ಗ್ರಾಮೀಣ ಪ್ರದೇಶದ ಅಪರೂಪದ ವ್ಯಕ್ತಿ

         ವೃತ್ತಿಯಲ್ಲಿ ಅಧ್ಯಾಪಕರಾಗಿದ್ದುಕೊಂಡು ಕೃಷಿಯೊಡನೆಯ ಇವರ ನಂಟು ಮೆಚ್ಚಲೇ ಬೇಕು; ಜೊತೆ ಅಳಿದುಳಿದ ಸಮಯವನ್ನು ಪೋಲುಮಾಡದೆ ಹಲವು ಹವ್ಯಾಸದತ್ತ ತೊಡಗಿಸಿರುವ ಅಪರೂಪದ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆ ಗ್ರಾಮದ ವೆಂಕಟರಮಣ ಭಟ್.
ಇವರು ಪರಿಸರ ರಕ್ಷಣೆಗೆ ನೀಡುವ ಉತ್ತೇಜನವನ್ನು ಶ್ಲಾಘಿಸಲೇಬೇಕು. ಮರಗಳನ್ನು ಕಡಿದು ನಾಶಪಡಿಸುವ ಇಂದಿನ ಜಮಾನದಲ್ಲಿ ತನ್ನ ಸುತ್ತಲಿನ ಪರಿಸರವನ್ನು ಹಸಿರು ಮುಕ್ತವಾಗಿರಿಸಿರುವುದು ಪರಿಸರದೊಡನೆಯ ಇವರ ನಂಟನ್ನು ಎತ್ತಿ ತೋರಿಸುತ್ತದೆ.
         ಸುಮಾರು ನಲವತೈದು ವರ್ಷದ ಹಿಂದೆ ಮರುಭೂಮಿಯಂತಿದ್ದ ಭೂಮಿಯನ್ನು ತೋಟವಾಗಿ ಮಾರ್ಪಡಿಸಿ ಮೂರು ಸಾವಿರದಷ್ಟು ವಿವಿಧ ಜಾತಿಯ ಗಿಡಗಳನ್ನು ಬೆಳೆಸಿದ್ದಾರೆ.
ಸಾಮಾನ್ಯವಾಗಿ ಹಳ್ಳಿ ಮದ್ದಿನಲ್ಲಿ  ಬಳಸುವ ಔಷಧಿ ಗಿಡಗಳು ಸದಾ ಇವರ ಮನೆ ಮುಂದೆ ಲಬ್ಯ; ಅದರಲ್ಲೂ ಅಳಿವಿನಂಚಿನಲ್ಲಿರು ಹಲವು ಗಿಡಗಳನ್ನು ಪೋಷಿಸುತ್ತಿರುವ ಭಟ್ಟರದ್ದು ವಿಶೇಷ ಸಾಧನೆಯೇ ಸರಿ.
ಇವರ ತೋಟದಲ್ಲಿ ಪುಷ್ಪ ಸಾಮ್ರಾಜ್ಯಕ್ಕೂ ಜಾಗವಿದೆ. ೨೫ ರೀತಿಯ ಬೆಟ್ಟದಾವರೆ, ಟುಡೆ ಟುಮಾರೋ ಯೆಸ್ಟರ್‌ಡೇ ಎಂಬಂತಹ ಅಪರೂಪದ ಗಿಡವಿದ್ದು ಇದರ ಹೂವು ಮೂರು ದಿನ ಮೂರು ಬಣ್ಣಗಳಲ್ಲಿ ಕಂಗಳಿಸುತ್ತದೆ. ’ಕೂವೆ’ ಎಂಬ ಗಿಡವಿದ್ದು ಐಸ್‌ಕ್ರೀಮ್ ಉತ್ಪಾದನೆಯಲ್ಲಿ ಇದರ ಬಳಕೆಯಾಗುತ್ತದೆ. ಇದಲ್ಲದೆ ಶಂಕರ ಪುಷ್ಪ, ಪಾರಿಜಾತ ಟಾರ್ಚ್‌ಜಿಂಜರ್ ಸೇರಿದಂತೆ ಹಲವಾರು ಹೂವಿನ ಗಿಡ ಇಲ್ಲಿ ಸಮೃದ್ದ.
       ಗಾರ್ಡನಿಂಗ್ ಐಟಮ್‌ಗಳಲ್ಲೂ ಒಲವಿರುವ ಇವರು ಹಲವು ವಿಧದ ಕಳ್ಳಿಗಳು, ಬೋನ್ಸಾಯ್ ಗಿಡಗಳನ್ನೂ ಪೋಷಿಸಿ ಮನೆಯ ಅಂದವನ್ನು ಮತ್ತಷ್ಟು ಮೆರುಗುಗೊಳಿಸಿದ್ದಾರೆ.
