ಅಖಿಲಾಳ ಸಫಲ ಪಯಣ

 ಈಕೆ ಕಿಲ-ಕಿಲ ನಗುವಿನೊಡನೆ ವೇದಿಕೆಗೆ ಕಾಲಿಟ್ಟರೆ ಸಾಕು, ಪ್ರತಿಸ್ಪರ್ಧಿಗಳ ಎದೆಯಲ್ಲಿ ನಡುಕ, ಈಕೆಯ ಹಾಡಿನ ಧಾಟಿಗೆ ತಲೆದೂಗದವರೇ ಕಡಿಮೆ, ಹಾಡಿನೊಡನೆ ಮುಖದ ಭಾವನೆಯಲ್ಲೂ ಮಿಂಚು ಹರಿಸುವ ಈಕೆ  ಝೀ ಕನ್ನಡ ವಾಹಿನಿಯ ಸರಿಗಮಪ ವಿಜೇತೆ ಅಖಿಲಾ.
  ತನ್ನ ನಾಲ್ಕನೇ ವಯಸ್ಸಲ್ಲೇ ಸಂಗೀತ ಪಯಣವನ್ನು ವಿಹರಿಸಲು ಪ್ರಾರಂಭಿಸಿದ ಈಕೆಗೆ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಮಟ್ಟದ ತಳಹದಿ ಹಾಕಿದವರಂದರೆ ಶ್ರೀಮತಿ ರಾಜೇಶ್ವರೀ ರಮೇಶ್, ಜೊತೆ ಸಂಗೀತದ ಸೀನಿಯರ್ ವಿಭಾಗವನ್ನು ಶ್ರೀಮತಿ ಮಾನಸ ಪದ್ಯಾಣರ ಶಿಷ್ಯೆಯಾಗಿ ಕಲಾಕಂಪು ಬೀರುತ್ತಾಳೆ.
  ಈಕೆಯ ಜೀವನದ ಬಹುದೊಡ್ಡ ಸಾಧನೆಗೆ ಸಾಕ್ಷಿಯಾಗಿದ್ದು ಝೀ ಕನ್ನಡದ ಸರಿಗಮಪ ವೇದಿಕೆ. ಈ ವೇದಿಕೆಯಲ್ಲಿ ಎಮ್.ಡಿ ಪಲ್ಲವಿ, ಗುರುಕಿರಣ್, ರಘುದೀಕ್ಷಿತ್ ರವರಲ್ಲದೆ ಇತರೆ ಅನೇಕ ಹಿನ್ನಲೆ ಗಾಯಕರ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ಸೂಚಕವಾಗಿ ಹನ್ನೊಂದು ಬಾರಿ ’ ಬೆಸ್ಟ್ ಫರ್‌ಫಾರ್‍ಮೆನ್ಸ್’ ಅವಾರ್ಡ್ ಈಕೆಯ ಮಡಿಲಿಗೆ ಬಂದೊದಗಿತ್ತು. ಇದರೊಡನೆ ಹಿಂದಿ ವಾಹಿನಿಯಲ್ಲಿ ಹಾಡುವ ಅವಕಾಶವೂ ಕೈ ಬೀಸಿ ಕರೆದಿತ್ತು.
  ಪುತ್ತೂರು, ಉಪ್ಪಿನಂಗಡಿ,ಅಲಂಕಾರ್ ಸೇರಿದಂತೆ ರಾಜ್ಯಾಧ್ಯಂತ ಸುಮಾರು ನೂರಕ್ಕೂ ಮಿಕ್ಕಿ ಹಾಡಿನ ಸರಿಗಮಪನ ಬೀರಿದ ಈಕೆಯ ಆಸಕ್ತಿಕ್ಷೇತ್ರ ಕೇವಲ ಹಾಡುಗಾರಿಕೆಯಲ್ಲ ಇದರೊಡನೆ ಚಿತ್ರಕಲೆ, ಶ್ಲೋಕ, ಕಥೆರಚನೆ, ಅಭಿನಯ ಗೀತೆಯಲ್ಲೂ ಈಕೆಯ ಪ್ರಹರವಿದೆ.
  ಅಖಿಲಾಳ ಕಲಾ ಚಾತುರ್‍ಯತೆಯನ್ನು ಮನಗಂಡು ಹಲವು ಸಂಘ ಸಂಸ್ಥೆಗಳು ಗೌರವಿಸಿದೆ. ಅದರಲ್ಲಿ ಮುಖ್ಯವಾಗಿ ಸರಿಗಮಪ ಪ್ರಶಸ್ತಿ, ರಾಗತರಂಗ ಪ್ರಶಸ್ತಿ, ಬಾಲಪ್ರತಿಭೆ ಪ್ರಶಸ್ತಿ, ಅರಳು ಪ್ರತಿಭೆ ಪ್ರಶಸ್ತಿ, ಸುದ್ದಿಬಿಡುಗಡೆ ಪತ್ತಿಕೆಯಿಂದ ಪ್ರತಿಭಾದೀಪ ಪುರಸ್ಕಾರ, ದ್ರಾವಿಡ ಕಲಾವೇದಿಕೆಯಿಂದ ಚಿನ್ನದ ನಾಣ್ಯ ಸೇರಿದಂತೆ ಹಲವು ಸನ್ಮಾನಗಳು ಈಕೆಗೆ ಸಂದಿವೆ.
  ಪಠ್ಯೇತರ ಚಟುವಟಿಕೆಯ ಜೊತೆಗೆ ಓದಿನಲ್ಲೂ ಈಕೆಯ ಕೈ ಮೇಲು. ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂಭತ್ತನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಅಖಿಲಾ ಕಡಬ ಶಿವಳ್ಳಿ ಬ್ರಾಹ್ಮಣ ಚಿಣ್ಣರ ಮೇಳದ ಅಧ್ಯಕ್ಷೆಯೂ ಹೌದು.
  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಂಡೂರಿನಲ್ಲಿ ವಾಸಿಸುವ ಅಖಿಲಾಗೆ ತಂದೆ ಉದಯ್ ಕುಮಾರ್ ಮತ್ತು ಉಷಾ ಉದಯ್‌ರವರು ನಾಣ್ಯದ ಎರಡನೇ ಮುಖ.

 ನಿರಂತರ ಪರಿಶ್ರಮ, ಸ್ಪಷ್ಟಗುರಿ, ಆಸಕ್ತಿ ಹೊಂದಿದ್ದವರಿಗೆ ಯಾವುದೇ ಕ್ಷೇತ್ರವೂ ಕಷ್ಟಕರವಲ್ಲ  ಎಂಬುವುದಕ್ಕೆ ಗ್ರಾಮೀಣ ಪ್ರತಿಭೆ ಅಖಿಲಾ ಸ್ಪಷ್ಟ ನಿದರ್ಶನವಾಗಿದ್ದಾಳೆ.

                                                                                                   ಇತೀ ತಮ್ಮ ವಿಶ್ವಾಸಿ
                                                                                                   ನವೀನ್ ಭಟ್,ಇಳಂತಿಲ
ವಿಳಾಸ-
  ನವೀನ್ ಭಟ್ ಎಚ್
  ದ್ವಿತೀಯ ಪತ್ರ್ರಿಕೋದ್ಯಮ ವಿಭಾಗ
  ವಿವೇಕಾನಂದ ಕಾಲೇಜು ಪುತ್ತೂರು
ಮೊಬೈಲ್ ನಂ-೯೮೪೪೬೩೮೫೪೫
           

Comments

Post a Comment

Popular posts from this blog