ವೃತ್ತಿಯಲ್ಲಿ ಡಾಕ್ಟರ್ ಆದ್ರೂ ಸಿಂಗರ್...!!!

     

ಸಂಗೀತ  ಕ್ಷೇತ್ರವೇ ಹಾಗೆ, ಯಾರನ್ನು ಯಾವ ರೀತಿಯಾಗಿ ಸೆಳೆಯುತ್ತದೆ ಎಂದು ಊಹಿಸಲೂ ಅಸಾದ್ಯ; ಅಂತಹಾ ತಾಜಾ ಉದಾಹರಣೆಗೆ ಸಾಕ್ಷಿ ನಿತಿನ್ ಆಚಾರ್ಯ.
ಮೂಲತಃ ಕರಾವಳಿ ತಡಿಯವರಾದ ಇವರು ವೃತ್ತಿಯಲ್ಲಿ ವೈದ್ಯರು. ಸ್ಟೆತಸ್ಕೋಪ್ ಹಿಡಿಯುವ ಕೈ ಯಲ್ಲಿ ಮೈಕ್ ಹಿಡಿದರಂತೂ ಕಂಠದಿಂದ ಹೊರಹೊಮ್ಮುವ ಶುಶ್ರಾವ್ಯ ಹಾಡಿಗೆ ಮನಸೋಲದವರೇ ಕಡಿಮೆ. ಹಾಡುಗಾರಿಕೆಯ ಹವ್ಯಾಸ ನಿತಿನ್ ರಿಗೆ ಬಾಲ್ಯದಲ್ಲೇ ಇತ್ತು, ಆದರೆ ಹೆಚ್ಚಿನ ತಳಹದಿಗೆಂದು ಗುರುಗಳನ್ನು ಅರಸಿ ಹೋದವರಲ್ಲ; ತನ್ನ ಸ್ವಂತ ಅಬಿರುಚಿಯಿಂದಲೇ ಕಲಿಯುತ್ತಿದ್ದ ನಿತಿನ್ ಇಂದು ರಾಜ್ಯಾದ್ಯಂತ ಪರಿಚಿತ.
ನಿತಿನ್ ರವರ ಜೀವನ ಟರ್ನಿಂಗ್ ಪಾಯಿಂಟ್ ಎಂದರೆ ಈ ಟಿ.ವಿ ವಾಹಿನಿಯ ಎದೆ ತುಂಬಿ ಹಾಡುವೆನು ಸೀಸನ್-೧ ಕಾರ್ಯಕ್ರಮ. ಗುರುಗಳ ಅಲಬ್ಯತೆಯ ನಡುವೆಯೂ ಕ್ವಾರ್ಟರ್ ಪೈನಲ್ ವರೆಗೂ ಸ್ಪರ್ದಿಸಿದ ಹೆಗ್ಗಳಿಕೆ ಇವರದ್ದು; ಜೊತೆಗೆ ಇವರ ಕಂಠಕ್ಕೆ ಮನಸೋತು ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರು ಮೆಗಾಪೈನಲ್ ಸ್ಪರ್ದೆಯಲ್ಲೂ  ಹಾಡುವ ಅವಕಾಶ ದೊರಕಿಸಿದರು ಎಂದು ಅಂದಿನ ದಿನವನ್ನು ನೆನಹುತ್ತಾರೆ ನಿತಿನ್.
ಸುವರ್ಣ ವಾಹಿನಿಯ ಸ್ಟಾರ್ ಸಿಂಗರ್ ಸೀಸನ್-೧ ಕ್ಕೂ ಆಯ್ಕೆಯಾದ ಇವರು ಟಾಪ್ ೨೦ ಸ್ಪರ್ದಿಯಲ್ಲಿ ಗುರುತಿಸಿದರು; ಅಲ್ಲದೆ ಗುರುಕಿರಣ್, ನಂದಿತಾ, ಸೇರಿದಂತೆ ಹಲವರ ಟಿಪ್ಸ್ ಕೂಡಾ ಇವರ ಮುಂದಿನ ಹೆಜ್ಜೆಗೆ ಸಹಕಾರಿಯಾಯಿತಂತೆ.
ನಿತಿನ್‌ರ ಸಂಗೀತ ಪಯಣ ಇಷ್ಟಕ್ಕೆ ಕೊನೆಗೊಂಡಿಲ್ಲ, ಗರುಡಾ ಮಾಲ್ ಮತ್ತು ಟಿ.ವಿ೯ ರವರ ಆಶ್ರಯದಲ್ಲಿ ನಡೆದ ’ವಾಯ್ಸ್ ಆಫ್ ಬೆಂಗಳೂರು’ ಸೀಸನ್-೪ ಗೆ ಆಯ್ಕೆಯಾಗಿ ಟಾಪ್-೫ ಸ್ಪರ್ದಿಗೆ ತಾವು ಆಯ್ಕೆಯಾಗಿದ್ದರು. ಅಲ್ಲದೆ ೨೦೧೧-೧೨ ರಲ್ಲಿನ ನಡೆಸಿದ ’ವಾಯ್ಸ್ ಆಫ್ ಬೆಂಗಳೂರು’ ಸೀಸನ್-೫ ರ ಪೈನಲ್ ವಿಜೇರಾಗಿ ಹೊರಹೊಮ್ಮಿದರು. ಈ ಸ್ಪರ್ದೆಯಲ್ಲಿ ಇವರ ಪಯಣ ಅಷ್ಟೇನೂ ಸುಲಭವಾಗಿರಲಿಲ್ಲ; ರಾಜ್ಯಾದ್ಯಂತ ಬಂದ ಸುಮಾರು ೬೦೦೦ ಸ್ಪರ್ದಿಗಳ ಪೈಕಿ ತಾನೂ ಆಯ್ಕೆಯಾಗಿ ವಿಜಯಮಾಲೆಯನ್ನು ಮುಡಿಗೇರಿಸಿಕೊಂಡರು.
ಪೈನಲ್ ಸ್ಪರ್ದೆಗೆ ಆಗಮಿಸಿದ್ದ ಹಿಂದಿ ಚಲನಚಿತ್ರ ಸಂಗೀತ ನಿರ್ದೇಶಕ ಅನು ಮಲಿಕ್‌ರಿಂದ ಟ್ರೋಪಿ ಮತ್ತು ಮಾರುತೀ ಸ್ಟಾರ್ ಕಾರು ಸ್ವೀಕರಿಸಿದ ಘಳಿಗೆಯನ್ನು ನಾನೆಂದೂ ಮರೆಯುವುದಿಲ್ಲ ಎಂದು ಸಸವಿಗಳಿಗೆಯನ್ನು ನಿತಿನ್ ರವರು ನೆನಪಿಸುತ್ತಾರೆ.
