'ಬರ್ಪಿ' ಸವಿಯೋಕೆ ರೆಡಿ

ಅಚಾನಕ್ ಆಗಿ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟೋರು ದೂದ್ ಪೇಡ ದಿಗಂತ್. ಕೋಡಿ ರಾಮಂಚಂದ್ರ ನಿರ್ದೇಶನದ ಮಿಸ್ ಕ್ಯಾಲಿಪೋರ್ನಿಯಾ ಚಿತ್ರದ ಮುಖೇನ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ದಿಗಂತ್‌ಗೆ ಮೊದಲ ಚಿತ್ರ ಹೇಳಿಕೊಳ್ಳೋ ಯಶಸ್ಸು ಸಿಗಲಿಲ್ಲ. ಹಾಂಗತ ದಿಗಂತ್ ಕೈ ಕಟ್ಟಿ ಕೂತವರೂ ಅಲ್ಲ. ಅವಕಾಶಗಳಿಲ್ಲದ ದಿನಗಳಲ್ಲಿ ಮಾಡಲಿಂಗ್‌ನತ್ತ ಆಸಕ್ತಿ ಬೆಳೆಸಿ ಕೆಲವು ಜಾಹಿರಾತಿನಲ್ಲಿ ಕಾಣಿಸಿಕೊಂಡರು. ಜೊತೆಗೆ ಹಲವು ಸ್ಟೇಜ್‌ಗಳಲ್ಲಿ ರ್‍ಯಾಂಪ್‌ವಾಕ್ ನಡೆಸಿದರು. ಹೀಗಿರುವಾಗ ಯೋಗರಾಜ್ ಭಟ್ ನಿರ್ದೇಶನದ ಮುಂಗಾರುಮಳೆ ಚಲನಚಿತ್ರದಲ್ಲಿ ಅವಕಾಶ ಸಿಕ್ಕಿತು. ಇದು ದಿಗಂತ್‌ರ ಸೆಕೆಂಡ್ ಇನ್ನಿಂಗ್ಸ್‌ಗೆ ಮುನ್ನುಡಿಯಾಯಿತು.
ನಂತರದ ದಿನಗಳಲ್ಲಿ ಲೈಫ್ ಇಷ್ಟೇನೆ, ಪಾರಿಜಾತ, ಗಾಳಿಪಟ, ಮಸ್ತ್ ಮಜಾ ಮಾಡಿ, ಪಂಚರಂಗಿ, ಜಾಲಿಬಾಯ್, ಬಿಸಿಲೆ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದರು. ಇದಲ್ಲದೆ ತುಳು ಭಾಷೆಯಲ್ಲಿ ಕಡಲಮಗೆ ಎಂಬ ಚಿತ್ರವೂ ಬಿಡುಗಡೆಯಾಗಿತ್ತು. ಸದ್ಯ ’ಬರ್ಪಿ’ ಚಿತ್ರ ಸವಿಯೋಕೆ ರೆಡಿಯಾಗಿದೆ.
ತಾನು ಮತ್ತು ತನ್ನ ಭವಿಷ್ಯದ ಬಗ್ಗೆ ದಿಗಂತ್ ಹೇಳೋದು ಹೀಗೆ:

ಒಳ್ಳೆಯ ಲುಕ್ ಮತ್ತು ಪ್ರತಿಭೆ ಇರೋ ದಿಗಂತ್ ಸಿನಿಮಾವನ್ನು ಆಯ್ಕೆ ಮಾಡೋದರಲ್ಲಿ ಎಡವುತ್ತಾರಾ?
ಖಂಡಿತಾ ಇಲ್ಲ. ಕೆಳೆದ ಕೆಲವು ಸಿನಿಮಾಕ್ಕೆ ನಿರೀಕ್ಷೆಗೆ ತಕ್ಕಂತೆ ಯಶಸ್ಸು ಸಿಗಲಿಲ್ಲ. ಸದ್ಯ ನಟ ದರ್ಶನ್ ಅವರ ಬ್ಯಾನರ್‌ನಲ್ಲಿ ’ಒಂದೂರಲ್ಲಿ ಒಬ್ಬ ರಾಜ’ ಎಂಬ ಹೊಸ ಚಿತ್ರ ಮಾಡುತ್ತಿದ್ದೇನೆ.
ದಿಗಂತ್ ಅವರಿಗೆ ಹುಡುಗೀರ ಪ್ಯಾನ್‌ಫೊಲೋ ಜಾಸ್ತಿ. ಹೀಗಿದ್ದಾಗ ನಿಮಗೆ ಯಾರಲ್ಲಾದರೂ ಕ್ರಶ್ ಆಗಿದ್ದಿದ್ಯಾ?
ಹುಡುಗರಿಗೆ ಮಾಮೂಲಿ ಆಗ್ತಾ ಇರುತ್ತೆ ... ನಾನು ಕಾಲೇಜಲ್ಲಿದ್ದಾಗ ಮೂರು ನಾಲ್ಕು ಹುಡುಗೀರು ’ಐ ಲವ್ ಯು’ ಎಂದಿದ್ರು. ಆದರೆ ನಾನು ಇಲ್ಲಿ ವರೆಗೆ ಹೇಳೋ ದೈರ್ಯ ಮಾಡಿಲ್ಲ.
ನಿಮ್ಮ ಪ್ಲಸ್ ಪಾಯಿಂಟ್ ಮತ್ತು ಮೈನಸ್ ಪಾಯಿಂಟ್ ಏನು?
ನನ್ನ ಲುಕ್ ಕನ್ನಡ ಮಾತನಾಡೋ ಶೈಲಿ ಪ್ಲಸ್ ಪಾಯಿಂಟ್. ಎಲ್ಲಾ ಚಿತ್ರಗಳಲ್ಲಿ ಹ್ಯಾರ್ ಸ್ಟೈಲ್ ಒಂದೇ ರೀತಿ ಇರೋದು ಮೈನಸ್ ಪಾಯಿಂಟ್ ಅಂತ ಅನೇಕರು ಹೇಳ್ತಾರೆ.
ಅನ್ಯ ಭಾಷೆಯಿಂದ ಆಫರ್ ಇದೆಯಾ?
ಈ ಹಿಂದೆ ನಾನು ಹಿಂದಿ ಚಿತ್ರ ಮಾಡಬೇಕಿತ್ತು. ಆದರೆ ಕನ್ನಡಲ್ಲಿ ಡೇಟ್ ಕ್ಲಾಶ್ ಆದ್ದರಿಂದ ಈಡೇರಲಿಲ್ಲ. ಮುಂದೆ ಬಾಲಿವುಡ್‌ಗೂ ಕಾಲಿಡೋ ಆಸೆ ಇದೆ.
ಈ ವರ್ಷಕ್ಕೆ ಯಾವೆಲ್ಲಾ ಚಿತ್ರ ಕೈಯಲ್ಲಿದೆ?
ಅರುಂದತಿ ಚಿತ್ರ ಖ್ಯಾತಿಯ ಕೋಡಿ ರಾಮಕೃಷ್ಣ ನಿರ್ದೇಶನದ ನಾನು ಮತ್ತು ರಮ್ಯಾ ಅಭಿನಯದ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಿದ್ದೇನೆ. ಅಲ್ಲದೆ ಕೃತಿ ಅಭಿನಯದ ಮಿಂಚಾಗಿ ನೀನು ಬರಲು ಚಿತ್ರ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುತ್ತದೆ. ನಂತರ ಒಂದೂರಲ್ಲಿ ಒಬ್ಬ ರಾಜ ಚಿತ್ರ ಬಿಡುಗಡೆಯಾಗಲಿದೆ.
                                                       ಇತೀ ತಮ್ಮ ವಿಶ್ವಾಸಿ,
                                                      ನವೀನ್ ಭಟ್,ಇಳಂತಿಲ
                                                     ಎಸ್.ಡಿ.ಎಂ ಕಾಲೇಜು ಉಜಿರೆ

Comments

Popular posts from this blog