ಹಣ್ಣುಗಳ ರಾಜ ಮಾವು, ಅನಾನಾಸು, ೧೦ ವಿಧದ ನೇರಳೆ ಹಣ್ಣು, ರಾಂಬೂಟನ್, ನಕ್ಷತ್ರ ನೇರಳೆ, ಮುಸುಂಬಿ ಗಿಡ, ಸಿಹಿ ದಾರೆಹುಳಿ, ಸೇರಿದಂತೆ ಅನೇಕ ಹಣ್ಣುಗಳು ತೋಟದ ಕಳೆಯನ್ನು ಮತ್ತಷ್ಟು ಹೆಚ್ಚಿಸಿವೆ. ಜೊತೆ ಖರ್ಚಿಗೆ ಬೇಕಾಗುವಂತಹ ತರಕಾರಿ ಮನೆಯಲ್ಲೇ ಲಭ್ಯ.
       ಪರಿಸರ ಉಳಿಸುವ ಉದ್ದೇಶದಿಂದ ೫ ಎಕರೆ ಜಾಗವನ್ನು ಪೂರ್ಣವಾಗಿ ಕಾಡಿಗೆ ಮೀಸಲಿಟ್ಟಿದ್ದು, ಬೆಲೆಬಾಳುವ ಬೋಳ್‌ಪಾಲೆ, ಚಂದಳಿಕೆ, ಕುಂಟಾಲ ಸೇರಿದಂತೆ ಹಲವಾರು ಮರಗಳಿವೆ.
’ಸಮಾಜದಲ್ಲಿ ಸಾಮಾನ್ಯವಾಗಿ ಕೆಲಸಕ್ಕೆ ಕಾರ್ಮಿಕರ ಕೊರತೆ ತಲೆದೋರುತ್ತದೆ; ಆದರೆ ನಾನೆಂದೂ ಈ ಸಮಸ್ಯೆ ಅನುಭವಿಸಲಿಲ್ಲ; ಕೆಲಸಗಾರರನ್ನು ನಮ್ಮ ಸ್ನೇಹಿತರಂತೆ ಕಂಡರೆ ಯಾರೂ ದೂರ ಹೋಗಲಾರರು’ ಎಂದು ಭಟ್ಟರ ಅಭಿಪ್ರಾಯ.
ಇ       ವರ ಹವ್ಯಾಸದ ಪಟ್ಟಿಯನ್ನು ಮಾಡಹೊರಟರೆ ಸಂಖ್ಯೆ ಏರುತ್ತಲೇ ಹೋಗುತ್ತದೆ; ಭಾರತ, ಅಮೇರಿಕ, ಬಾಂಗ್ಲಾ, ಚೈನಾ, ಜಪಾನ್, ಕೆನಡಾ ಸೇರಿದಂತೆ ವಿವಿಧ ದೇಶದ ಪತ್ರಕೆಗಳು, ಸುಮಾರು ೨೦೦ ದೇಶಗಳ ಅಂಚೆ ಚೀಟಿಗಳು, ೨೦ ದೇಶದ ನಾಣ್ಯಗಳು, ವಿವಿಧ ಗಣ್ಯರ ಬಾವಚಿತ್ರಗಳನ್ನು ಸಂಗ್ರಹಿಸಿದ್ದು, ಛಾಯಾಚಿತ್ರಗಾರಿಕೆಯನ್ನು ಹವ್ಯಾಸ.
      ಅಧ್ಯಾಪಕರಾಗಿ ಮಕ್ಕಳ ಪಾಲನೆಯ ಜೊತೆಗೆ, ಉಳಿದ ಸಮಯವನ್ನು ಕೃಷಿ ಚಟುವಟಿಕೆ, ಅನೇಕ ಹವ್ಯಾಸಗಳಿಗೆ ಮೀಸಲಿಟ್ಟ ವೆಂಕಟರಮಣ ಭಟ್ ರವರು ಕೃಷಿವಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವರು.

ಸಂಪರ್ಕಿಸಬೇಕಾದವಿಳಾಸ: ವೆಂಕಟರಮಣ ಭಟ್, ಪ್ಲವರ್ ಕಾರ್ಟೇಜ್,ಅಳಿಕೆ ಗ್ರಾಮ, ಬಂಟ್ವಾಳ ತಾಲೂಕು. ದ.ಕ ಮೊಬೈಲ್: ೯೪೪೮೧೫೦೨೩೭

 

ವಿಳಾಸ:                                                         ಇತೀ ತಮ್ಮ ವಿಶ್ವಾಸಿ;
ದ್ವಿತೀಯ ಪತ್ರಿಕೋದ್ಯಮ ವಿಭಾಗ                    ನವೀನ್ ಭಟ್,ಇಳಂತಿಲ
ವಿವೇಕಾನಂದ ಕಾಲೇಜು ಪುತ್ತೂರು         ಮೊಬೈಲ್: ೯೮೪೪೬೩೮೫೪೫   
  ನೆಹರೂ ನಗರ ಪೋಸ್ಟು
  ಪುತ್ತೂರು ತಾಲೂಕು. ದ.ಕ

Comments

Popular posts from this blog