ಈ ಪಯಣದಲ್ಲಿ ಗಾಯಕ ರಾಜೇಶ್ ಕೃಷನ್ ಸೇರಿದಂತೆ ಹಂಸಲೇಖ,ವಿ.ಹರಿಕೃಷ್ಣ,ಮನೋಹರ್,ಜಯಂತ್ ಕಾಯ್ಕಿಣಿ,ಅರ್ಜುನ್‌ಜನ್ಯ ಸೇರಿದಂತೆ ಹೆಸರಾಂತ ದಿಗ್ಗಜರು ಮನಸ್ಪೂರ್ತಿ ಹರಸಿ ತಮ್ಮ ಚಲನಚಿತ್ರಗಳಲ್ಲೂ ಅವಕಾಶ ನೀಡುವ ಬರವಸೆಯನ್ನು ನೀಡಿದರು.
ಕರಾವಳಿಯಲ್ಲೂ ಇವರ ಸ್ಪರ್ದೆಗೆ ಕಡಿಮೆ ಇಲ್ಲ. ಮಂಗಳೂರು ಐಡೆಲ್ ಸ್ಪರ್ದೆ, ಜಿ.ಸಿ ಆಯೋಜಿಸಿದ ಮೇರೀ ಆವಾಜ್ ಸ್ಪರ್ದೆ, ಕುಹೂ-ಕುಹೂ, ಪಣಂಬೂರು ಬೀಚ್ ಪೆಸ್ಟ್, ಮಂಗಳೂರು ಯುವಜನೋತ್ಸವ ಸೇರಿದಂತೆ ಹತ್ತಲವು ವೇದಿಕೆಯಲ್ಲೂ ಮಿಂಚುಹರಿಸಿದ್ದಾರೆ.
ಇಂತಹಾ ಕಠಿಣ ಹಾಡೂ ಇವರಿಗೆ ಸಲೀಸು, ಕ್ಲಾಸಿಕಲ್, ಹಿಂದೂಸ್ತಾನಿ, ರಾಕ್ ಮ್ಯೂಸಿಕ್ ಸೇರಿದಂತೆ ಎಂತಹಾ ಹಾಡನ್ನು ಹಾಡುವ ಚಕ್ಷತೆ ಇವರಿಗಿದ್ದು ಕೀ ಬೋರ್ಡ್ ನುಡಿಸುವಿಕೆಯಲ್ಲೂ ನಿಪುಣರು.
ಸಂಗೀತ ಪ್ರಪಂಚದಲ್ಲಿ ಇಷ್ಟೆಲ್ಲಾ ಪಳಗಿದ ಇವರ ವೈದ್ಯ ವೃತ್ತಿಗೆ ಎಂದೂ ತೊಡಕಾಗಿಲ್ಲವಂತೆ. ಮಂಗಳೂರಿನಲ್ಲಿ ಮೀರಾ ಡೆಂಟಲ್ ಕ್ಲೀನಿಕ್ ನಡೆಸುತ್ತಿರುವ ನಿತಿನ್ ಆಚಾರ್ಯರವರು ಕೋಟೆಕ್ಕಾರ್‌ನ ರಾಘವ್ ಆಚಾರ್ಯ ಮತ್ತು ಮೀರಾ ದಂಪತಿಯರ ಪುತ್ರ.
                                                                                                        

                                                                                         ಇತೀ ತಮ್ಮ ವಿಶ್ವಾಸಿ;
                                                                                      ನವೀನ್ ಭಟ್,ಇಳಂತಿಲ
                                                                              ವಿವೇಕಾನಂದ ಕಾಲೇಜು ಪುತ್ತೂರು
   ವಿಳಾಸ:-
  ನವೀನ್ ಭಟ್ .ಎಚ್
  ದ್ವಿತೀಯ ಪತ್ರಿಕೋದ್ಯಮ ವಿಭಾಗ
 ವಿವೇಕಾನಂದ ಕಾಲೇಜು ಪುತ್ತೂರು
   ನೆಹರೂನಗರ ಪೋಸ್ಟ್
  ಪುತ್ತೂರು ತಾಲೂಕು.ದ.ಕ
 ಮೊಬೈಲ್ ನಂ-೯೮೪೪೬೩೮೫೪೫

                                                 

                                                

Comments

Popular posts from this blog