಸ್ಥಾನದೊಡನೆ ಬೆಸ್ಟ್ ಅಥ್ಲೆಟಿಕ್ ಟೋಪಿಯನ್ನು ಎತ್ತಿ ಹಿಡಿದಳು.
೨೦೧೧ ರಲ್ಲಿ ರಾಂಚಿಯಲ್ಲಿ ನಡೆದ ೨೭ ನೇ ಜ್ಯೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ  ಕರ್ನಾಟಕವನ್ನು  ಪ್ರತಿನಿಧಿಸಿ ೨೦೦ ಮೀ, ೪೦೦ ಮೀ ಮತ್ತು ೪*೧೦೦ ಮೀಟರ್ ರಿಲೇಯಲ್ಲಿ ಕೇರಳ ತಂಡದ ಆಟಗಾರರನ್ನು ಮಣಿಸಿ ಚಿನ್ನದ ಪದಕವನ್ನು ತೆಕ್ಕೆಗೆ ಹಾಕಿಕೊಂಡಳು. ೨೦೧೧ ರಲ್ಲಿ ಹೈದರಾಬಾದ್ ನಲ್ಲಿ ನಡೆದ ೨೩ ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್ ನಲ್ಲಿ ೨೦೦ ಮೀ ಓಟದಲ್ಲಿ ಪ್ರಥಮ, ೪೦೦ ರಲ್ಲಿ ತೃತೀಯ, ಮಿಡ್ಲ್ ರಿಲೇಯಲ್ಲಿ ದ್ವಿತೀಯ ಸ್ಥಾನ ಸಂಪಾದಿಸಿದಳು. ಅದೇ ರೀತಿ ೨೦೧೦ ರಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ೧೦೦ ಮೀ, ೨೦೦ ಮೀ, ೪೦೦ ಮೀ, ಮತ್ತು ೪*೧೦೦ ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಳು.
ಇಷ್ಟಕ್ಕೇ ಸುಮ್ಮನೆ ಕೂರದೆ ರಾಜ್ಯಮಟ್ಟದಲ್ಲೂ ತನ್ನನ್ನು ಗುರುತಿಸಿಕೊಂಡ ವರ್ಷಾ, ದಾವಣಗೆರೆಯಲ್ಲಿ ನಡೆದ ಕರ್ನಾಟಕ ರಾಜ್ಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ೧೦೦, ೨೦೦, ೪೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ಮೂಡಬಿದರೆಯಲ್ಲಿ ನಡೆದ ಚಾಂಪಿಯನ್‌ಷಿಪ್‌ನ ೧೦೦, ೨೦೦, ೪೦೦ ಮೀಟರ್ ಸ್ಪರ್ದೆಯಲ್ಲಿ ಪ್ರಥಮ ಸ್ಥಾನದ ಜೊತೆ ಚಾಂಪಿಯನ್‌ಷಿಪ್ ಟ್ರೋಪಿ, ಉಡುಪಿಯಲ್ಲಿ ನಡೆದ ೨೮ನೇ ರಾಜ್ಯ ಅಥ್ಲೆಟಿಕ್ ಕ್ರೀಡಾಕೂಟದ ೨೦೦ ಮೀ, ೪೦೦ ಮೀ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಕೀರ್ತಿ ಈಕೆಗಿದೆ.
೨೦೦೯ ರಲ್ಲಿ ಮಂಗಳೂರು ಕಾರ್ಪೋರೇಷನ್ ಬ್ಯಾಂಕ್ ಆಯೋಜಿದ್ದ ಕ್ರಾಸ್ ಕಂಟ್ರಿಯಲ್ಲಿ ೭ ನೇ ರ್‍ಯಾಂಕ್‌ಗೆ ತೃಪ್ತಿ ಪಟ್ಟಳು.
೨೦೧೦ ಮತ್ತು ೨೦೧೧ ರಲ್ಲಿ ಮಂಗಳೂರಿನಲ್ಲಿ ನಡೆದ ನಗರ ವಲಯದ ಕ್ರೀಡಾ ಕೂಟದಲ್ಲಿ ಪ್ರಥಮ ಸ್ಥಾನ ಪ್ರಾಪ್ತವಾಯಿತು.
ಕ್ರೀಡಾರಂಗದಲ್ಲಿ ಉತ್ತಮ ಸಾದನೆ ಮಾಡಿದ ಈಕೆಗೆ ನೃತ್ಯ, ಸಂಗೀತ, ಸ್ವಿಂಮಿಂಗ್ ಹವ್ಯಾಸವಂತೆ. ವರ್ಷಾಳ ಸಾಧನೆಯನ್ನು ಗುರುತಿಸಿ ೨೦೧೦ರ

ಗಣರಾಜ್ಯೋತ್ಸವದ ವೇಳೆ ಜಿಲ್ಲಾಡಳಿತ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಗೌರವ, ರೋಟರಿ ಕ್ಲಬ್ ಪ್ರಶಸ್ತಿ, ಲಯನ್ಸ್ ಕ್ಲಬ್ ಪ್ರಶಸ್ತಿ ಸೇರೊದಂತೆ ಅನೇಕ ಪುರಸ್ಕಾರ ಈಕೆಯತ್ತ ಒಲಿದಿದೆ.
ಸದ್ಯ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ

ವಾಣಿಜ್ಯ ವಿಭಾಗವನ್ನು  ಅಭ್ಯಸಿಸುತ್ತಿರುವ ವರ್ಷಾಳಿಗೆ ಮುಂದಿನ ವರ್ಷಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸಬೇಕೆಂಬ ಇರಾದೆ ಇದೆಯಂತೆ.

ವಿಳಾಸ:                                                        ಇತೀ ತಮ್ಮ ವಿಶ್ವಾಸಿ;
ನವೀನ್ ಭಟ್.ಎಚ್                                             ನವೀನ್ ಭಟ್,ಇಳಂತಿಲ
ತೃತೀಯ ಪತ್ರಿಕೋದ್ಯಮ ವಿಭಾಗ                     ತೃತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು              ವಿವೇಕಾನಂದ ಕಾಲೇಜು ಪುತ್ತೂರು                                               
ನೆಹರೂ ನಗರ ಪೋಸ್ಟು
ಪುತ್ತೂರು ತಾಲೂಕು. ದಕ್ಷಿಣ ಕನ್ನಡ.
ಮೊಬೈಲ್: ೯೮೪೪೬೩೮೫೪೫                                                                          
                                                                                                                                               
                                                               

Comments

Popular posts from this blog