ಜಪಾನ್‌ನಲ್ಲಿ  ಭಾರತದ ಪತಾಕೆ ಏರಿಸಿದ ಕರಾವಳಿ ಬೆಡಗಿ 
       

                      ಈಕೆ ಪಕ್ಕಾ ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಪ್ರತಿಭೆ; ಸಾಧಿಸಬೇಕೆಂಬ ಹಂಬಲವಿದ್ದರೆ ಯಾವ ಕ್ಷೇತ್ರವೂ ಸವಾಲಲ್ಲ, ಎಂದು ಜಪಾನ್ ನಲ್ಲಿ ನಡೆದ ಪವರ್‌ಲಿಪ್ಟಿಂಗ್ ಸ್ಪರ್ದೆಯಲ್ಲಿ ನೇಹಾಳಿಂದ ನಿರೂಪಿತವಾಗಿದೆ.
ಪುತ್ತೂರು ತಾಲೂಕಿನ ಕುಂಬ್ರದ ನಾರಾಯಣ್ ಗೌಡ ಮತ್ತು ಉಷಾನಾರಾಯಣ್ ದಂಪತಿಯರ ಪುತ್ರಿಯಾದ  ನೇಹಾಳಿಗೆ ವಿದ್ಯಾರ್ಥಿದೆಸೆಯಿಂದಲೇ ಕ್ರೀಡೆಯತ್ತ ಎಲ್ಲಿಲ್ಲದ ಒಲವು, ಶಾಲಾವಲಯದ ಯಾವುದೇ ಕ್ರೀಡೆಯಲ್ಲೂ ಈಕೆಗೇ ಪ್ರಥಮ. ತನ್ನ ಹತ್ತನೇ ವಯಸ್ಸಿನಲ್ಲಿ ಶಾರ್ಟ್‌ಪುಟ್ ಮತ್ತು ಡಿಸ್ಕಸ್ ಥ್ರೋದತ್ತ ಈಕೆಯ ಚಿತ್ತ ಬಿದ್ದುತು. ಇದಕ್ಕೆ ಪೂರಕವಾಗಿ ಗುರುಗಳಾದ ದೀಕ್ಷತ್,ಬಾಸ್ಕರ್,ಮತ್ತು ದಾಮೋದರ್‌ರವರ ಗರಡಿಯಲ್ಲಿ ಪಳಗಿದ ಈ ಪ್ರತಿಭೆ ತರಬೇತಿ ಪಡೆದ ಎರಡೇ ವರ್ಷದಲ್ಲಿ ಹೊರ ರಾಜ್ಯಗಳಾದ ಮದ್ಯಪ್ರದೇಶದ ಉಜೈನಿ,ಕೇರಳಾದ ಎರ್ನಾಕುಲಂ,ಆಂದ್ರಪ್ರದೇಶದ            ವಿಜಯವಾಡ,ಒರಿಸ್ಸಾದ ಭುವನೇಶ್ವರ ದಲ್ಲಿ ನಡೆದ ಶಾರ್ಟ್‌ಪುಟ್ ಮತ್ತು ಡಿಸ್ಕಸ್ ಥ್ರೋ ರಾಷ್ಟ್ರೀಯ ಮಟ್ಟದ ಪಂದ್ಯದಲ್ಲಿ ಸತತ ನಾಲ್ಕು ಬಾರಿ ಸ್ಪರ್ದಿಸಿ ಚಿನ್ನದ ಪದಕ ಪಡೆದ ಪ್ರತಿಭಾನ್ವಿತೆ ಈಕೆ.
     ಕ್ರೀಡೆಯತ್ತ ಒಲವಿದ್ದರೆ ಓದಿನಲ್ಲಿ ಹಿಂದೆಬೀಳುತ್ತಾರೆ ಎಂಬ ಊಹೆ ಹಲವರಲ್ಲಿದೆ, ಆದಕ್ಕೆ ತದ್ವಿರುದ್ದ ಎಂಬಂತೆ ಎಸ್.ಎಸ್.ಎಲ್.ಸಿ ಯಲ್ಲಿ ೯೨% ಅಂಕ ಪಡೆದು ವಿದ್ಯೆಯಲ್ಲೂ ಸೈ ಎಂದು ನಿರೂಪಿಸಿದಳು.
         ಕ್ರೀಡಾಕ್ಷೇತ್ರದಲ್ಲಿ ಈಕೆಯ ಟ್ರಾಕ್ ಚೇಂಜ್ ಆದದ್ದು ಪದವಿ ಹಂತದಲ್ಲಿ....!!! ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ

ಅಬ್ಯಸಿಸುತ್ತಿರುವ ಸಂದರ್ಭದಲ್ಲಿ ಕ್ರೀಡೆಯಲ್ಲಿ ಇವಳ ಒಲವನ್ನು ಗಮನಿಸಿದ ತರಬೇತುದಾರರಾದ ರಾಜೇಂದ್ರ ಪ್ರಸಾದ್ ರವರು ಪವರ್ ಲಿಪ್ಟಿಂಗ್ ಮಾಡಲು ಸೂಚಿಸಿದರು ಅಲ್ಲದೆ  ಸೂಕ್ತದಾಯಕ ಮಾರ್ಗದರ್ಶನವನ್ನೂ  ನೀಡಿದರು; ಇದರ ಫಲವಾಗಿ ಹಿಂದಿನ ವರ್ಷ ರಾಷ್ಟ್ರೀಯ ಮಟ್ಟದ ಬಾರಎತ್ತುವಿಕೆ ಸ್ಪರ್ದೆಗೆ ಆಯ್ಕೆಯಾದಳು.
ಅದೇ ವರ್ಷ ತಮಿಳುನಾಡಿನ ತಂಜಾವೂರು,ಸೇಲಂ,ಕೊಯಮುತ್ತೂರು,ಕೇರಳಾದ ಅಲೆಪ್ಪಿ, ಮಹಾರಾಷ್ಟ್ರದ ನಾಗಪುರ ಮತ್ತು ಛತ್ತಿಸ್‌ಘಡದ ಭಿಲಾಯಿಯಲ್ಲಿ ನಡೆದ ಸ್ಪರ್ದೆಯಲ್ಲಿ ಗಮನಿಸಿ ಐದು ಚಿನ್ನ,ಒಂದು ಬೆಳ್ಳಿ ಮತ್ತು ಕಂಚಿನ ಪದಕ ಪಡೆದ ಹೆಗ್ಗಳಿಕೆ ಈ ಅನನ್ಯ ಪ್ರತಿಭೆಗಿದೆ.
                                                                                                                                                                    ಡಿಸೆಂಬರ್ ೫ ರಿಂದ ೯ ರ ವರೆಗೆ ಜಪಾನ್‌ನ ಕೋಬ್ ಸಿಟಿಯಲ್ಲಿ ನಡೆದ ಏಷಿಯನ್ ಪವರ್ ಲಿಪ್ಟಿಂಗ್ ಚಾಂಪಿಯನ್‌ಷಿಫ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ  ತ್ರಿತೀಯ ಸ್ಥಾನ ಪಡೆದ ಕೀರ್ತಿ ಈ ಪುತ್ತೂರ ಬೆಡಗಿಯದ್ದು.
೨೦೧೧ರಲ್ಲಿ ಸುರತ್ಕಲ್‌ನಲ್ಲಿ ಲಯನ್ಸ್ ಕ್ಲಬ್ ಆಯೋಜಿಸಿದ  ಪವರ್‌ಲಿಪ್ಟಿಂಗ್ ಸ್ಪರ್ದೆಯಲ್ಲಿ ಮೂರು ಚಿನ್ನದ ಪದಕ ಮತ್ತು ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ನಡೆದ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ೮೪ ಕ್ಯಾಟಗೆರಿ ಪವರ್‌ಲಿಪ್ಟಿಂಗ್ ನಲ್ಲಿ ಮೂರು ಚಿನ್ನ ಅಲ್ಲದೆ ೪೫೦ ಕೆ.ಜಿ ಲಿಪ್ಟ್ ಮಾಡಿ ಮಗದೊಂದು ಚಿನ್ನವನ್ನು ತನ್ನ ತೆಕ್ಕೆಗೆ ಹಾಕಿಕೊಂದಳು.
ಪ್ರಸ್ತುತ ಉಜಿರೆಯ ಎಸ್.ಡಿ.ಎಂ ಕಾಲೇಜ್‌ನಲ್ಲಿ ಪ್ರಥಮ ಬಿ.ಕಾಂ ಪಧವೀದರೆಯಾಗಿರುವ ನೇಹಾಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಬೇಕೆಂಬ ಆಸೆ.
                                                                                                     ಇತೀ ತಮ್ಮ ವಿಶ್ವಾಸಿ ,    
                                                                                                  ನವೀನ್ ಭಟ್,ಇಳಂತಿಲ
                                                                                      ವಿವೇಕಾನಂದ ಕಾಲೇಜು ಪುತ್ತೂರು ದ.ಕ
ವಿಳಾಸ-
  ನವೀನ್ ಭಟ್ .ಎಚ್
  ದ್ವಿತೀಯ ಪತ್ರಿಕೋದ್ಯಮ ವಿಭಾಗ
 ವಿವೇಕಾನಂದ ಕಾಲೇಜು ಪುತ್ತೂರು
   ನೆಹರೂನಗರ ಪೋಸ್ಟ್
  ಪುತ್ತೂರು ತಾಲೂಕು.ದ.ಕ
 ಮೊಬೈಲ್ ನಂ-೯೮೪೪೬೩೮೫೪೫


 

Comments

Popular posts from this blog