ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಇಂದಿನ ನವ ಯುಗದಲ್ಲಿ ಯುವಜನಾಂಗಕ್ಕೆ ಕನ್ನಡಕ್ಕಿಂತ ಹೆಚ್ಚಾಗಿ ಆಂಗ್ಲ ಬಾಷೆಯ ಮೇಲೇ ಪ್ರೀತಿ ಹೆಚ್ಚು. ಕನ್ನಡ ಎಂದರೆ ಎನ್ನಡ...??? ಹೇಳುವಷ್ಟು ಜನ ಬೇರೆ ರಾಜ್ಯದವರು ಕನ್ನಡ ನಾಡಲ್ಲಿ ತುಂಬುತ್ತಿದ್ದಾರೆ. ನಾವು ಬಿಡಿ ತುಂಬಾ ಉದಾರಿಗಳು.
   ನಮಗೆ ಬದುಕಲು ಕನ್ನಡದ ನೆಲ ಬೇಕು, ಕುಡಿಯಲು ಕನ್ನಡದ ನೀರು ಬೇಕು ಆದರೆ ಮಾತನಾಡಲು ಕನ್ನಡ ಬೇಡ..ಇದ್ಯಾವ ನ್ಯಾಯ ಸ್ವಾಮಿ..???
ನವೆಂಬರ್ ೧ ಬಂತೆಂದರೆ ಒಂದು ದಿನ ಕನ್ನಡ ಬಾವುಟ ಹಾರಿಸಿ, ಕಷ್ಟ ಪಟ್ಟು ಉದ್ದುದ್ದ ಕನ್ನಡ ಮಾತನಾಡಿದರೆ ಸಾಕಾಗುವುದಿಲ್ಲ ಕನ್ನಡಕ್ಕೆ ಅದರದೇ ಆದ ಸ್ಥಾನಮಾನವಿದೆ ಅದನ್ನ ಕಡೇ ಕಾಲದ ವರೆಗೂ ಉಳಿಸಬೇಕು.
ಯುವಶಕ್ತಿ ಗಿಂತ ಮಿಗಿಲಾದ ಶಕ್ತಿ ಬೇರೊಂದಿಲ್ಲ ಇಂದಿನ ಹೆಚ್ಚು ಯುವಜನಾಂಗಕ್ಕೆ ’ನಿನ್ನ ಹೆಸರೇನು..?’ ಎನ್ನುವುದಕ್ಕಿಂತ ಹೆಚ್ಚಾಗಿ ’ವಾಟ್ ಈಸ್ ಯುವರ್ ನೇಮ್..?’ಎನ್ನುವವನಿಗೆ ನಮ್ಮಲ್ಲಿ ಹೆಚ್ಚಿನ ಮರ್ಯಾದ

ಎಂದುಕೊಂಡಿದ್ದಾರೆ.
ವಿದೇಶಿಯತೆಯಲ್ಲಿಲ್ಲದ ಸಂಸ್ಕತಿ ಮತ್ತು ಮರ್ಯಾದೆ ನಮ್ಮ ಕರ್ನಾಟಕದ ಕನ್ನಡದಲ್ಲಿದೆ. ಆದರೆ ಇದರ ಅರಿವು ನಮಗಿಲ್ಲ. ನಮ್ಮ ಸಂಸ್ಕತಿಯನ್ನು ಅದೆಷ್ಟೋ ವಿದೇಶಿಯರೂ ಕಂಡು ಕೊಂಡಾಡಿದ್ದಾರೆ. ಆದರೆ ನಮಗೆ ನಮ್ಮ ಮನೆ ತುತ್ತಿಗಿಂತ ಬೇರೆ ಯವರ ಮನೆ ಮೇಲೇಕೆ ಕಣ್ಣು.
ಮಾದ್ಯಮ, ಪತ್ರಿಕೆಯ, ಸಾಹಿತಿಗಳ ಮತ್ತು ಕನ್ನಾಡಾಭಿಮಾನಿಗಳ ಒಕ್ಕೊಲಿನ ಕೊರಗಿನಿಂದ ಶಾಸ್ತ್ರೀಯ ಸ್ಥಾನಮಾನವಂತೂ ದಕ್ಕಿದೆ. ಕನ್ನಡಿಗರು ದೇಶದಾದ್ಯಂತ ಹರಡಿ ಕನ್ನಡಾಭಿಮಾನ ಮೆರೆಯುತ್ತಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ದೀಪಿಕಾ ಪಡುಕೋಣೆ, ಶಿಲ್ಪಾಶೆಟ್ಟಿ, ಸುನಿಲ್‌ಶೆಟ್ಟಿ..ಮತ್ತಿತರರು. ಕ್ರೀಡಾರಂಗದಲ್ಲಿ ಕನ್ನಡಿಗರ ಪಾಲು ಅಪಾರ. ಕ್ರೀಕೇಟಿಕಗಾರ ಅನಿಲ್ ಕುಂಬ್ಳೆ, ರಾಹುಲ್ ದ್ರಾವೀಡ್, ರಾಬಿನ್ ಉತ್ತಪ್ಪ ವಿನಯ ಕುಮಾರ್..ಮುಂತಾದವರು ಕನ್ನಡಿಗರೆಂಬುವುದು ನಮ್ಮ ಹೆಮ್ಮೆ.
ಕನ್ನಡನಾಡಿನಲ್ಲಿ ಹುಟ್ಟಿರುವುದು ನಮ್ಮ ಸೌಭಾಗ್ಯ, ಕನ್ನಡ ತಾಯ ಸೇವೆ ಮಾಡುವುದು ನಮ್ಮ ಬಾಗ್ಯವೆಂದು ತಿಳಿದು ಕನ್ನಡ ಉಳಿಸಿ ಬೆಳೆಸುವತ್ತ ಹೆಜ್ಜೆ ಹಾಕೋಣ.                                                                                                          
                                                        ಇತೀ ತಮ್ಮ ವಿಶ್ವಾಸಿ,
                                                      ನವೀನ್ ಭಟ್,ಇಳಂತಿಲ
                                                    ತೃತೀಯ ಪತ್ರಿಕೋದ್ಯಮ ವಿಭಾಗ
                                                    ವಿವೇಕಾನಂದ ಕಾಲೇಜು ಪುತ್ತೂರು

Comments

Popular posts from this blog